ಕಾಪು: ದಿನಾಂಕ :12-04-2026( ಹಾಯ್ ಉಡುಪಿ ನ್ಯೂಸ್) ಗಂಡ ಹಾಗೂ ಗಂಡನ ಮನೆಯವರು ಹೆಚ್ಚಿನ ವರದಕ್ಷಿಣೆ ಹಣಕ್ಕಾಗಿ ಬೇಡಿಕೆ ಇಟ್ಟು ಮನೆಯಿಂದ ಹೊರ ಹಾಕಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ನೊಂದ ಮಹಿಳೆ ಶಬ್ರೀನ (25) ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ .
ಕಾಪು ,ನಡ್ಸಾಲು ಗ್ರಾಮದ ನಿವಾಸಿ ಶಬ್ರೀನ ಎಂಬವರಿಗೆ 2024ನೇ ಮೇ ತಿಂಗಳಿನಲ್ಲಿ ಕಾಪು ತಾಲೂಕು ಮೂಡಬೆಟ್ಟು ಗ್ರಾಮದ ಸರಕಾರಿಗುಡ್ಡೆ ನಿವಾಸಿ ಸಾಬನ್ ಸಾಹೇಬ್ ರವರ ಮಗ ಯಾಸೀರ್ ಸಾಬನ್ ಅಲಿ ಎಂಬವರೊಂದಿಗೆ ವಿವಾಹವಾಗಿದ್ದು, ಮದುವೆಯಾಗಿ ನಂತರ ಶಬ್ರೀನ ರವರು ತನ್ನ ಗಂಡನ ಮನೆಯಲ್ಲಿರುವ ಸಮಯದಲ್ಲಿ ಯಾಸೀರ್ ಸಾಬನ್ ಅಲಿಯು ತನ್ನ ತಂದೆ ಸಾಬನ್ ಸಾಹೇಬ್ ಹಾಗೂ ತಾಯಿ ಅವ್ವಮ್ಮ ರವರೊಂದಿಗೆ ಸೇರಿ ಶಬ್ರೀನ ರವರಿಗೆ ಮಾನಸಿಕ ಕಿರುಕುಳವನ್ನು ನೀಡುತ್ತಿದ್ದು, ಆ ಸಮಯದಲ್ಲಿ ಯಾಸೀರ್ ಸಾಬನ್ ಅಲಿಯು ಶಬ್ರೀನ ರಿಗೆ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆಯನ್ನು ಹಾಕಿ, ಕೈಯಿಂದ ಹಲ್ಲೆ ಮಾಡಿರುತ್ತಾರೆ.
ಅಲ್ಲದೇ ಯಾಸೀರ್ ಸಾಬನ್ ಅಲಿಯ ತಾಯಿ ಅವ್ವಮ್ಮ ರವರೂ ಶಬ್ರೀನರನ್ನು ಅವಾಚ್ಯ ಶಬ್ದಗಳಿಂದ ಬೈದು ನಿಂದಿಸುತ್ತಿದ್ದು, ಗಂಡನ ಮನೆಯವರೆಲ್ಲ ಒಟ್ಟು ಸೇರಿ ಶಬ್ರೀನರನ್ನು ಹೊಡೆದು 5 ½ ತಿಂಗಳ ಮಗುವಿನೊಂದಿಗೆ ಮನೆಯಿಂದ ಹೊರಗೆ ಹಾಕಿ ಪಡುಬಿದ್ರಿ ಮಾರ್ಗ ಮದ್ಯದಲ್ಲಿ ಬಿಟ್ಟುಹೋಗಿರುತ್ತಾರೆ. ಈ ಬಗ್ಗೆ ಶಬ್ರೀನ ರವರು ತನ್ನ ಗಂಡ ಹಾಗೂ ಮಾವ ಮತ್ತು ಅತ್ತೆಯವರಲ್ಲಿ ವಿಚಾರಿಸಿದಾಗ ಹೆಚ್ಚಿನ ಹಣವನ್ನು ತರುವಂತೆ ಒತ್ತಾಯಿಸಿ ವರದಕ್ಷಿಣೆ ಕಿರುಕುಳವನ್ನು ನೀಡಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಶಬ್ರೀನ ರವರು ತಿಳಿಸಿದ್ದಾರೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಕಲಂ: 85, 115 (2), 352, 351, R/w 3(5) BNS ರಂತೆ ಪ್ರಕರಣ ದಾಖಲಾಗಿದೆ.
