ಅಮಾಸೆಬೈಲು: ದಿನಾಂಕ 05-04-2026 (ಹಾಯ್ ಉಡುಪಿ ನ್ಯೂಸ್) ಹುಲಿಕಲ್ ಘಾಟಿ ಕಡೆಯಿಂದ ಜಾನುವಾರುಗಳನ್ನು ಕದ್ದು ಸಾಗಾಟ ನಡೆಸುತ್ತಿದ್ದ ನಾಲ್ವರು ವ್ಯಕ್ತಿಗಳನ್ನು ಅಮಾವಾಸ್ಯೆ ಬೈಲು ಪೊಲೀಸರು ಬಂಧಿಸಿದ್ದಾರೆ.
ಅಮಾಸೆಬೈಲು ಪೊಲೀಸ್ ಠಾಣೆಯ ಸಿಪಿಸಿ ಕುಮಾರ್ ಪಿ ಅವರು ಕುಂದಾಪುರ ತಾಲೂಕು ಹೊಸಂಗಡಿ ಗ್ರಾಮದ ಹೊಸಂಗಡಿ ಮುತ್ತಿನ ಕಟ್ಟೆ ಚೆಕ್ ಪೋಸ್ಟ್ ನಲ್ಲಿ ಸಿಬ್ಬಂದಿ ಗುರುಡ್ಡಿ ಹಚಡದ ಅವರೊಂದಿಗೆ ರಾತ್ರಿ ಪಾಳಿ ಕರ್ತವ್ಯ ನಿರ್ವಹಿಸಿಕೊಂಡಿರುವಾಗ ದಿನಾಂಕ: 05-04-2026 ರಂದು 05:00 ಗಂಟೆಗೆ ಮಾಹಿತಿ ದಾರರಿಂದ ದೊರೆತ ಖಚಿತ ವರ್ತಮಾನದ ಮೇರೆಗೆ ಹುಲಿಕಲ್ ಘಾಟಿ ಕಡೆಯಿಂದ ಚೆಕ್ ಪೊಸ್ಟ್ ಕಡೆಗೆ ಬರುತ್ತಿದ್ದ KA 25- AB 6246 ನೇ TATA Intra ವಾಹನವನ್ನು ನೋಡಿ ವಾಹನ ನಿಲ್ಲಿಸುವಂತೆ ಚಾಲಕನಿಗೆ ಸೂಚನೆ ನೀಡಿದ್ದು ಅದರಂತೆ ವಾಹನವನ್ನು ಚಾಲಕ ನಿಲ್ಲಿಸಿ ತಪಾಸಣೆ ಮಾಡಿದಾಗ ಹಿಂದುಗಡೆ ಬಾಡಿಯಲ್ಲಿ ಎರಡು ಎತ್ತುಗಳಿಗೆ ಯಾವುದೇ ಮೇವು ಅಹಾರ ನೀಡದೆ ಒಂದಕ್ಕೊಂದು ತಾಗಿಕೊಂಡು ಹಿಂಸಾತ್ಮಕವಾಗಿ ಕಟ್ಟಿ ಹಾಕಿ ತುಂಬಿರುವುದು ಕಂಡು ಚಾಲಕನಲ್ಲಿ ಈ ಬಗ್ಗೆ ವಿಚಾರಣೆ ನಡೆಸಿದ್ದಾರೆ.
ಈ ಜಾನುವಾರುಗಳನ್ನು ಮಾಂಸ ಮಾಡುವ ಉದ್ದೇಶದಿಂದ ವಧೆಗಾಗಿ ಕೊಂಡು ಹೋಗುತ್ತಿರುವುದಾಗಿ ವಾಹನದಲ್ಲಿದ್ದವರು ತಿಳಿಸಿರುತ್ತಾರೆ. ಎರಡು ಎತ್ತುಗಳ ಅಂದಾಜು ಮೌಲ್ಯ 1,00,000/- ಮತ್ತು TATA Intra ವಾಹನದ ಮೌಲ್ಯ 04 ಲಕ್ಷ ರೂಪಾಯಿಗಳಾಗಬಹುದು. TATA Intra ವಾಹನದ ಹಿಂದುಗಡೆಯಿಂದ KA 47 A 6169 ನೇ ನಂಬ್ರದ ಬಿಳಿ ಬಣ್ಣದ TOYOTA ETIOS ಕಾರು ಅಕ್ರಮ ಜಾನುವಾರು ಸಾಗಾಟಕ್ಕೆ ಬೆಂಗಾವಲಾಗಿ ಬಂದ ಕಾರ್ ಆಗಿದ್ದು ಕಾರಿನಲ್ಲಿದ್ದ ಮತ್ತೋರ್ವ ವ್ಯಕ್ತಿಯನ್ನು ಬಂಧಿಸಿ ವಶಕ್ಕೆ ಪಡೆಯಲಾಗಿದೆ.
ಜಾನುವಾರುಗಳು ಮತ್ತು ಅವುಗಳನ್ನು ತಂದ ವಾಹನ ಸಮೇತ ಆಪಾದಿತ 1} ಮುಸ್ತಾಕ್ ಹುಸೇನ್ ಸಾಬ್ ನದಾಫ್ (29) ರಾಮದುರ್ಗಾ ಬೆಳಗಾಂ ಜಿಲ್ಲೆ 2} ಸಲೀಂ ಹುಸೇನ್ ಸಾಬ್ ನದಾಫ್ (33) ರಾಮದುರ್ಗಾ ಬೆಳಗಾಂ ಜಿಲ್ಲೆ 3} ನದೀಂ ಅಬ್ದುಲ್ ಖಾದರ್ (34) ಕಂಡ್ಲೂರು ಕುಂದಾಪುರ ತಾಲೂಕು 4) ಮಹಮದ್ ನೌಫಿಲ್ ಎಂಬವರನ್ನು ಬಂಧಿಸಿ ವಶಕ್ಕೆ ಪಡಕೊಂಡಿದ್ದಾರೆ.
ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಕಲಂ 4, 5, 7, 12, Prevention of Cow Slaughter and Preservation of Cattle Act 2020 & 11(1) ( d) Prevention of Cruelty to animal Act And 66(1)R/W 192 (A) IMV Act ರಂತೆ ಪ್ರಕರಣ ದಾಖಲಾಗಿದೆ.
