ಕೊಲ್ಲೂರು: ದಿನಾಂಕ:15-02-2026(ಹಾಯ್ ಉಡುಪಿ ನ್ಯೂಸ್) ನೆರೆ ಮನೆಯ ನಾಯಿ ಮನೆಯೊಳಗೆ ಬಂದಿದ್ದಕ್ಕೆ ಹೊಡೆದರು ಎಂಬ ಕಾರಣಕ್ಕೆ ನೆರೆ ಮನೆಯ ವ್ಯಕ್ತಿ ವಯೋವೃದ್ಧೆಗೆ ಹಲ್ಲೆ ನಡೆಸಿರುವ ಘಟನೆ ಕುಂಜಾಡಿ ಗ್ರಾಮದ ಇಡೂರಿನಲ್ಲಿ ನಡೆದಿದೆ.
ದಿನಾಂಕ 12/02/2026 ರಂದು ಬೆಳಿಗ್ಗೆ ಆಪಾದಿತ ಉಮೇಶ ಎಂಬಾತನ ಮನೆಯ ನಾಯಿ ಕುಂದಾಪುರ ಇಡೂರು ಕುಂಜಾಡಿ ಗ್ರಾಮದ ನಿವಾಸಿ ಮಂಜುನಾಥ (60) ಎಂಬವರ ಮನೆಯೊಳಗೆ ಬಂದಿದ್ದು, ಮಂಜುನಾಥ ರವರ ತಾಯಿ ಗಂಗಮ್ಮ (85) ಅವರು ನಾಯಿಗೆ ಹೊಡೆದು ಓಡಿಸಿದ್ದು, ಈ ವಿಚಾರಕ್ಕೆ ಆಪಾದಿತ ಉಮೇಶ ನು ಮಂಜುನಾಥ ರವರ ಹಾಗೂ ಅವರ ತಾಯಿ ಜೊತೆಗೆ ಜಗಳಕ್ಕೆ ಬಂದಾಗ ಮಂಜುನಾಥ ಅವರು ಪಂಚಾಯತ್ ಗೆ ಕಂಪ್ಲೈಂಟ್ ಕೊಡುವುದಾಗಿ ತಿಳಿಸಿರುತ್ತಾರೆ.
ಬೆಳಿಗ್ಗೆ 11:00 ಗಂಟೆಗೆ ಮಂಜುನಾಥ ರವರು ಹಾಗೂ ಗಂಗಮ್ಮ ಪಂಚಾಯತ್ ಕಛೇರಿಗೆ ದೂರು ನೀಡಲು ಪಂಚಾಯತ್ ನೀರಿನ ಟ್ಯಾಂಕ್ ಬಳಿ ರಸ್ತೆಯಲ್ಲಿ ನಡೆದುಕೊಂಡು ಹೋಗುವ ಸಮಯ ಆಪಾದಿತ ಉಮೇಶ ನು ಗಂಗಮ್ಮ ರವರನ್ನು ತಡೆದು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆದು ದೂಡಿ ಹಾಕಿದ ಪರಿಣಾಮ ಗಂಗಮ್ಮ ರವರ ಸೊಂಟ ಹಾಗೂ ಎಡಕೈ ಗೆ ಒಳ ನೋವಾಗಿ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ಚಿಕಿತ್ಸೆಗೆ ದಾಖಲಾಗಿದ್ದಾರೆ.
ಈ ಬಗ್ಗೆ ಮಂಜುನಾಥ ಅವರು ನೀಡಿದ ದೂರಿನಂತೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಕಲಂ: 126(2), 352, 115(2) BNS ರಂತೆ ಪ್ರಕರಣ ದಾಖಲಾಗಿದೆ.
