IMG_20260311_141400.jpg
Spread the love

ಹಿರಿಯಡ್ಕ: ದಿನಾಂಕ:11-03-2026 (ಹಾಯ್ ಉಡುಪಿ ನ್ಯೂಸ್)ಗ್ರಾಮ ಒನ್ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬೊಮ್ಮರಬೆಟ್ಟು ಗ್ರಾಮದ ನಿವಾಸಿ ಯೋರ್ವರಿಗೆ ವ್ಯಕ್ತಿ ಯೋರ್ವರು ಕಚೇರಿಗೆ ನುಗ್ಗಿ ಹಲ್ಲೆ ನಡೆಸಿದ ಘಟನೆ ನಿನ್ನೆ ನಡೆದಿದೆ.

ಹಿರಿಯಡ್ಕ ಬೊಮ್ಮರಬೆಟ್ಟು ಗ್ರಾಮದ ನಿವಾಸಿ ರಶ್ಮಿತಾ (30) ಎಂಬವರ ಗಂಡ ಪ್ರಶಾಂತರವರು ಈ ಹಿಂದೆ ಅಯ್ಯಪ್ಪ ಸ್ವಾಮಿ ಮಾಲೆ ಹಾಕಿದ ಸಮಯದಲ್ಲಿ ಶಿಬಿರದ ಮುಂದಾಳತ್ವವನ್ನು ವಹಿಸಿಕೊಂಡಿರುತ್ತಾರೆ. ಇದೇ ವಿಚಾರದಲ್ಲಿ ಆಪಾದಿತ ವಿಶ್ವನಾಥ ದೇವಾಡಿಗ ಯಾನೆ ವಿಶು ಎಂಬವರು ರಶ್ಮಿತಾರವರ ಗಂಡ ಪ್ರಶಾಂತ ರವರ ಮೇಲೆ ಕೋಪಗೊಂಡವನು ರಶ್ಮಿತಾ ರವರ ಮಗನು ಹಿರಿಯಡ್ಕ ಪೇಟೆಯಿಂದ ಹೂ ತರುವಾಗ ದಾರಿಯಲ್ಲಿ ಸಿಕ್ಕ ಆರೋಪಿ ವಿಶ್ವನಾಥ ದೇವಾಡಿಗನು ಮನೆಯಲ್ಲಿ ಯಾರಾದರೂ ಹೋಗಿದ್ದಾರಾ? ಇಷ್ಟೊಂದು ಹೂ ಒಯ್ಯುತ್ತಿರುವಿ ಅಂತಾ ಹೇಳಿದ್ದನ್ನು ರಶ್ಮಿತಾ ರವರ ಮಗನು ಮನೆಗೆ ಬಂದು ರಶ್ಮಿತಾರವರಲ್ಲಿ ಮತ್ತು ಅವರ ಗಂಡನಿಗೆ ತಿಳಿಸಿದಾಗ ರಶ್ಮಿತಾ ರವರ ಗಂಡ ವಿಶ್ವನಾಥ ದೇವಾಡಿಗನಿಗೆ ಪೋನ್ ಮಾಡಿ ವಿಚಾರಿಸಿದಾಗ ನಾಳೆ ಕಛೇರಿಗೆ ಬಂದು ಮಾತನಾಡುವೆ ಎಂದು ಹೇಳಿರುತ್ತಾನೆ.

ದಿನಾಂಕ 10/03/2026 ರಂದು ಮಧ್ಯಾಹ್ನ  ರಶ್ಮಿತಾರವರು ಮತ್ತು ಅವಳ ಗಂಡ ಪ್ರಶಾಂತ ರವರು ತಮ್ಮ ಗ್ರಾಮ ಒನ್ ಕಚೇರಿಯಲ್ಲಿ ಕೆಲಸದಲ್ಲಿ ನಿರತರಾಗಿದ್ದಾಗ ಆರೋಪಿ ವಿಶ್ವನಾಥ ದೇವಾಡಿಗನು ಅಲ್ಲಿಗೆ ಬಂದು ಅವಾಚ್ಯ ಶಬ್ದಗಳಿಂದ ಬೈದು ಪ್ರಶಾಂತ್ ರವರಿಗೆ ಎಡ ಕೆನ್ನೆಗೆ ಹೊಡೆದು ನೋವು ಪಡಿಸಿ ತನ್ನ ಕೈಯಿಂದ ರಶ್ಮಿತಾ ರವರ ಟೇಬಲ್ ಮುಂದೆ ಹಾಕಿದ ಗ್ಲಾಸಿಗೆ ಮತ್ತು ಕಂಪ್ಯೂಟರ್ ಗೆ ಗುದ್ದಿ ಜಖಂಗೊಳಿಸಿ 40,000/- ರೂಪಾಯಿ ನಷ್ಟ ಉಂಟು ಮಾಡಿ ರಶ್ಮಿತಾ ರವರಿಗೆ ಹಲ್ಲೆ ಮಾಡಿದ್ದಾನೆ ಎಂದು ರಶ್ಮಿತಾ ರವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆಯಲ್ಲಿ  ಕಲಂ: 324(4), 115(2) , 352, & 76 BNS & 3(2) (A) Prevention of Public property Damage act ರಂತೆ ಪ್ರಕರಣ ದಾಖಲಾಗಿದೆ .

error: No Copying!