ಕಾರ್ಕಳ: ದಿನಾಂಕ 08/03/2026 (ಹಾಯ್ ಉಡುಪಿ ನ್ಯೂಸ್) ನೀರೆ ಗ್ರಾಮದ ನಿವಾಸಿ ದಂಪತಿ ಗಳಿಗೆ ವ್ಯಕ್ತಿ ಯೋರ್ವರು ತಲವಾರು ದಾಳಿ ನಡೆಸಿ ಜೀವ ಬೆದರಿಕೆ ಹಾಕಿರುವ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾರ್ಕಳ ನೀರೆ ಗ್ರಾಮದ ನಿವಾಸಿ ಪುಪ್ಪಲತಾ (34) ಎಂಬವರು ಕಾರ್ಕಳ ತಾಲೂಕಿನ ನೀರೆ ಗ್ರಾಮದ ಬೈಲೂರು ಪಂಚಾಯತ್ ಕಟ್ಡಡದ ಎದುರುಗಡೆ ಇರುವ ಮಹಾಮ್ಮಯಿ ಪಾಸ್ಟ್ ಪುಡ್ ಅಂಗಡಿ ಎದುರುಗಡೆ ದಿನಾಂಕ :06-03-2026 ರಂದು ಇರುವಾಗ ಆರೋಪಿ ಗಣೇಶ ಪೂಜಾರಿ ಎಂಬವನು ಕೆಎ-20 ಎಮ್ಡಿ-8686 ನೇ ನಂಬ್ರದ ಕಾರಿನಲ್ಲಿ ಬಂದು ಪುಷ್ಪಲತಾ ರವರನ್ನು ಅಡ್ಡಗಟ್ಟಿ ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಅವರನ್ನು ಕೊಲೆ ಮಾಡುವ ಉದ್ದೇಶದಿಂದ ಆತನ ಕೈಯಲ್ಲಿ ಇದ್ದ ತಲ್ವಾರನ್ನು ಬೀಸಿರುತ್ತಾನೆ.
ಆಗ ಪುಷ್ಪಲತಾರು ತಲ್ವಾರ್ ಏಟಿನಿಂದ ತಪ್ಪಿಸಿಕೊಂಡಿರುತ್ತಾರೆ. ಆ ಬಳಿಕ ಪುಷ್ಪಲತಾ ರನ್ನು ಹಾಗೂ ಅವರ ಗಂಡ ನನ್ನು ಉದ್ದೇಶಿಸಿ ನನ್ನ ವಿರುದ್ದ ನ್ಯಾಯಾಲಯದಲ್ಲಿ ಸಾಕ್ಷಿ ಹೇಳಿದರೆ ನಿಮ್ಮಿಬ್ಬರನ್ನು ಇದೇ ತಲ್ವಾರ್ನಿಂದ ಕೊಚ್ಚಿ ಕೊಲೆ ಮಾಡುತ್ತೇನೆ, ಎಂದು ಜೀವ ಬೆದರಿಕೆ ಹಾಕಿ ಅವಾಚ್ಯ ಶಬ್ದದಿಂದ ಬೈದಿರುತ್ತಾನೆ.
ಪುಷ್ಪಲತಾರ ಗಂಡ ಆರೋಪಿ ಗಣೇಶ್ ಪೂಜಾರಿಯ ವಿರುದ್ದ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ಮಾನ್ಯ ನ್ಯಾಯಾಲಯದಲ್ಲಿ ಸಾಕ್ಷಿ ನುಡಿದಿರುವುದಕ್ಕೆ ಆರೋಪಿ ಗಣೇಶ್ ಪೂಜಾರಿಯು ಈ ಕೃತ್ಯ ಎಸಗಿದ್ದಾನೆ ಎಂದು ಪುಷ್ಪಲತಾ ರವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 109,232,126(2) 351(2) ಬಿಎನ್ ಎಸ್ ರಂತೆ ಪ್ರಕರಣ ದಾಖಲಾಗಿದೆ.
