ಮಣಿಪಾಲ: ದಿನಾಂಕ:14-02-2026(ಹಾಯ್ ಉಡುಪಿ ನ್ಯೂಸ್) ಆತ್ಮೀಯ ಸ್ನೇಹಿತರು ಸಾಲ ನೀಡುವುದಾಗಿ ನಂಬಿಸಿ ಜಮೀನು ದಾಖಲೆ ಪತ್ರಗಳನ್ನು ಪಡೆದು ವಾಪಸ್ ನೀಡದೆ ವಂಚನೆ ನಡೆಸಿದ್ದಾರೆ ಎಂದು ಅಲೆವೂರು ನಿವಾಸಿ ಅಬಿಜಯ್ ಜುಲೀಯನ್ ಪಿಂಟೋ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.
ಮಣಿಪಾಲ ಅಲೆವೂರು ರಸ್ತೆ ನಿವಾಸಿ ಅಬಿಜಯ್ ಜುಲೀಯನ್ ಪಿಂಟೋ(45) ಎಂಬವರು ಹಾಗೂ ಆರೋಪಿತರಾದ 1.ರಾಮ ಗೋಪಾಲ ನಾಯಕ್, 2.ವಸಂತಿ ಜಿ ನಾಯಕ್ ಇವರು ಆತ್ಮೀಯ ಸ್ನೇಹಿತರಾಗಿದ್ದು ಅಬಿಜಯ್ ಜುಲೀಯನ್ ಪಿಂಟೋ ಆರೋಪಿತರಿಂದ 2019 ರಲ್ಲಿ 35,00,000/- ರೂಪಾಯಿ ಸಾಲವಾಗಿ ಪಡೆದಿದ್ದು, ಆ ಸಮಯ ಖಾಲಿ ಚೆಕ್ ಗಳನ್ನು ಹಾಗೂ ಜಮೀನಿನ ದಾಖಲೆಗಳ ಮೂಲ ಪತ್ರವನ್ನು ನೀಡಬೇಕೆಂದು ಅಬಿಜಯ್ ಜುಲೀಯನ್ ಪಿಂಟೋ ರಿಗೆ ಹೇಳಿದ್ದು ಆದರಂತೆ ಅಬಿಜಯ್ ಜುಲೀಯನ್ ಪಿಂಟೋ ರವರು ಒಪ್ಪಿಕೊಂಡು ದಾಖಲೆ ಪತ್ರಗಳನ್ನು ನೀಡಿ ಹಣವನ್ನು ಪಡೆದಿರುತ್ತಾರೆ.
ನಂತರ ಅಬಿಜಯ್ ಜುಲೀಯನ್ ಪಿಂಟೋ ರವರು 9,00,000/- ಹಣವನ್ನು ವಾಪಾಸ್ಸು ನೀಡಿ ದಾಖಲೆ ಪತ್ರಗಳನ್ನು ವಾಪಾಸ್ಸು ಕೊಡುವಂತೆ ತಿಳಿಸಿದಾಗಲೂ ಆರೋಪಿತರು ಉದ್ದೇಶಪೂರ್ವಕವಾಗಿ ದಾಖಲಾತಿ ಪತ್ರಗಳನ್ನು ಮತ್ತು ಹಣವನ್ನು ವಾಪಾಸ್ಸು ನೀಡದೆ ಅಬಿಜಯ್ ಜುಲೀಯನ್ ಪಿಂಟೋ ರವರಿಗೆ ಮೋಸ ಮಾಡಿ ನಂಬಿಕೆ ದ್ರೋಹ ಮಾಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಅಬಿಜಯ್ ಜುಲೀಯನ್ ಪಿಂಟೋ ರವರು ನೀಡಿದ ಖಾಸಗಿ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಕಲಂ: 203,204, 406,448 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
