ಪಡುಬಿದ್ರಿ: ದಿನಾಂಕ 11/02/2026 (ಹಾಯ್ ಉಡುಪಿ ನ್ಯೂಸ್) ಪಾದೆ ಬೆಟ್ಟು ಸುಬ್ರಹ್ಮಣ್ಯ ದ್ವಾರದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ನಡೆಸುತ್ತಿದ್ದ ವ್ಯಕ್ತಿಯನ್ನು ಪಡುಬಿದ್ರಿ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಸಕ್ತಿವೇಲು ಈ ಅವರು ಬಂಧಿಸಿದ್ದಾರೆ.
ಪಡುಬಿದ್ರಿ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಸಕ್ತಿವೇಲು ಈ, ಅವರು ದಿನಾಂಕ:10-02-2026 ರಂದು ರೌಂಡ್ಸ್ ನಲ್ಲಿ ಇರುವಾಗ ಸಂಜೆ ಬಂದ ಸಾರ್ವಜನಿಕ ಮಾಹಿತಿ ಮೇರೆಗೆ ಕಾಪು ತಾಲೂಕು ಪಾದೆಬೆಟ್ಟು ಗ್ರಾಮದ ಪಾದೆಬೆಟ್ಟು ಸುಬ್ರಹ್ಮಣ್ಯ ದ್ವಾರದ ಬಳಿ ಸಂಘಟಿತರಾಗಿ ತಮ್ಮ ತಮ್ಮ ಸ್ವಂತ ಲಾಭಕ್ಕೊಸ್ಕರ ಹಣವನ್ನು ಪಣಕ್ಕಿಟ್ಟು ಓ.ಸಿ (ಮಟ್ಕಾ) ಆಡುತ್ತಿರುವ ಸ್ಥಳಕ್ಕೆ ದಾಳಿ ನಡೆಸಿ ಮಟ್ಕಾ ಆಟ ಆಡುತ್ತಿದ್ದ ಆರೋಪಿ ಸುಕೇಶ್ ಪೂಜಾರಿ ಎಂಬಾತನನ್ನು ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದಾರೆ .
ಆತನ ವಶದಿಂದ ಮಟ್ಕಾ ಜುಗಾರಿ ಆಟಕ್ಕೆ ಬಳಸಿದ ಬಾಲ್‌ಪೆನ್ನು ಮಟ್ಕಾ ಚೀಟಿ ಹಾಗೂ ನಗದು ರೂಪಾಯಿ 4,050/-ನ್ನು ಸ್ವಾದೀನಪಡಿಸಿದ್ದು,ಆರೋಪಿ ಸುಕೇಶ್ ಪೂಜಾರಿಯು ಸಂಗ್ರಹಿಸಿದ ಹಣವನ್ನು ಉಚ್ಚಿಲದ ಮನೋಜ್ ಎಂಬಾತ ಸಂಜೆ ವೇಳೆ ಸ್ಥಳಕ್ಕೆ ಬಂದು ಪಡೆದುಕೊಳ್ಳುತ್ತಿದ್ದನು ಎಂದು ಪೊಲೀಸರಿಗೆ ತನಿಖೆಯ ವೇಳೆ ತಿಳಿಸಿದ್ದಾನೆ ಎಂದು ದೂರಿನಲ್ಲಿ ದಾಖಲಿಸಿದ್ದಾರೆ.
ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಕಲಂ: 78(3) KP ACT, ಕಲಂ: 112 BNS ರಂತೆ ಪ್ರಕರಣ ದಾಖಲಾಗಿದೆ.
