gettyimages-681834334-612x612.jpg
Spread the love

ಅಮಾಸೆಬೈಲು: ದಿನಾಂಕ: 08/03/2026 (ಹಾಯ್ ಉಡುಪಿ ನ್ಯೂಸ್) ಹುಲಿಕಲ್ ಘಾಟಿ ಕಡೆಯಿಂದ ಹೊಸಂಗಡಿ ಚೆಕ್ ಪೋಸ್ಟ್ ಕಡೆಗೆ ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ವಾಹನವೊಂದನ್ನು ಅಮಾಸೆಬೈಲು ಪೊಲೀಸರು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ.

ಕುಂದಾಪುರ ತಾಲೂಕು ಹೊಸಂಗಡಿ ಗ್ರಾಮದ ಹೊಸಂಗಡಿ ಚೆಕ್ ಪೋಸ್ಟ್ ನಲ್ಲಿ ದಿನಾಂಕ: 07-03-2026 ರಂದು ಪೊಲೀಸರು ಹಗಲು ಪಾಳಿ ಕರ್ತವ್ಯ ನಿರ್ವಹಿಸಿಕೊಂಡಿರುವಾಗ ಮಾಹಿತಿದಾರರಿಂದ ದೊರೆತ ಖಚಿತ ವರ್ತಮಾನದ ಮೇರೆಗೆ ಹುಲಿಕಲ್ ಘಾಟಿ ಕಡೆಯಿಂದ ಚೆಕ್ ಪೊಸ್ಟ್ ಕಡೆಗೆ ಬರುತ್ತಿದ್ದ KA-69- 0742 ನೇ TATA Intra ವಾಹನವನ್ನು ನೋಡಿ ಪೊಲೀಸರು ವಾಹನ ನಿಲ್ಲುವಂತೆ ಚಾಲಕನಿಗೆ ಸೂಚನೆ ನೀಡಿದ್ದು ವಾಹನವನ್ನು ಚಾಲಕನು ನಿಲ್ಲಿಸದೆ ಮುಂದಕ್ಕೆ ಹೋಗಿದ್ದು ಪೊಲೀಸರು ವಾಹನವನ್ನು ಬೆನ್ನಟ್ಟಿಕೊಂಡು ಹೋಗಿ ಕೆರೆಕಟ್ಟೆ ಸಮೀಪ ತಡೆದು ನಿಲ್ಲಿಸಿ ತಪಾಸಣೆ ಮಾಡಿದಾಗ ವಾಹನದ ಹಿಂದುಗಡೆ ಬಾಡಿಯಲ್ಲಿ ಮೂರು ಎತ್ತುಗಳಿಗೆ (ಗಂಡು ದನ) ಯಾವುದೇ ಮೇವು ಅಹಾರ ನೀಡದೆ ಒಂದಕ್ಕೊಂದು ತಾಗಿಕೊಂಡು ಹಿಂಸಾತ್ಮಕವಾಗಿ ಕಟ್ಟಿ ಹಾಕಿ ತುಂಬಿರುವುದು ಕಂಡು ಚಾಲಕನಲ್ಲಿ ಈ ಬಗ್ಗೆ ವಿಚಾರಣೆ ನಡೆಸಿದ್ದಾರೆ.

ವಾಹನ ದಲ್ಲಿದ್ದ ಜಾನುವಾರುಗಳನ್ನು ಮಾಂಸ ಮಾಡುವ ಉದ್ದೇಶದಿಂದ ವಧೆಗಾಗಿ ಕೊಂಡು ಹೋಗುತ್ತಿರುವುದಾಗಿ ವಾಹನದಲ್ಲಿದ್ದವರು ತಿಳಿಸಿರುತ್ತಾರೆ. ಎರಡು ಎತ್ತುಗಳ ಅಂದಾಜು ಮೌಲ್ಯ 90,000/- ಮತ್ತು TATA Intra ವಾಹನದ ಮೌಲ್ಯ 04 ಲಕ್ಷ ರೂಪಾಯಿಗಳಾಗಬಹುದು. ಅದೇ ವಾಹನದಲ್ಲಿ ಇದ್ದ 1 ನೇ ಕಾನೂನು ಸಂಘರ್ಷಕ್ಕೊಳಗಾದ ಬಾಲಕ ಮತ್ತು ಆಪಾದಿತ ಸೇರಿಕೊಂಡು ಎತ್ತುಗಳನ್ನು ವಧೆ ಮಾಡಲು ಕೊಂಡು ಹೋಗುತ್ತಿದ್ದುದರಿಂದ  ಜಾನುವಾರು ಮತ್ತು ಅವುಗಳನ್ನು ತಂದ ವಾಹನ ಸಮೇತ ವಾಹನದಲ್ಲಿದ್ದವರನ್ನು ವಶ ಪಡಿಸಿಕೊಂಡಿದ್ದಾರೆ .

ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಕಲಂ 4̧ ̧5 7̧ 12̧ prevention of Cow Slaughter and Preservation of Cattle Act 2020 & 11(1) (d) Prevention of Cruelty to animal ActAnd 66(1)R/W 192 (A) IMV Act ರಂತೆ ಪ್ರಕರಣ ದಾಖಲಾಗಿದೆ.

error: No Copying!