gettyimages-164849299-612x612.jpg
Spread the love

ಕೋಟ: ದಿನಾಂಕ 11/03/2026 (ಹಾಯ್ ಉಡುಪಿ ನ್ಯೂಸ್) ತೆಕ್ಕಟ್ಟೆ ಗ್ರಾಮದ ಜನಪ್ರಿಯ ಕಾಂಪ್ಲೆಕ್ಸ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಕ್ರಮ ಜುಗಾರಿ ಅಡ್ಡೆಗೆ ಕೋಟ ಪೊಲೀಸ್‌ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಪ್ರವೀಣ್ ಕುಮಾರ್ ಅವರು ದಾಳಿ ನಡೆಸಿ ಹತ್ತು ಜನರನ್ನು ಬಂಧಿಸಿದ್ದಾರೆ.‌

ಕೋಟ ಪೊಲೀಸ್‌ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಪ್ರವೀಣ್ ಕುಮಾರ್ ಅವರು ದಿನಾಂಕ :10-03-2026 ರಂದು ಠಾಣೆಯಲ್ಲಿರುವಾಗ ತೆಕ್ಕಟ್ಟೆ ಗ್ರಾಮದ ಜನಪ್ರಿಯ ಕಾಂಪ್ಲೇಕ್ಸ್ ನ ಒಂದನೇ ಮಹಡಿಯಲ್ಲಿರುವ ಎಸ್ ಪಿ ಕ್ರಿಯೇಷನ್ ಕ್ಲಬ್ ನಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಇಸ್ಪಿಟ್ ಜುಗಾರಿ ಆಡುತ್ತಿದ್ದಾರೆ ಎಂಬುದಾಗಿ ಬಂದ ಸಾರ್ವಜನಿಕ ಮಾಹಿತಿ ಮೇರೆಗೆ ಕೂಡಲೇ ಸಿಬ್ಬಂದಿಯವರೊಂದಿಗೆ ದಾಳಿ ನಡೆಸಿದ್ದಾರೆ .

ಪೊಲೀಸರು ದಾಳಿ ನಡೆಸಿದಾಗ ಸ್ಥಳದಲ್ಲಿ ಇದ್ದ ಆರೋಪಿಗಳಾದ 1. ಸದಾಶಿವ ದೇವಾಡಿಗ, 2. ಜಯರಾಮ, 3. ರಾಘವೇಂದ್ರ, 4. ಗಣೇಶ, 5. ದಯಾನಂದ, 6. ಪ್ರಬಾಕರ, 7. ಸದಾಶಿವ , 8. ಜಯರಾಜ್‌ ಶೆಟ್ಟಿ, 9. ಆನಂದ, 10. ಹರೀಶ ಇವರನ್ನು ಬಂಧಿಸಿದ್ದಾರೆ .

ಜುಗಾರಿಗೆ ಬಳಸಿದ ನಗದು ಹಣ ರೂಪಾಯಿ 65,664/- ,ಕಾಯಿನ್ , ಮೊಬೈಲ್ ಪೋನ್ -10, ಪ್ಲಾಸ್ಟೀಕ್ ಚೇರ್ ಗಳು-31, ದೊಡ್ಡ ರೌಂಡ್ ಟೇಬಲ್ 1,ಸಣ್ಣ ರೌಂಡ್ ಟೇಬಲ್ -1,ಕ್ಲಬ್ ನಲ್ಲಿದ್ದ ಸಿಸಿ ಕ್ಯಾಮೆರಾ ಡಿವಿಆರ್ -1,ಕ್ಲಬ್‌ನ ಲೆಜ್ಜರ್ -2 ಮತ್ತು KA-20-ER-3444 ನೇ ಟಿವಿಎಸ್ ಮೋಟಾರ್ ಸೈಕಲ್ -1 ನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಕೋಟ ಪೊಲೀಸ್‌ ಠಾಣೆಯಲ್ಲಿ ಕಲಂ: 79, 80 KP ACT &112 BNS ರಂತೆ ಪ್ರಕರಣ ದಾಖಲಾಗಿದೆ.

error: No Copying!