ದಿನಾಂಕ:11-02-2026(ಹಾಯ್ ಉಡುಪಿ ನ್ಯೂಸ್)
ಉಡುಪಿ : ಬನ್ನಂಜೆ ಗರಡಿ ರಸ್ತೆ ನಿವಾಸಿ ಬಸ್ ಏಜೆಂಟೊಬ್ಬರು, ಮನೆಯ ಹತ್ತಿರದ ಬಾವಿಗೆ ಜಿಗಿದು ಆತ್ಯಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ನಡೆದಿದೆ. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರೆಂದು ಹೇಳಲಾಗಿದೆ . ಮೃತ ವ್ಯಕ್ತಿ ಕೆ. ರಾಜೇಶ್ ಶೆಣೈ ತಂದೆ ಸದಾನಂದ ಶೆಣೈ ಎಂದು ತಿಳಿದುಬಂದಿದೆ.
ಶವವನ್ನು ಬಾವಿಯಿಂದ ಮೇಲೆತ್ತುವ ಕಾರ್ಯಾಚರಣೆ ಈಶ್ವರ್ ಮಲ್ಪೆ ಅವರ ತಂಡದವರಿಂದ ನಡೆಯಿತು. ಶವವನ್ನು ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದ್ದು,ನಗರ ಪೋಲಿಸ್ ಠಾಣೆಯ ಎಸ್. ಐ ನಾರಾಯಣ, ಹೆಡ್ ಕಾನ್ಸ್ಟೇಬಲ್ ನೇತ್ರಾವತಿ ಅವರು ಕಾನೂನು ಪ್ರಕ್ರಿಯೆ ನಡೆಸಿದರು.
