ಕುಂದಾಪುರ: ದಿನಾಂಕ:06-03-2026(ಹಾಯ್ ಉಡುಪಿ ನ್ಯೂಸ್) ಸಿದ್ಧಾಪುರ ಅಬ್ಬಿಬೇರು ನಿವಾಸಿ ವ್ಯಕ್ತಿ ಯೋರ್ವರು ಕಾಣೆಯಾಗಿರುವ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕುಂದಾಪುರ , ಸಿದ್ಧಾಪುರ,ಅಬ್ಬಿಬೇರು ನಿವಾಸಿ ಜಾನಕಿ (45) ಎಂಬವರು ಸಂಸಾರದೊಂದಿಗೆ ಪ್ರಸ್ತುತ ಕುಂದಾಪುರದ ವಡೇರಹೋಬಳಿ ಗ್ರಾಮದಲ್ಲಿ ರಾಯಪ್ಪನ ಮಠ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸಮಾಡಿಕೊಂಡಿದ್ದು ಜಾನಕಿ ರವರ ಗಂಡ ಶರತ್ ಕುಮಾರ್ ಶೆಟ್ಟಿ (51) ರವರು ದಿನಾಂಕ 04-03-2026 ರಂದು ಬೆಳಿಗ್ಗೆ9:30 ಗಂಟೆಯ ಸುಮಾರಿಗೆ ಬ್ಯಾಂಕ್ ಗೆ ಹೋಗಿ ಬರಲು ಇದೆ. ಬರುವಾಗ ತಡವಾಗುತ್ತದೆ ಎಂದು ಹೇಳಿ ಹೋಗಿದ್ದು. ಮನೆಯಿಂದ ಹೋಗುವಾಗ ಅವರ ಮೊಬೈಲನ್ನು ಮನೆಯಲ್ಲಿ ಬಿಟ್ಟು ಹೋಗಿದ್ದು ಎಲ್ಲಾ ಕಡೆಗಳಿಗೆ ದೂರವಾಣೆ ಕರೆ ಮಾಡಿ ವಿಚಾರಿಸಿದ್ದು, ಎಲ್ಲಿಯೂ ಮಾಹಿತಿ ದೊರೆಯದೇ ಇದ್ದು ಅವರ ಸಂಬಂಧಿಕರ ಮನೆಗಳಲ್ಲಿ, ಸ್ನೇಹಿತರಲ್ಲಿ ಹಾಗೂ ಅಕ್ಕಪಕ್ಕದವರಲ್ಲಿ ವಿಚಾರಿಸಿ, ಈ ತನಕವೂ ಜಾನಕಿ ರವರ ಗಂಡ ಪತ್ತೆಯಾಗಿರುವುದಿಲ್ಲ.ಕಾಣೆಯಾದವರ ಚಹರೆಯ ಗುರುತು: ಹೆಸರು:ಶರತ್ ಕುಮಾರ್ ಶೆಟ್ಟಿ(51) ಎತ್ತರ: 5 ಅಡಿ 6 ಇಂಚು , ಬೆನ್ನಿನ ಹಿಂಭಾಗ ಜಡ್ಡು [ತಿಳಿ ಕೆಂಪು] ಇರುತ್ತದೆ.ಬಣ್ಣ : ಗೋಧಿ ಮೈ ಬಣ್ಣ, ಬಟ್ಟೆ: ಬಿಳಿ ಬಣ್ಣದ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್, ಕನ್ನಡಕ, ಚಪ್ಪಲಿ ಧರಿಸಿರುತ್ತಾರೆ. ಸಾಧಾರಣ ಶರೀರ,ಬಾಷೆ: ಕನ್ನಡ, ತುಳು, ಹಿಂದಿ ಬಾಷೆ ಮಾತನಾಡುತ್ತಾರೆ ಎಂದು ಜಾನಕಿ ರವರು ಪೋಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ:19/2026 ಕಲಂ: ಗಂಡಸು ಕಾಣೆ ರಂತೆ ಪ್ರಕರಣ ದಾಖಲಾಗಿದೆ.
