images-18.jpeg
Spread the love

ಕುಂದಾಪುರ: ದಿನಾಂಕ :08-04-2026 (ಹಾಯ್ ಉಡುಪಿ ನ್ಯೂಸ್) ಶಂಕರನಾರಾಯಣ ಗ್ರಾಮ ಬೆದ್ರಕಟ್ಟೆ ಕಾಲೋನಿ ನಿವಾಸಿ ಶ್ರೀಮತಿ ರಮ್ಯಾ (28) ಇವರ ತಂಗಿ ಶಶಿಕಲಾ (20) ರವರು ಕುಂದಾಪುರ ಸಾಯಿ ಆಸ್ಪತ್ರೆಯಲ್ಲಿ ಕ್ಲೀನಿಂಗ್ ಕೆಲಸ ಮಾಡಿಕೊಂಡಿರುತ್ತಾರೆ.

ಶಶಿಕಲಾ ಸುಮಾರು ಒಂದು ವರ್ಷದ ಹಿಂದೆ ಮಂಜುನಾಥ ಎಂಬವನನ್ನು ಪ್ರೀತಿಸುತ್ತಿರುವ ವಿಚಾರ ರಮ್ಯಾ ರವರಿಗೆ ಹಾಗೂ ಅವರ ಮನೆಯವರಿಗೆ ತಿಳಿದಿರುತ್ತದೆ. ದಿನಾಂಕ 03-04-2026 ರಂದು ರಮ್ಯಾ ರವರ ತಂಗಿ ಕಾಣೆಯಾಗಿರುವ ವಿಚಾರ ರಮ್ಯಾ ರವರಿಗೆ ತಿಳಿದು ಅವರು ತಲ್ಲೂರಿಗೆ ಬಂದು ಮನೆಯವರೊಂದಿಗೆ ಹುಡುಕಾಡಿದಲ್ಲಿ ರಮ್ಯಾ ರವರ ತಂಗಿಯ ಮೃತ ದೇಹ ಅವರ ಮನೆಯ ಹತ್ತಿರದ ಬಾವಿಯ ನೀರಿನಲ್ಲಿ ರಾತ್ರಿ  ಕಂಡು ಬಂದಿದ್ದು ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಯು ಡಿ ಆರ್ ಪ್ರಕರಣ ದಾಖಲಾಗಿದೆ.

ರಮ್ಯಾ ರವರ ತಂಗಿ ಮಂಜುನಾಥ (19)ಎಂಬವನನ್ನು ಪ್ರೀತಿಸುತ್ತಿದ್ದು ಆತನು ಅವಳಲ್ಲಿ ಹಣ ಹೊಂದಿಸಿ ಕೊಡುವಂತೆ ಪೀಡಿಸುತ್ತಿದ್ದು ಅದಕ್ಕೆ ಆಕೆ ನನ್ನಲ್ಲಿ ಹಣ ಇಲ್ಲ ಎಂದು ಹೇಳಿದಕ್ಕೆ ಮಂಜುನಾಥನು ರಮ್ಯಾ ರವರ ತಂಗಿಯಲ್ಲಿ ಹಣ ಹೊಂದಿಸಲು ಆಗದಿದ್ದಲ್ಲಿ ನೀನು ನನಗೆ ಬೇಡ ನೀನು ಎಲ್ಲಿಯಾದರೂ ಬಿದ್ದು ಸತ್ತು ಹೋಗು ಮುಂದೆ ನಾನು ನಿನ್ನೊಂದಿಗೆ ಮಾತನಾಡುವುದಿಲ್ಲ ಎಂದು ಹೇಳಿ ಆಕೆಗೆ ಸಾಯುವಂತೆ ಪ್ರಚೋದನೆ ನೀಡಿದ್ದರಿಂದಲೇ ಆಕೆಯು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ರಮ್ಯಾ ಅವರು ತಿಳಿಸಿದ್ದಾರೆ.

ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ  ಕಲಂ: 108 BNS ರಂತೆ ಪ್ರಕರಣ ದಾಖಲಾಗಿದೆ.

error: No Copying!