ದಿನಾಂಕ: 12-02-2026 (ಹಾಯ್ ಉಡುಪಿ ನ್ಯೂಸ್)
ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರದ ಓವರ್‌ಸೀಸ್ ಬಿಡುಗಡೆ ಹಕ್ಕುಗಳನ್ನು ದೊಡ್ಡ ಮೊತ್ತಕ್ಕೆ ಪ್ರತಿಷ್ಠಿತ ಫಾರ್ಸ್ ಫಿಲಮ್ (ಪಿಎಚ್‌ಎಫ್) ತನ್ನದಾಗಿಸಿಕೊಂಡಿದೆ. ಈಗಾಗಲೇ ಮುಂಗಡವಾಗಿ ಫಾರ್ಸ್ ಫಿಲಮ್ 105 ಕೋಟಿ ರೂ.ಗಳನ್ನು ನೀಡಿರುವುದು ವಿಶೇಷ.
ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಮುಂತಾದ ಭಾರತೀಯ ಭಾಷೆಗಳ ಓವರ್‌ಸೀಸ್ ವಿತರಣೆ ಹಕ್ಕು ಪಿಎಚ್‌ಎಫ್ ಪಾಲಾಗಿದೆ. ಈ ಮೂಲಕ ವಿದೇಶಿ ಮಾರುಕಟ್ಟೆಯಲ್ಲಿ ಬಿಡುಗಡೆಗೂ ಮುನ್ನವೇ ಇಷ್ಟು ದೊಡ್ಡ ಮೊತ್ತವನ್ನು ಪಡೆದಿರುವ ಹೆಗ್ಗಳಿಕೆಗೆ ಯಶ್ ಸಿನಿಮಾ ಪಾತ್ರವಾಗಿದೆ.
ಇದಕ್ಕೂ ಮೊದಲು ಆಂಧ್ರ- ತೆಲಂಗಾಣ ರಾಜ್ಯಗಳ ವಿತರಣೆ ಹಕ್ಕುಗಳನ್ನು 120 ಕೋಟಿ ರೂ.ಗೆ ಒಪ್ಪಂದ ಮಾಡಿಕೊಂಡ ಮೊದಲ ತೆಲುಗುಯೇತರ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಟಾಕ್ಸಿಕ್ ಪಾತ್ರವಾಗಿದೆ. ಮಾ.19ಕ್ಕೆ ವಿಶ್ವದಾದ್ಯಂತ ಸಿನಿಮಾ ತೆರೆಗೆ ಬರುತ್ತಿದೆ.
