ಪಡುಬಿದ್ರಿ: ದಿನಾಂಕ: 24-02-2026 (ಹಾಯ್ ಉಡುಪಿ ನ್ಯೂಸ್) ರಸ್ತೆ ಬದಿಯಲ್ಲಿ ವಾಹನದಲ್ಲಿ ಕಲ್ಲಂಗಡಿ ವ್ಯಾಪಾರ ಮಾಡುತ್ತಿದ್ದ ವ್ಯಕ್ತಿ ಹಾಗೂ ಇತರರು ಪಂಚಾಯತ್ ಸುಂಕ ವಸೂಲಿ ಮಾಡುವ ವ್ಯಕ್ತಿ ಗೆ ಗಂಭೀರ ಹಲ್ಲೆ ನಡೆಸಿರುವ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಪು ನಡ್ಸಾಲು ಗ್ರಾಮದ ನಿವಾಸಿ ಕೆ ಮನ್ಸೂರ್ (34) ಎಂಬವರು ನಡ್ಸಾಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಒಳಪಡುವ ಮಾರ್ಕೆಟ್ ಸುಂಕ ವಸೂಲಿ ಹಕ್ಕನ್ನು ಏಲಂ ಮುಖಾಂತರ ಪಡೆದಿದ್ದು ದಿನಾಂಕ 31/03/2026 ರವರೆಗೆ ವಾಯಿದೆ ಇದ್ದು, ದಿನಾಂಕ 21/02/2026 ರಂದು ಕಾರ್ಕಳ ರಸ್ತೆ ಬದಿಯಲ್ಲಿ ಶರೀಫ್ ಹಾಗೂ ಆರೀಫ್ ಇವರು ಮಹೇಂದ್ರ ಸುಪ್ರೋ ವಾಹನ ನಂಬ್ರ KA-19-AF-3555 ರಲ್ಲಿ ಕಲ್ಲಂಗಡಿ ವ್ಯಾಪಾರ ಮಾಡಿಕೊಂಡಿದ್ದು ಮನ್ಸೂರ್ ರವರು ಕಾಪು ತಾಲೂಕು ನಡ್ಸಾಲು ಗ್ರಾಮದ ಕಾರ್ಕಳ ಹೋಗುವ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡದಂತೆ ತಿಳಿಸಿರುತ್ತಾರೆ.
ನಂತರ ದಿನಾಂಕ 23/02/2026 ರಂದು ಕಾಪು ತಾಲೂಕು ನಡ್ಸಾಲು ಗ್ರಾಮದ ಕಾರ್ಕಳ ಹೋಗುವ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವಾಗ ಮನ್ಸೂರ್ ರವರು ವ್ಯಾಪಾರ ಮಾಡದಂತೆ ಹೇಳಿದಾಗ ವ್ಯಾಪಾರ ಮಾಡುತ್ತಿದ್ದ ಶರೀಫ್, ಆತನ ಮಗ ಶಾನ್ ಹಾಗೂ ಶಾಝಿಲ್‌ನು ಏಕಾಏಕಿ ಮನ್ಸೂರ್ ರನ್ನು ಉದ್ದೇಸಿ ಅವಾಚ್ಯ ಶಬ್ದಗಳಿಂದ ಬೈದು ಶರೀಫನು ಕೈಯಲ್ಲಿದ್ದ ಕಬ್ಬಿಣದ ರಾಡ್‌ನಿಂದ ತಲೆಗೆ ಹೊಡೆಯಲು ಬಂದಾಗ ಮನ್ಸೂರ್ ರ ಕೈಗೆ ತಾಗಿ ಗಾಯವಾಗಿ ರಕ್ತ ಬಂದಿರುತ್ತದೆ. ಶಾನ್ ಈತನು ಚೂರಿಯಿಂದ ತಿವಿಯಲು ಬಂದಾಗ ಮನ್ಸೂರ್ ರವರ ಕೈಗೆ ತಾಗಿರುತ್ತದೆ, ಮನ್ಸೂರ್ ರಿಗೆ ಹಿಂದಿನಿಂದ ಅರಿಫ್ ನು ಮರದ ರೀಪ್‌ನಿಂದ ಹೊಡೆದಿರುತ್ತಾನೆ, ಮನ್ಸೂರ್ ರವರು ತಮ್ಮನ್ನು ರಕ್ಷಿಸಿಕೊಳ್ಳಲು ಬೊಬ್ಬೆ ಹಾಕುವಾಗ ಮನ್ಸೂರ್ ರವರ ಅಣ್ಣ ಪಡುಬಿದ್ರಿ ಗ್ರಾಮ ಪಂಚಾಯತ್ ಸದಸ್ಯರಾದ ಕಲಂದಾರ್ ಶಾಫಿ ರವರಿಗೂ ಕೈಯಿಂದ, ಮರದ ತುಂಡಿನಿಂದ ಹಾಗೂ ಕಬ್ಬಿಣದ ರಾಡ್‌ನಿಂದ ಹಲ್ಲೆ ಮಾಡಿರುತ್ತಾರೆ.
ಮನ್ಸೂರ್ ರವರನ್ನು ಅರ್ಫಾಜ್ ಹಾಗೂ ಆಸೀಪ್ ರವರು ರಕ್ಷಿಸುವಾಗ ಆರೋಪಿಗಳಾದ ಶರೀಫ್, ಆರಿಫ್, ಶಾಝಿಲ್ ಹಾಗೂ ಶಾನ್ ರವರು ಮನ್ಸೂರ್ ರವರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಮನ್ಸೂರ್ ರವರು ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಕಲಂ: 115(2), 118(1), 351(2), 352 ಜೊತೆಗೆ 3(5) BNS ರಂತೆ ಪ್ರಕರಣ ದಾಖಲಾಗಿದೆ.
ಕಾಪು,ನಡ್ಸಾಲು ಗ್ರಾಮದ ನಿವಾಸಿ ಶರೀಫ್ (47) ಎಂಬವರಿಗೂ ಅವರ ಮಗನಿಗೂ ಮನ್ಸೂರ್,ಶಾಫಿ,ಅರ್ಫಾಜ್,ಅಪ್ಪಿ ಹಾಗೂ ಆಸೀಫ್ ಎಂಬವರು ಸ್ಟೀಲ್ ರಾಡ್ ನಿಂದ ಹಲ್ಲೆ ನಡೆಸಿ ನೆಲಕ್ಕೆ ಹಾಕಿ ಒದ್ದು ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಶರೀಫ್ ಅವರು ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರತಿ ದೂರು ದಾಖಲಿಸಿದ್ದಾರೆ.
