IMG_20260207_012211.jpg
Spread the love

ಕಾಪು : ದಿನಾಂಕ:07-02-2026(ಹಾಯ್ ಉಡುಪಿ ನ್ಯೂಸ್) ಏಣಗುಡ್ಡೆ ಗ್ರಾಮದ ತೆಕ್ಕಲ್ ತೋಟ ಬಸ್ ನಿಲ್ದಾಣದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ನಡೆಸುತ್ತಿದ್ದ ವ್ಯಕ್ತಿಯನ್ನು ಕಾಪು ಪೊಲೀಸ್‌ ಠಾಣೆಯ ಪಿಎಸ್ಐ ತೇಜಸ್ವಿ ಟಿ.ಐ ರವರು ಬಂಧಿಸಿದ್ದಾರೆ.

ಕಾಪು ಪೊಲೀಸ್‌ ಠಾಣೆಯ ಪಿ.ಎಸ್.ಐ, ತೇಜಸ್ವಿ ಟಿ.ಐ ರವರು ದಿನಾಂಕ: 06-02-2026 ರಂದು ಕಾಪು ಪುರಸಭೆಯ ವತಿಯಿಂದ ಕಾಪು ಪೇಟೆಯಲ್ಲಿ ನಡೆಯುತ್ತಿದ್ದ ರಿಕ್ಷಾ ನಿಲ್ದಾಣದ ತೆರವು ಕಾರ್ಯಕ್ರಮದ ಬಂದೋಬಸ್ತ್‌ ಕರ್ತವ್ಯದಲ್ಲಿರುವ ಸಮಯ ಮಾಹಿತಿದಾರರೋರ್ವರು ಪಿಎಸ್ಐರವರಿಗೆ ಕರೆ ಮಾಡಿ ಏಣಗುಡ್ಡೆ ಗ್ರಾಮದ, ತೆಕ್ಕಲ್‌ ತೋಟ ಬಸ್‌ ನಿಲ್ದಾಣದ ಎದುರು ರಾ.ಹೆ 66 ಉಡುಪಿ-ಮಂಗಳೂರು ರಸ್ತೆಯ ಬದಿಯಲ್ಲಿರುವ ಮರದ ಕೆಳಗಡೆ ಓರ್ವ ವ್ಯಕ್ತಿ ಸಾವ೯ಜನಿಕರಿಂದ ಹಣ ಸಂಗ್ರಹಿಸಿ ಮಟ್ಕಾ ಜುಗಾರಿ ಆಟ ಆಡುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ.

ಕೂಡಲೇ ಪಿಎಸ್ಐ ಯವರು ಮಾಹಿತಿ ಬಂದ ಸ್ಥಳಕ್ಕೆ ಧಾಳಿ ನಡೆಸಿದ್ದಾರೆ .

ಮಾಹಿತಿ ಬಂದ ಸ್ಥಳವಾದ ಏಣಗುಡ್ಡೆ ಗ್ರಾಮದ, ತೆಕ್ಕಲ್‌ ತೋಟ ಬಸ್‌ ನಿಲ್ದಾಣದ ಎದುರುಗಡೆ ಪೊಲೀಸರು ಹೋದಾಗ ರಾ.ಹೆ 66 ಉಡುಪಿ-ಮಂಗಳೂರು ರಸ್ತೆಯ ಬದಿಯಲ್ಲಿರುವ ಮರದ ಕೆಳಗಡೆ 3-4 ಜನರು ಗುಂಪು ಸೇರಿಕೊಂಡಿದ್ದು, ಜೀಪನ್ನು ನಿಲ್ಲಿಸುತ್ತಿದ್ದಂತೆಯೇ ಅಲ್ಲಿ ಸೇರಿದ್ದವರೆಲ್ಲರೂ ಓಡಿ ಹೋಗಿದ್ದು, ಅದೇ ಗುಂಪಿನ ಮದ್ಯದಲ್ಲಿ ನೆಲದ ಮೇಲೆ ಕುಳಿತುಕೊಂಡು ಕೈಯಲ್ಲಿ ಚೀಟಿ, ಪೆನ್‌, ಹಣ ಹಾಗೂ ಮೊಬೈಲ್‌ ಪೋನ್‌ ನ್ನು ಹಿಡಿದುಕೊಂಡು ಪರಿಶೀಲಿಸುತ್ತಿದ್ದ ವ್ಯಕ್ತಿಯ ಬಳಿ ಹೋಗಿ, ಪೊಲೀಸರು ಆತನನ್ನು ವಿಚಾರಿಸಿದಾಗ ತನ್ನ ಹೆಸರು ಸೃಜನ್‌ ಎಂಬುದಾಗಿಯೂ ತಾನು ಸುಮಾರು ದಿನಗಳಿಂದ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸುತ್ತಾ OC ಎಂಬ ಮಟ್ಕ ಜುಗಾರಿ ಆಟವನ್ನು ಆಡಿಸುತ್ತಿದ್ದು, ಇದರಿಂದ ಸಾರ್ವಜನಿಕರಿಗೆ 1 ರೂಪಾಯಿಗೆ 70 ರೂಪಾಯಿಯನ್ನು ನೀಡುತ್ತಿದ್ದೆನು. ತಾನು ಸಾರ್ವಜನಿಕರಿಂದ ಸಂಗ್ರಹಿಸಿದ ಹಣವನ್ನು ಪ್ರತಿದಿನ ಸಂಜೆ ಆರೋಜ್‌ ಎಂಬವರಿಗೆ ನೀಡುತ್ತಿದ್ದು, ಆರೋಜ್‌ ರವರು ಆ ಹಣವನ್ನು ಉಡುಪಿಯ ಲಿಯೋ ಎಂಬವರಿಗೆ ನೀಡುತ್ತಾರೆ.

ಇದೇ ರೀತಿಯಾಗಿ ಹಲವು ದಿನಗಳಿಂದಲೂ ಕೂಡಾ OC ಎಂಬ ಮಟ್ಕ ಜುಗಾರಿ ಆಟವನ್ನು ಆಡಿಸುತ್ತಾ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸಿ ಆರೋಜ್‌ ಎಂಬವರಿಗೆ ನೀಡಿದ್ದು, ಅವರು ಲಿಯೋ ರವರಿಗೆ ನೀಡಿರುತ್ತಾರೆ. ಇದರಿಂದ ತನಗೆ 1000/- ರೂಗೆ 100/- ರೂ ರಂತೆ ಕಮಿಷನ್‌ ನೀಡುತ್ತಾರೆ. ಎಂಬುದಾಗಿ ಪೊಲೀಸರಿಗೆ ತಿಳಿಸಿರುತ್ತಾನೆ.

ಆಪಾದಿತನ ವಶದಲ್ಲಿದ್ದ ಮಟ್ಕ ಚೀಟಿ-1, ಬಾಲ್‌ ಪೆನ್‌-1, ನಗದು ಹಣ 1440/- ಹಾಗೂ ಒಂದು ಮೊಬೈಲ್‌ ಪೋನ್‌ ನ್ನು  ಸ್ವಾಧೀನ ಪಡಿಸಿಕೊಂಡಿದ್ದಾರೆ. ಆಪಾದಿತ ಸೃಜನ್‌ ನ್ನು ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದು, ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ OC ಎಂಬ ಮಟ್ಕ ಜುಗಾರಿ ಆಟ ಆಡಿಸುತ್ತಾ  ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದ ಸೃಜನ್‌ ಹಾಗೂ ಈ ಕೃತ್ಯದ ಸಂಘಟಿತ ಪಾಲುದಾರರಾದ ಆರೋಜ್‌ ಮತ್ತು ಲಿಯೋ ಎಂಬವರ ವಿರುದ್ಧ ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ: 18/2026 ಕಲಂ: 112 BNS ಮತ್ತು 78 (i), 78(iii)  KP Act ರಂತೆ ಪ್ರಕರಣ ದಾಖಲಾಗಿದೆ.

error: No Copying!