IMG-20260330-WA0000.jpg
Spread the love

ಉಡುಪಿ: ದಿನಾಂಕ:05-04-2026 (ಹಾಯ್ ಉಡುಪಿ ನ್ಯೂಸ್) ಸಂತೆಕಟ್ಟೆ ನಿವಾಸಿ ಮಹಿಳೆ ಯೋರ್ವರು ಪ್ರಿಜ್ ರಿಪೇರಿಗೆಂದು ಮನೆಗೆ ಕರೆಸಿ ಆ ನಂತರ ಚಿನ್ನಾಭರಣ ಕಳ್ಳತನ ನಡೆಸಿರುವ ಆರೋಪ ಹೊರಿಸಿರುವ ಬಗ್ಗೆ ವ್ಯಕ್ತಿ ಯೋರ್ವರು ಪೊಲೀಸರಿಗೆ ದೂರು ನೀಡಿದ್ದಾರೆ.

ಉಡುಪಿ, ಉಪ್ಪೂರು ಗ್ರಾಮದ ನಿವಾಸಿ ವಿನ್ಸಿ ಡಿ ಸೋಜಾ (55) ಎಂಬವರು ಫ್ರಿಡ್ಜ್  ರಿಪೇರಿ ಮಾಡುವ ವೃತ್ತಿಯನ್ನು ಕಳೆದ 20 ವರ್ಷಗಳಿಂದ ಮಾಡಿಕೊಂಡಿರುತ್ತಾರೆ. ದಿನಾಂಕ : 31/01/2026 ರಂದು ಸಂಜೆ  ಉಡುಪಿ ತಾಲೂಕು ಪುತ್ತೂರು ಗ್ರಾಮದ ಸಂತೆಕಟ್ಟೆ ನಯಂಪಳ್ಳಿಯಲ್ಲಿ  ಕ್ರಿಸ್ಟಲ್ ವ್ಯಾಲ್ಯೂ ಅಪಾರ್ಟಮೆಂಟ್ ನ ಫ್ಲಾಟ್ ನಂಬ್ರ 315 ರಲ್ಲಿ ವಾಸಮಾಡಿಕೊಂಡಿರುವ ಅನೆಟ್ ವೀರಾ ಮಥಾಯಸ್ ರವರು ವಿನ್ಸಿ ಡಿಸೋಜಾ ರವರಿಗೆ ಫೋನ್ ಕರೆಮಾಡಿ ಮನೆಯಲ್ಲಿರುವ ಫ್ರಿಡ್ಜ್ ಹಾಳಾಗಿದ್ದು ರಿಪೇರಿ ಮಾಡಿಕೊಡುವಂತೆ ತಿಳಿಸಿರುತ್ತಾರೆ. ಅದರಂತೆ  ದಿನಾಂಕ : 01/02/2026 ರಂದು ವಿನ್ಸಿ ಡಿಸೋಜಾ ರವರು ಆನೆಟ್ ವೀರಾ ಮಥಾಯಸ್ ರವರ ಮನೆಗೆ ಹೋಗಿ ಫ್ರಿಡ್ಜ್ ರಿಪೇರಿಗೆ ಪ್ರಯತ್ನ ಪಟ್ಟಿದ್ದು ರಿಪೇರಿ ಆಗದೇ ಇದ್ದು, ಫ್ರಿಡ್ಜ್ ನ ಬಿಡಿಭಾಗವನ್ನು ಕಂಪನಿಯವರಿಗೆ ತಿಳಿಸಿ ಸರಿಪಡಿಸಿಕೊಳ್ಳುವಂತೆ ತಿಳಿಸಿ ಹೋಗಿರುತ್ತಾರೆ. 

ಆನೆಟ್ ವೀರಾ ಮಥಾಯಸ್ ರವರು ಫ್ರಿಡ್ಜ್ ನ್ನು ಕಂಪನಿಯವರಿಂದ ರಿಪೇರಿ ಮಾಡಿಸಿಕೊಂಡಿರುತ್ತಾರೆ. ದಿನಾಂಕ : 26/02/2026 ರಂದು ಆನೆಟ್ ವೀರಾ ಮಥಾಯಸ್ ರವರು ವಿನ್ಸಿ ಡಿಸೋಜಾ ರವರಿಗೆ ಫೋನ್ ಕರೆಮಾಡಿ “ನೀನು ನನ್ನ ಚಿನ್ನ ಕಳ್ಳತನ ಮಾಡಿದ್ದೀಯಾ” ಅದರ ಮೌಲ್ಯ 3,50,000.00/- ರೂಪಾಯಿಗಳನ್ನು ನೀಡು ಇಲ್ಲವಾದರೇ ನಿನ್ನ ಮಾನವನ್ನು ವಾಟ್ಸಾಪ್ ನಲ್ಲಿ ಹರಾಜು ಮಾಡುತ್ತೇನೆ ಎಂದು ಬೆದರಿಕೆ ಒಡ್ಡಿರುತ್ತಾಳೆ.

ಇಷ್ಟಕ್ಕೆ ಸುಮ್ಮನಾಗದೇ ಆನೆಟ್ ವೀರಾ ಮಥಾಯಸ್ ರವರು ಅದೇ ದಿನ ಬೆಳಿಗ್ಗೆ ವಿನ್ಸಿ ಡಿಸೋಜಾ ರವರು ಉಡುಪಿಯಲ್ಲಿರುವಾಗ ಅವರ  ಕೆನರಾ ಬ್ಯಾಂಕಿನ  ಚೆಕ್ ನಿಂದ 1,00,000.00/- ರೂಪಾಯಿ ಹಣವನ್ನು ಕೆನರಾ ಬ್ಯಾಂಕ್, ಉಪ್ಪೂರು ಶಾಖೆಯಿಂದ ಪಡೆದುಕೊಂಡಿರುತ್ತಾಳೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ವಿನ್ಸಿ ಡಿಸೋಜಾ ತಿಳಿಸಿದ್ದಾರೆ.

ಈ ಬಗ್ಗೆ ಉಡುಪಿ ನಗರ  ಪೊಲೀಸ್‌ ಠಾಣೆಯಲ್ಲಿ ಕಲಂ: 308(2) 351(2) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!