ಪಡುಬಿದ್ರಿ: ದಿನಾಂಕ 16-02-2026(ಹಾಯ್ ಉಡುಪಿ ನ್ಯೂಸ್) ನಡ್ಸಾಲು ಗ್ರಾಮದ ಬಾಲಗಣಪತಿ ದ್ವಾರದ ಬಳಿ ಮಟ್ಕಾ ಜುಗಾರಿ ನಡೆಸುತ್ತಿದ್ದ ಮೂವರು ವ್ಯಕ್ತಿಗಳನ್ನು ಪಡುಬಿದ್ರಿ ಪೊಲೀಸ್ ಠಾಣೆಯ ಪಿಎಸ್ಐ ಸಕ್ತಿವೇಲು ಈ ಅವರು ಬಂಧಿಸಿದ್ದಾರೆ.
ಪಡುಬಿದ್ರಿ ಪೊಲೀಸ್ ಠಾಣೆಯ ಪಿಎಸ್ಐ ಸಕ್ತಿವೇಲು ಈ ಅವರು ದಿನಾಂಕ: 15-02-2026 ರಂದು ಠಾಣೆಯಲ್ಲಿರುವಾಗ ಕಾಪು ತಾಲೂಕು ನಡ್ಸಾಲು ಗ್ರಾಮದ ರಾಜ್ಯ ಹೆದ್ದಾರಿ 01 ರ ಬದಿಯ ಬಾಲಗಣಪತಿ ದ್ವಾರದ ಬಳಿ ಮಟ್ಕ ಜುಗಾರಿ (ಓ.ಸಿ) ನಡೆಯುತ್ತಿರುವುದಾಗಿ ಸಾರ್ವಜನಿಕರು ನೀಡಿದ ಖಚಿತ ಮಾಹಿತಿ ಮೇರೆಗೆ, ಪಿಎಸ್ಐ ರವರು ಸಿಬ್ಬಂದಿಯವರನ್ನು ಕರೆದುಕೊಂಡು ಕಾಪು ತಾಲೂಕು ನಡ್ಸಾಲು ಗ್ರಾಮದ ರಾಜ್ಯ ಹೆದ್ದಾರಿ 01 ಬದಿಯ ಬಾಲಗಣಪತಿ ದ್ವಾರದ ಬಳಿ ಹೋಗಿ ನೋಡಿದಾಗ ಅಲ್ಲಿ ಸಾರ್ವಜನಿಕರು ಸೇರಿದ್ದು ಇಬ್ಬರು ಸಾರ್ವಜನಿಕರಿಂದ ಹಣವನ್ನು ಪಡೆದು ಚೀಟಿ ಬರೆದುಕೊಡುತ್ತಿರುವುದು ಕಂಡುಬಂದಿದ್ದು, ಪೊಲೀಸ್ ವಾಹನ ಹಾಗೂ ಸಮವಸ್ತ್ರದಲ್ಲಿರುವ ಸಿಬ್ಬಂದಿಯವರನ್ನುನೋಡಿ ಸಾರ್ವಜನಿಕರು ಓಡಿ ಹೋಗಿದ್ದಾರೆ .
ಸಿಬ್ಬಂದಿಯವರ ಸಹಾಯದಿಂದ ಮೂವರು ವ್ಯಕ್ತಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಚೇತನ್ ಕುಮಾರ್, ದಿವಾಕರ ಹಾಗೂ ಮನೋಜ್ ಕೋಟ್ಯಾನ್ ಎಂಬುದಾಗಿ ತಿಳಿಸಿದ್ದು, ಆರೋಪಿಗಳು ತಮ್ಮ ಸ್ವಂತ ಲಾಭಕ್ಕಾಗಿ ಒಟ್ಟಾಗಿ ಮಟ್ಕಾ ಜುಗಾರಿ ಆಟದ ಬಗ್ಗೆ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸಿ, ಸಂಗ್ರಹ ಮಾಡಿದ ಹಣವನ್ನು ಮನೋಜ್ ಕೋಟ್ಯಾನ್ನಿಗೆ ನೀಡುತ್ತಿರುವುದಾಗಿ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ .
ಆರೋಪಿಗಳನ್ನು ಬಂಧಿಸಿ ವಶಕ್ಕೆ ಪಡೆದು ಅವರಿಂದ ಮಟ್ಕಾ ಜುಗಾರಿ ಆಟಕ್ಕೆ ಬಳಸಿದ ಬಾಲ್ ಪೆನ್ನು, ಮಟ್ಕಾ ಚೀಟಿ ಹಾಗೂ ಆರೋಪಿ ಚೇತನ್ ಕುಮಾರ್ ಈತನಿಂದ ನಗದು ರೂ 10320/-ನ್ನು ಸ್ವಾಧೀನಪಡಿಸಿ ಕೊಂಡಿದ್ದಾರೆ.
ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಕಲಂ:78(3) KP ಕಲಂ 112 BNS ರಂತೆ ಪ್ರಕರಣ ದಾಖಲಾಗಿದೆ.
