ಪಡುಬಿದ್ರಿ: ದಿನಾಂಕ:16-03-2026 (ಹಾಯ್ ಉಡುಪಿ ನ್ಯೂಸ್) ಸ್ನೇಹಿತನೋರ್ವನಿಗೆ ಸಾಲ ನೀಡಿದ್ದ ಹಣವನ್ನು ವಾಪಸ್ ಕೇಳಿದ್ದಕ್ಕೆ ಸಾಲ ಪಡೆದವನು ಚೂರಿಯಿಂದ ಇರಿದು ಕೊಲೆ ನಡೆಸಲು ಯತ್ನಿಸಿದ ಘಟನೆ ಹೆಜಮಾಡಿ ಸಮೀಪ ನಡೆದಿದೆ.
ಕಾರ್ಕಳ ಬಜಗೋಳಿ ನಿವಾಸಿ ಸುಮಿತ್ ಎಸ್ ಸುವರ್ಣ (29) ಎಂಬವರು ಹಾಗೂ ಆರೋಪಿ ಧೀರಜ್ ಎಂಬವರು ಸ್ನೇಹಿತರಾಗಿದ್ದು, ಸುಮಿತ್ ರವರು ಸುಮಾರು 2 ವರ್ಷಗಳ ಹಿಂದೆ ಆರೋಪಿ ಧೀರಜ್ ಎಂಬಾತನಿಗೆ 2 ಲಕ್ಷ ರೂ ಸಾಲ ಕೊಟ್ಟಿದ್ದು, ಅದನ್ನು 6 ತಿಂಗಳಲ್ಲಿ ಹಿಂತಿರುಗಿಸುವುದಾಗಿ ತಿಳಿಸಿದ್ದು ಈ ವರೆಗೆ ಹಿಂತಿರುಗಿಸದೇ ಇದ್ದು ದಿನಾಂಕ 13/03/2026 ರಂದು ಕಾಪು ತಾಲೂಕು ಹೆಜಮಾಡಿ ಗ್ರಾಮದ ಹೆಜಮಾಡಿ ಸ್ಟೇಡಿಯಂ ಬಳಿ ಸುಮಿತ್ ರವರು ಆರೋಪಿ ಧೀರಜ್ ನಲ್ಲಿ ಸಾಲದ ಹಣವನ್ನು ಕೇಳಿದಾಗ ಕೋಪಗೊಂಡ ಆರೋಪಿ ಧೀರಜ್ ನು ನಿನ್ನ ಹಣ ಕೊಡುವುದಿಲ್ಲ ಎಂದು ಹೇಳಿ ಕೈಯಿಂದ ಹಲ್ಲೆ ನಡೆಸಿ ನಂತರ ಆರೋಪಿ ಧೀರಜ್ ನು ಸುಮಿತ್ ರವರಲ್ಲಿ ಸಾಲದ ಹಣವನ್ನು ಮನೆಯಲ್ಲಿ ಹಣ ಕೊಡುವುದಾಗಿಯೂ ತನ್ನೊಂದಿಗೆ ಬಾ ಎಂದು ತಿಳಿಸಿ ತನ್ನ ದ್ವಿಚಕ್ರ ವಾಹನದಲ್ಲಿ ಸುಮಿತ್ ರವರನ್ನು ಕುಳ್ಳಿರಿಸಿಕೊಂಡು ಹೋಗುತ್ತಾ ಸ್ಟೇಡಿಯಂ ನಿಂದ ಸುಮಾರು 1 ಕಿ. ಮೀ ದೂರದಲ್ಲಿ ಇರುವ ಬಬ್ಬು ಸ್ವಾಮಿ ದೇವಸ್ಥಾನದ ಬಳಿ ತಲುಪುವಾಗ ರಾತ್ರಿ 11:50 ಗಂಟೆ ಸಮಯಕ್ಕೆ ಆರೋಪಿ ಧೀರಜ್ ನು ದ್ವಿಚಕ್ರ ವಾಹನವನ್ನು ನಿಲ್ಲಿಸಿ ಸುಮಿತ್ ರವರನ್ನು ದ್ವಿಚಕ್ರ ವಾಹನದಿಂದ ಇಳಿಸಿ ಸುಮಿತ್ ರವರನ್ನು ಕೊಲ್ಲುವ ಉದ್ದೇಶದಿಂದ ಚೂರಿಯಿಂದ ಹೊಟ್ಟೆಗೆ ತಿವಿದು ಕೊಲೆ ಮಾಡಲು ಪ್ರಯತ್ನ ಮಾಡಿದ್ದಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಸುಮಿತ್ ರವರು ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಕಲಂ: ಕಲಂ 115(1), 351 (2),352, 109 BNS ರಂತೆ ಪ್ರಕರಣ ದಾಖಲಾಗಿದೆ.
