ಪಡುಬಿದ್ರಿ: ದಿನಾಂಕ:16-03-2026 (ಹಾಯ್ ಉಡುಪಿ ನ್ಯೂಸ್) ರಿಕ್ಷಾ ಚಾಲಕರೋರ್ವರು ಸ್ಥಳೀಯ ಗ್ರಾಹಕರೋರ್ವರೊಂದಿಗೆ ದುರ್ವರ್ತನೆ ತೋರಿದ ಘಟನೆ ಪಡುಬಿದ್ರಿ ಯಲ್ಲಿ ನಡೆದಿದೆ.
ಮಹಿಳೆ ಯೋರ್ವರು ಪಡುಬಿದ್ರಿ ನವರಂಗ್ ಬಳಿಯ ರಿಕ್ಷಾ ನಿಲ್ದಾಣದಲ್ಲಿ ಬಾಡಿಗೆಗೆ ಕ್ಯೂ ನಲ್ಲಿ ನಿಂತಿದ್ದ ಕೆಎ 20:7759 ನಂಬ್ರದ ಆಟೋ ರಿಕ್ಷಾದಲ್ಲಿ ಪ್ರಯಾಣಿಸಿದ್ದು, ಮಹಿಳೆ ದೇವರ ಪೂಜೆಗಾಗಿ ಹೂವನ್ನು ಖರೀದಿಸಲು ರಿಕ್ಷಾ ನಿಲ್ಲಿಸುವಂತೆ ಸೂಚಿಸಿದಾಗ ರಿಕ್ಷಾ ಚಾಲಕನು ತನಗೆ ಬೇರೆ ಬಾಡಿಗೆ ಹೋಗಲಿಕ್ಕೆ ಇದೆ ಎಂದು ಮಹಿಳೆಯೊಂದಿಗೆ ದುರ್ವರ್ತನೆ ತೋರಿ ರಿಕ್ಷಾದಲ್ಲಿದ್ದ ಮಹಿಳೆ ಯ ಪೂಜಾ ಸಾಮಗ್ರಿಗಳನ್ನು ರಸ್ತೆಗೆ ಎಸೆದು ಮಹಿಳೆಯೊಂದಿಗೆ ದುರಹಂಕಾರ ಪ್ರದರ್ಶಿಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.
ಈ ಬಗ್ಗೆ ಇತರ ರಿಕ್ಷಾ ಚಾಲಕರ ಗಮನಕ್ಕೆ ತಂದಿದ್ದು ಅವರು ಆತನಿಂದ ತಪ್ಪಾಗಿದೆ,ಮಹಿಳೆಯ ಬಳಿ ಕ್ಷಮೆ ಯಾಚಿಸುವಂತೆ ತಿಳಿಸಲಾಗುವುದು ಎಂದು ಪ್ರಕರಣವನ್ನು ಇತ್ಯರ್ಥ ಗೊಳಿಸಿದ್ದರು. ಆದರೆ ದುರಹಂಕಾರಿ ರಿಕ್ಷಾ ಚಾಲಕ ಮಹಿಳೆಯ ಬಳಿ ಕ್ಷಮೆ ಕೇಳದೆ ದುರ್ವರ್ತನೆ ಮುಂದುವರಿಸಿದ್ದಾನೆ.
ಇಂತಹ ಪ್ರಕರಣಗಳನ್ನು ಹೀಗೆಯೇ ಬಿಟ್ಟರೆ ಇತರ ರಿಕ್ಷಾ ಚಾಲಕರೂ ಕೂಡ ಇಂತಹ ದುರ್ವರ್ತನೆ ಗಳನ್ನು ಅನುಸರಿಸುವ ಅಪಾಯವಿದೆ. ಹಾಗಾದರೆ ರಿಕ್ಷಾ ಗಳಲ್ಲಿ ಪ್ರಯಾಣಿಸುವ ಒಂಟಿ ಮಹಿಳೆಯರಿಗೆ ರಕ್ಷಣೆ ಇಲ್ಲವೇ? ರಿಕ್ಷಾ ನಿಲ್ದಾಣದಲ್ಲಿ ಕ್ಯೂನಲ್ಲಿ ಬಾಡಿಗೆ ಮಾಡಲು ನಿಂತು ಕ್ಯೂನಲ್ಲಿ ಬಂದ ಪ್ರಯಾಣಿಕರನ್ನು ಅವರು ಹೇಳಿದಲ್ಲಿ ಗೆ ಕರೆದೊಯ್ಯುವುದು, ಕಾಯುವುದು ರಿಕ್ಷಾ ಚಾಲಕರ ಕರ್ತವ್ಯದ ಭಾಗ. ಕಾಯುವ ವೈಟಿಂಗ್ ಚಾರ್ಜ್, ಹೆಚ್ಚು ವರಿ ಚಾರ್ಜ್ ಬೇಕಾದರೆ ಪಡೆಯಿರಿ. ಅದು ಬಿಟ್ಟು ರಿಕ್ಷಾ ನಿಲ್ದಾಣದಲ್ಲಿ ಕ್ಯೂ ನಲ್ಲಿ ಬಾಡಿಗೆ ಮಾಡಲು ನಿಂತು ಪ್ರಯಾಣಿಕರನ್ನು ಕೂರಿಸಿಕೊಂಡು ಅರ್ಧ ದಾರಿ ಹೋದ ಮೇಲೆ ನನಗೆ ಬೇರೆ ಬಾಡಿಗೆ ಹೋಗಲಿಕ್ಕೆ ಉಂಟು ಎಂದು ಒಂಟಿ ಮಹಿಳೆ ಎಂದು ಜಗಳ ಮಾಡುವುದು ಅವರನ್ನು ಅರ್ಧ ದಾರಿಯಲ್ಲಿ ಇಳಿಸಿ ಅವರ ಪೂಜಾ ಸಾಮಗ್ರಿಗಳನ್ನು ರಸ್ತೆಗೆ ಬಿಸಾಡಿ ಬೈದು ಹೋಗುವುದು ಇದು ಯಾವ ರೀತಿಯ ಸೇವೆ ಎಂದು ಪ್ರಶ್ನಿಸಲೇ ಬೇಕಾಗಿದೆ.
ರಿಕ್ಷಾ ಪ್ರಯಾಣಿಕರಿಗೂ ಹಕ್ಕಿದೆ ಎಂಬುದನ್ನು ಇಂತಹ ನಾಲಾಯಕ್ ದುರಹಂಕಾರಿ ಚಾಲಕರು ಇನ್ನಾದರೂ ಇತರ ಸಭ್ಯ ಚಾಲಕರಿಂದ ಕೇಳಿ ತಿಳಿದು ಕೊಳ್ಳಬೇಕು.
ಬಾಡಿಗೆಗಳನ್ನು ಮೊದಲೇ ಬುಕ್ ಮಾಡಿ ಇಟ್ಟುಕೊಂಡಿರುವ ರಿಕ್ಷಾ ಚಾಲಕರು ರಿಕ್ಷಾ ನಿಲ್ದಾಣದಲ್ಲಿ ಕ್ಯೂ ನಲ್ಲಿ ನಿಲ್ಲಬಾರದು. ಬೇರೆ ಬಾಡಿಗೆ ಹೋಗಲಿಕ್ಕೆ ಇದ್ದವರು ಪುನಃ ಕ್ಯೂ ನಲ್ಲಿ ನಿಂತು ಅವಸರದ ಬಾಡಿಗೆ ಮಾಡುವ ಭರದಲ್ಲಿ ಇತರ ಪ್ರಯಾಣಿಕರಿಗೆ ಮಾನಸಿಕ ಕಿರಿಕಿರಿ ಮಾಡುವುದು,ದರ್ಪದ ವರ್ತನೆ ತೋರುವುದು,ಅವಸರದ ಚಾಲನೆ ಮಾಡಿ ಪ್ರಯಾಣಿಕರ ಪ್ರಾಣ ದೊಂದಿಗೆ ಚೆಲ್ಲಾಟ ವಾಡುವುದಲ್ಲ, ಬಾಡಿಗೆ ಮೊದಲೇ ಬುಕ್ಕಿಂಗ್ ಮಾಡಿ ಇಟ್ಟುಕೊಳ್ಳುವ ರಿಕ್ಷಾ ಚಾಲಕರುಗಳು ರಿಕ್ಷಾ ನಿಲ್ದಾಣದಲ್ಲಿ ಪುನಃ ನಿಂತು ಬಾಡಿಗೆ ಮಾಡಲು ಹೋಗಿ ಇತರ ಪ್ರಯಾಣಿಕರಿಗೆ ತೊಂದರೆ ನೀಡದಂತೆ ರಿಕ್ಷಾ ಸಂಘಟನೆಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.
ಬಾಡಿಗೆ ಬುಕ್ಕಿಂಗ್ ಇರುವ ರಿಕ್ಷಾ ಚಾಲಕರು ಮನೆಯಲ್ಲೇ ನಿಂತು ಆರಾಮವಾಗಿ ಬಾಡಿಗೆ ಮಾಡಲಿ, ಇತರರನ್ನು ಸಂಕಷ್ಟಕ್ಕೆ ಸಿಲುಕಿಸುವುದು ಬೇಡ. ಪ್ರಯಾಣಿಕರ ಪೂಜೆಯ ಸಾಮಾಗ್ರಿಗಳನ್ನು ರಸ್ತೆಗೆ ಎಸೆಯುವ ರಿಕ್ಷಾ ಚಾಲಕ ಮುಂದೊಂದು ದಿನ ತನ್ನ ಮನೆಯ ಮಹಿಳೆಯರಿಗೂ ಬೇರೆಯವರು ಇಂತಹುದೇ ವರ್ತನೆಯನ್ನು ಬಡ್ಡಿ ಸಮೇತ ಕರುಣಿಸ ಬಹುದು ಎಂಬ ಸತ್ಯ ವನ್ನು ಅರಿತು ಕೊಂಡು ಇನ್ನು ಮುಂದಾದರೂ ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸುವಂತಾಗಲಿ.
ಇಂತಹ ಒಂದಿಬ್ಬರು ರಿಕ್ಷಾ ಚಾಲಕರ ದುರ್ವರ್ತನೆ ಯಿಂದ ಶಿಸ್ತಿನಿಂದ ದುಡಿಯುವ ನೂರಾರು ರಿಕ್ಷಾ ಚಾಲಕರಿಗೂ ಕೆಟ್ಟ ಹೆಸರು ಬರುವಂತಾಗುತ್ತದೆ. ಇನ್ನು ಮುಂದಾದರೂ ಹಿರಿಯ ರಿಕ್ಷಾ ಚಾಲಕರು ನಿಲ್ದಾಣಗಳಲ್ಲಿ ದುಡಿಯುವ ಹೊಸ ರಿಕ್ಷಾ ಚಾಲಕರಿಗೆ ಪ್ರಯಾಣಿಕರೊಂದಿಗೆ ಹೇಗೆ ಸೌಜನ್ಯಯುತವಾಗಿ ವರ್ತಿಸಬೇಕು ಎಂಬ ಪಾಠವನ್ನು ಮಾಡುವಂತಾಗಲಿ, ರಿಕ್ಷಾ ಪ್ರಯಾಣಿಕರ ಹಕ್ಕನ್ನು ರಕ್ಷಿಸುವಂತಾಗಲಿ.
