images-1.jpeg
Spread the love

ಬೆಂಗಳೂರು: ದಿನಾಂಕ: 13-02-2026 (ಹಾಯ್ ಉಡುಪಿ ನ್ಯೂಸ್)

ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಮೇರೆಗೆ ಲೋಕಾಯುಕ್ತ ಪೊಲೀಸರು ನಾಲ್ವರು ಭ್ರಷ್ಟ ಸರ್ಕಾರಿ ಅಧಿಕಾರಿಗಳಿಗೆ ಸೇರಿದ 29 ಸ್ಥಳಗಳ ಮೇಲೆ ಗುರುವಾರ ದಾಳಿ ನಡೆಸಿದ್ದರು. ದಾಳಿ ವೇಳೆ 23.75 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಪತ್ತೆ ಹಚ್ಚಿ ಜಪ್ತಿ ಮಾಡಲಾಗಿದೆ.

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಸೂಪರಿಂಟೆಂಡ್‌ ಎಂಜಿನಿಯರ್‌ ಎಚ್‌.ಎಂ ಜನಾರ್ದನ ಅವರ ಆಪ್ತರ ಮನೆಯಲ್ಲಿ 1.70 ಕೋಟಿ ನಗದು ಸೇರಿ ಒಟ್ಟು 19.71 ಕೋಟಿಯಷ್ಟು ಅಕ್ರಮ ಆಸ್ತಿ ಪತ್ತೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಕೆ-ಶಿಪ್‌ ಕಾರ್ಯನಿರ್ವಾಹಕ ಎಂಜಿನಿಯರ್ ಪುರುಷೋತ್ತಮ ದಾಸ್ ಹೆಗಡೆ ಬಳಿ 11.29 ಕೋಟಿ ಅಕ್ರಮ ಆಸ್ತಿ ಪತ್ತೆಯಾಗಿದೆ. ಇನ್ನು ದಾವಣಗೆರೆಯಲ್ಲಿ ಬೆಸ್ಕಾಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅರ್ಜುನ್ ಬಳಿ 2.18 ಕೋಟಿ ಅಕ್ರಮ ಆಸ್ತಿ, ಧಾರವಾಡದಲ್ಲಿ ಸರ್ವೆ ಮೇಲ್ವಿಚಾರಕ ಸೋಮಲಿಂಗಪ್ಪ ಬಳಿ 1.82 ಕೋಟಿ ಅಕ್ರಮ ಆಸ್ತಿ ಪತ್ತೆಯಾಗಿದೆ.

error: No Copying!