ಪಡುಬಿದ್ರಿ: ದಿನಾಂಕ 11/02/2026 (ಹಾಯ್ ಉಡುಪಿ ನ್ಯೂಸ್) ನವರಂಗ್ ಬಾರ್ ಹಿಂಬದಿಯಲ್ಲಿ ಮಟ್ಕಾ ಜುಗಾರಿ ನಡೆಸುತ್ತಿದ್ದ ವ್ಯಕ್ತಿಯನ್ನು ಪಡುಬಿದ್ರಿ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಸಕ್ತಿವೇಲು ಈ ಅವರು ಬಂಧಿಸಿದ್ದಾರೆ.
ಪಡುಬಿದ್ರಿ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಸಕ್ತಿವೇಲು ಈ, ಅವರಿಗೆ ದಿನಾಂಕ :10-02-2026ರಂದು ನಡ್ಸಾಲು ಗ್ರಾಮದ ಪಡುಬಿದ್ರಿ ನವರಂಗ್ ಬಾರ್ ಹಿಂಬದಿ ಕೆಲವರು ಗುಂಪು ಸೇರಿ ಮಟ್ಕ ಜುಗಾರಿ (ಓ.ಸಿ) ಆಟ ಆಡಿಸುತ್ತಿರುವುದಾಗಿ ಬಂದ ಸಾರ್ವಜನಿಕ ಮಾಹಿತಿ ಮೇರೆಗೆ ಕೂಡಲೇ ಕಾಪು ತಾಲೂಕು ನಡ್ಸಾಲು ಗ್ರಾಮದ ಪಡುಬಿದ್ರಿ ನವರಂಗ್ ಬಾರ್ ಹಿಂದೆ ತಮ್ಮ ಸ್ವಂತ ಲಾಭಕ್ಕೊಸ್ಕರ ಹಣವನ್ನು ಪಣಕ್ಕಿಟ್ಟು ಓ.ಸಿ (ಮಟ್ಕಾ) ಆಡುತ್ತಿರುವ ಸ್ಥಳಕ್ಕೆ ದಾಳಿ ನಡೆಸಿದ್ದಾರೆ.
ಅಲ್ಲಿ ಮಟ್ಕಾ ಆಟ ಆಡುತ್ತಿದ್ದ ಆರೋಪಿ ಅಬ್ದುಲ್ ರಜಾಕ ಯಾನೆ ಮೋನು ಎಂಬಾತನನ್ನು ಬಂಧಿಸಿ ವಶಕ್ಕೆ ಪಡೆದು ಆತನ ವಶದಿಂದ ಮಟ್ಕಾ ಜುಗಾರಿ ಆಟಕ್ಕೆ ಬಳಸಿದ ಬಾಲ್ ಪೆನ್ನು ಮಟ್ಕಾ ಚೀಟಿ ಹಾಗೂ ನಗದು ರೂಪಾಯಿ 5060/- ನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ .
ಆರೋಪಿ ಅಬ್ದುಲ್ ರಜಾಕ್ ಯಾನೆ ಮೋನು ಸಂಗ್ರಹಿಸಿದ ಮಟ್ಕಾ ಹಣವನ್ನು ಮನೋಜ್ ಉಚ್ಚಿಲ ಎಂಬಾತ ಸಂಜೆ ವೇಳೆ ಸ್ಥಳಕ್ಕೆ ಬಂದು ಪಡೆದುಕೊಳ್ಳುತ್ತಿದ್ದ ಎಂದು ತಿಳಿಸಿದ್ದಾನೆ ಎಂದು ಪೊಲೀಸರು ದೂರಿನಲ್ಲಿ ದಾಖಲಿಸಿದ್ದಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಕಲಂ: 78(3) KP, ಕಲಂ: 112 BNS ರಂತೆ ಪ್ರಕರಣ ದಾಖಲಾಗಿದೆ.
