IMG-20260321-WA0013-1024x558.jpg
Spread the love

ಉಡುಪಿ: ದಿನಾಂಕ: 21-03-2026(ಹಾಯ್ ಉಡುಪಿ ನ್ಯೂಸ್) ಕ್ರಿಶ್ಚಿಯನ್ ಪಿಯು ಕಾಲೇಜು ಮೈದಾನದಲ್ಲಿ ನಡೆಯುತ್ತಿದ್ದ ಸಮಾಧಾನ ಮಹೋತ್ಸವ ಕಾರ್ಯಕ್ರಮವನ್ನು ತಡೆಯಲು ಪ್ರತಿಭಟನೆಯಲ್ಲಿ ಸಾಗುತ್ತಿದ್ದ ಹಿಂದೂ ಜಾಗರಣ ವೇದಿಕೆಯ ಸದಸ್ಯರನ್ನು ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಮಹೇಶ್ ಪ್ರಸಾದ್ ಅವರು ಬಂಧಿಸಿದ್ದಾರೆ.

ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಮಹೇಶ ಪ್ರಸಾದ  ಅವರು ಉಡುಪಿ ನಗರ ಪೊಲೀಸ್ ಠಾಣೆಯ ಹೆಚ್ಚುವರಿ ಪ್ರಭಾರವನ್ನು ವಹಿಸಿಕೊಂಡು ಕರ್ತವ್ಯ ನಿರ್ವಹಿಸಿಕೊಂಡಿದ್ದು ̤ ಉಡುಪಿ ಕ್ರಿಶ್ಚಿಯನ್ ಪಿಯು ಕಾಲೇಜು ಮೈದಾನದಲ್ಲಿ ಫೇಲೋಶಿಫ್ ಆಪ್ ಉಡುಪಿ ಡಿಸ್ಟ್ರಿಕ್ ಚರ್ಚಸ್ ಇವರ ವತಿಯಿಂದ ದಿನಾಂಕ 20/03/2026 ರಿಂದ 22/03/2026 ರವರೆಗೆ ಅನುಮತಿ ಪಡೆದು ಸಮಾಧಾನ ಮಹೋತ್ಸವ ಕಾರ್ಯಕ್ರಮ ಆಯೋಜಿಸಿದ್ದು, ಈ ಕಾರ್ಯಕ್ರಮಕ್ಕೆ ಮೋಹನ್ ಸಿ ಲಾಜರಸ್ ಎಂಬ ಕ್ರಿಶ್ಚಿಯನ್ ಭಾಷಣಕಾರರನ್ನು ಆಹ್ವಾನಿಸಲು ತೀರ್ಮಾನಿಸಿದ್ದು , ಇದಕ್ಕೆ ಹಿಂದೂ ಸಂಘಟನೆಯವರಿಂದ ಪ್ರತಿಭಟನಾ ವಿರೋಧದ ಬಗ್ಗೆ ಆಯೋಜಕರು ಮಾನ್ಯ ಉಚ್ಚ ನ್ಯಾಯಾಲಯದಿಂದ ಕಾರ್ಯಕ್ರಮಕ್ಕೆ ರಕ್ಷಣೆ ನೀಡುವಂತೆ ಆದೇಶಿಸಿದ್ದು ಅದರಂತೆ ಸೂಕ್ತ ಬಂದೋಬಸ್ತ್ ಮಾಡಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.

ದಿನಾಂಕ 20/03/2026 ರಂದು ಸಂಜೆ  ಹಿಂದೂ ಜಾಗರಣ ವೇದಿಕೆಯ ಶ್ರೀಕಾಂತ ಶೆಟ್ಟಿ ಹಾಗೂ ಇನ್ನಿತರ 38 ಪ್ರತಿಭಟನಾಕಾರರು ಅಕ್ರಮಕೂಟ ಸೇರಿಕೊಂಡು ಸಮಾನ ಉದ್ದೇಶದಿಂದ ಗೋವಿಂದ ಕಲ್ಯಾಣಮಂಟಪದಿಂದ ಸಮಾಧಾನ ಮಹೋತ್ಸವ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಘೋಷಣೆಯನ್ನು ಕೂಗುತ್ತಿದ್ದು ,ಪೊಲೀಸರಿಗೆ  ಮಾಹಿತಿ ತಿಳಿದು ಸ್ಥಳಕ್ಕೆ ಹೋಗಿದ್ದು ಪ್ರತಿಭಟನಾಕಾರರು ಕಾರ್ಯಕ್ರಮದಲ್ಲಿ ಬಡ ಹಿಂದೂಗಳನ್ನು ಕರೆದು ಅವರನ್ನು ಮತಾಂತರ ಮಾಡುವ ಸಾಧ್ಯತೆ ಇದ್ದು ನಾವು ಇದನ್ನು ತಡೆಯುವ ಎಂದು ಜೋರಾಗಿ ಘೋಷಣೆ ಕೂಗುತ್ತಿದ್ದು ,ಅಲ್ಲದೆ ನಾವು ಕಾರ್ಯಕ್ರಮದ ಸ್ಥಳಕ್ಕೆ ಹೋಗುವುದಾಗಿ ಹೇಳಿದ್ದು  ಪೊಲೀಸ್ ನಿರೀಕ್ಷಕರು ಪ್ರತಿಭಟನಕಾರರಿಗೆ ಕಾರ್ಯಕ್ರಮ ನಡೆಸಲು ಹೈಕೋರ್ಟ್ ನ ಅನುಮತಿ ಪಡೆದಿದ್ದು , ಅದರ ಆದೇಶದಂತೆ ನಡೆಯುತ್ತಿದ್ದು ನಾವು ನಿಮ್ಮನ್ನು ಕಾರ್ಯಕ್ರಮಕ್ಕೆ ಹೋಗಲು ಬಿಡಲ್ಲ ನೀವು ಪ್ರತಿಭಟನೆ ಮಾಡಿ ನೀವು ವಾಪಸ್ಸು ಹೋಗಿ , ನಿಮಗೆ ಅಲ್ಲಿಗೆ ಹೋಗಲು ಅವಕಾಶ ಇಲ್ಲ, ಅಲ್ಲಿಗೆ ಹೋದರೆ ನಿಮ್ಮನ್ನು ನಾವು ದಸ್ತಗಿರಿ ಮಾಡಬೇಕಾಗುತ್ತದೆ ಎಂಬುದಾಗಿ ಹೇಳಿದ್ದರೂ ಕೂಡ ಅಕ್ರಮ ಕೂಟ ರಚಿಸಿದ ಪ್ರತಿಭಟನಾಕಾರರು ಮುನ್ನುಗ್ಗಲು ಪ್ರಯತ್ನಿಸಿದ್ದು , ಪೊಲೀಸ್ ನಿರೀಕ್ಷಕರ ಆದೇಶದಂತೆ ಪಿಎಸ್ ಐ ಸಿಬ್ಬಂದಿಯವರು ಕೂಡಿ 1) ಮಹೇಶ್ ಶೆಣೈ (43), 2) ಶ್ರೀಕಾಂತ್ ಶೆಟ್ಟಿ , 3)ಸಂತೋಷ(27), 4)ಉಮೇಶ್ ನಾಯ್ಕ್ (51), 5)ಉಮೇಶ್ (35), 6)ರಮೇಶ್ ಶೆಟ್ಟಿ (43), 7) ರಾಜೇಶ್ ಉಚ್ಚಿಲ (41), 8) ದರ್ಶನ್ (23), 9)ಉದಯಕುಮಾರ್ (44), 10) ಪ್ರಶಾಂತ್ (40), 11) ಗುರುರಾಜ್ (37), 12) ಅಜೀತ್ ಗೋಳಿಕಟ್ಟೆ (39), 13) ರಾಧಕೃಷ್ಣ (55), 14) ರೀತೇಶ್ ಪೂಜಾರಿ (25), 15) ಜಗದೀಶ ಪೂಜಾರಿ (31), 16) ಮಹೇಶ್ ಪೂಜಾರಿ(33), 17)ಸುನೀಲ್ ಪೂಜಾರಿ (26), 18)ಚಿರಾಗ್ ಹೆಚ್.ಎಸ್ (22), 19) ಸುದೀಪ್ ಕಡಿಯಾಳಿ (23), 20) ನಿಖಿಲ್ (28), 21)ಸುಜೀತ್ (28), 22) ಸಾಜನ್ ಎಮ್ ಶೆಟ್ಟಿ (34), 23) ರಾಜೇಶ್ ಪೈಯಾರ್ (43), 24)) ಲಕ್ಷ್ಮಣ್ ಕರ್ಕೇರಾ (49) , 25) ಶರತ್ಕುಮಾರ್ ಬೈಲಕೆರೆ (42) , 26) ಶೈಲೇಂದ್ರ ಶೆಟ್ಟಿ (50) 27))ವಿಕೇಶ್ ಎಸ್ (29), 28) ನಿತೇಶ್ (32) ,29) ಸರೋಜಾ ಶೆಣೈ (52), 30) ತಾರಾ ಎಸ್, 31) ತಾರಾ ಆಚಾರ್ಯ (55), 32) ಸಿಂಚನ್ (21), 33) ಧನುಷ್ ಶೆಟ್ಟಿ (21), 34) ವಿಶೇಕ್ ಶೆಟ್ಟಿ (20), 35) ಸಾತ್ವೀಕ್ (20), 36) ಮನೀಷ್ (21), 37) ಅಶ್ವತ್ ಅಚಾರ್ಯ (37), 38) ದಿನೇಶ್ ಸಾವಂತ (47) ರವರನ್ನು  ಬಂಧಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 44/2026 ಕಲಂ: 189(2) BNS & 112 KP ACT ರಂತೆ ಪ್ರಕರಣ ದಾಖಲಾಗಿದೆ.

error: No Copying!