ಬೈಂದೂರು: ದಿನಾಂಕ :07-04-2026(ಹಾಯ್ ಉಡುಪಿ ನ್ಯೂಸ್) ಕರಾವಳಿ ಸಾಂಪ್ರದಾಯಿಕ ಮೀನುಗಾರರ ಸಹಕಾರ ಸಂಘ (ನಿ) ದಲ್ಲಿ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಇಬ್ಬರು ವ್ಯಕ್ತಿಗಳು ಸಂಘಕ್ಕೆ 81ಲಕ್ಷ ರೂಪಾಯಿ ವಂಚಿಸಿದ್ದಾರೆಂದು ಶ್ರೀನಿವಾಸ ಕೆ (35) ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.
ಕರಾವಳಿ ಸಾಂಪ್ರದಾಯಿಕ ಮೀನುಗಾರರ ಸಹಕಾರ ಸಂಘ ( ನಿ ) ಉಪ್ಪುಂದ ಇದರ ಈಗಿನ ಪ್ರಭಾರ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀನಿವಾಸ ಕೆ(35) ಎಂಬವರಾಗಿದ್ದು ಈ ಸಂಸ್ಥೆಯಲ್ಲಿ ಈ ಹಿಂದೆ ಮುಖ್ಯಕಾರ್ಯ ನಿರ್ವಾಹಣಾಧಿಕಾರಿಯಾಗಿದ್ದ ಆರೋಪಿ 1.ಸುಭಾಶ್ಚಂದ್ರ (39),ಪೂಜಾರಿ ಮನೆ, ನಾವುಂದ ಗ್ರಾಮ ಬೈಂದೂರು ಮತ್ತು ಪ್ರಧಾನ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸಿದ್ದ 2. ದೀಪಕ್ ಕುಮಾರ್ (35), ಅನುಗ್ರಹ ಮರವಂತೆ ಗ್ರಾಮ ಇವರು ಇಬ್ಬರು ಸೇರಿಕೊಂಡು ತಮ್ಮ ಹುದ್ದೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ.
ಇವರು 2023-2024 ನೇ ಸಾಲಿನಲ್ಲಿ ಒಟ್ಟು 80,91,996/- ಮೊತ್ತದ ಹಣವನ್ನು ತಮ್ಮ ಸ್ವಂತಕ್ಕೆ ದುರುಪಯೋಗಪಡಿಸಿಕೊಂಡು ಸಂಘಕ್ಕೆ ಮೋಸ ಮಾಡಿ ವಂಚಿಸಿರುವುದು 2023- 2024 ರ ಸಾಲಿನ ಲೆಕ್ಕ ಪರಿಶೋಧನಾವರದಿಯಲ್ಲಿ ಸಂಘದ ಗಮನಕ್ಕೆ ಬಂದಿದೆ ಎಂದು ಶ್ರೀನಿವಾಸ ಕೆ ಅವರು ನೀಡಿದ ಮಾನ್ಯ ನ್ಯಾಯಾಲಯದ ಖಾಸಗಿ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಕಲಂ: 314, 316(1), 316(4), 318(1), 318(2), 318(3), 319(2), 320, 321, 322, 335, 336(1), 336(2), 336(3), 344 BNS ರಂತೆ ಪ್ರಕರಣ ದಾಖಲಾಗಿದೆ.
