images-19.jpeg
Spread the love

ಕೋಟ: ದಿನಾಂಕ :31-03-2026 (ಹಾಯ್ ಉಡುಪಿ ನ್ಯೂಸ್) ಶಿರಿಯಾರ ಗ್ರಾಮದ ಸಾಹೇಬ್ರ ಕಟ್ಟೆ ಪರಿಸರದಲ್ಲಿ ಮಟ್ಕಾ ಜುಗಾರಿ ನಡೆಸುತ್ತಿದ್ದ ವ್ಯಕ್ತಿಯನ್ನು ಕೋಟ ಪೊಲೀಸ್‌ ಠಾಣೆಯ ಪಿಎಸ್ಐ ಮಹಾಂತೇಶ್ ಜಾಬಗೌಡ ಅವರು ಬಂಧಿಸಿದ್ದಾರೆ.

ಕೋಟ ಪೊಲೀಸ್ ಠಾಣೆಯ ಪಿಎಸ್ಐ ಮಹಾಂತೇಶ್ ಜಾಬಗೌಡ ಅವರು ದಿನಾಂಕ : 30-03-2026 ರಂದು ಠಾಣೆಯಲ್ಲಿರುವಾಗ ಶಿರಿಯಾರ ಗ್ರಾಮದ ಸಾಹೇಬ್ರಕಟ್ಟೆ ಗಣೇಶ ಕಾಂಪ್ಲೇಕ್ಸ್ ಎದುರು ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟ ಆಡುತ್ತಿರುವುದಾಗಿ ಠಾಣೆಯ ಸಿಬ್ಬಂದಿಯವರು ನೀಡಿದ ಖಚಿತ ಮಾಹಿತಿಯ ಮೇರೆಗೆ ಸಿಬ್ಬಂದಿಗಳೊಂದಿಗೆ ಕೂಡಲೇ ಮಾಹಿತಿ ಬಂದ  ಸ್ಥಳಕ್ಕೆ ತೆರಳಿದ್ದಾರೆ .

ಪೊಲೀಸರು ಸ್ಥಳಕ್ಕೆ ತಲುಪಿದಾಗ ಸಾರ್ವಜನಿಕರು ಗುಂಪು ಸೇರಿದ್ದು ಓರ್ವ ವ್ಯಕ್ತಿ 00 ರಿಂದ 99 ರೊಳಗೆ ಯಾವುದೇ ನಂಬರ್ ಬಂದರೆ 1 ರೂಪಾಯಿಗೆ 70 ರೂಪಾಯಿ ಕೊಡುವುದಾಗಿ ಹೇಳಿಕೊಂಡು ಸಾರ್ವಜನಿಕರಿಂದ ಹಣವನ್ನು ಪಣವಾಗಿ ಸ್ವೀಕರಿಸಿಕೊಂಡು ಮಟ್ಕಾ ನಂಬ್ರ ಬರೆದು ಕೊಡುತ್ತಿದ್ದು,ಮಟ್ಕಾ ಜುಗಾರಿ ಆಟ ಆಡುತ್ತಿದ್ದಲ್ಲಿಗೆ ಪೊಲೀಸರು ದಾಳಿ ನಡೆಸಿದಾಗ ಸ್ಥಳದಲ್ಲಿದ್ದ ಸಾರ್ವಜನಿಕರು ಓಡಿ ಹೋಗಿದ್ದು ಮಟ್ಕಾ ಬರೆಯುತ್ತಿದ್ದ ನಿರಂಜನ ಎಂಬವನನ್ನು ಬಂಧಿಸಿ ವಶಕ್ಕೆ ಪಡೆದು ವಿಚಾರಿಸಿದಾಗ ತಾನು ರಘು ಹೆಸ್ಕುತ್ತೂರು ಎಂಬವರು ತಿಳಿಸಿದಂತೆ ಮಟ್ಕಾ ಜುಗಾರಿ ಆಟ ಆಡಿಸುತ್ತಿದ್ದು ಇದರಿಂದ ಬಂದ ಹಣವನ್ನು ರಘು ರವರಿಗೆ ನೀಡುತ್ತಿದ್ದು ಆತನು ತನಗೆ ಕಮೀಷನ್ ನೀಡುತ್ತಿರುವುದಾಗಿ ಪೊಲೀಸ್ ತನಿಖೆಯಲ್ಲಿ ತಿಳಿಸಿರುತ್ತಾನೆ .

ನಿರಂಜನ ನು  ಮಟ್ಕಾ ಜುಗಾರಿ ಆಟ ಆಡಿಸುತ್ತಿದ್ದರಿಂದ ಆತನನ್ನು ಬಂಧಿಸಿದ್ದು ಹಾಗೂ ಆತನ ವಶದಲ್ಲಿದ್ದ ಮಟ್ಕಾ ಜುಗಾರಿ ಆಟಕ್ಕೆ ಬಳಸಿದ ಬಾಲ್ ಪೆನ್, ಮಟ್ಕಾ ಚೀಟಿ ನಗದು 1165/- ರೂಪಾಯಿಯನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಕೋಟ ಪೊಲೀಸ್‌ ಠಾಣೆಯಲ್ಲಿ ಕಲಂ: 78(i)(iii) KP ACT ಮತ್ತು ಕಲಂ112 ಜೊತೆಗೆ 3(5) ಬಿಎನ್ಎಸ್ ರಂತೆ ಪ್ರಕರಣ ದಾಖಲಾಗಿದೆ.

error: No Copying!