ದಿನಾಂಕ:06-02-2026 (ಹಾಯ್ ಉಡುಪಿ ನ್ಯೂಸ್)
ಕುಂದಾಪುರ ತಾಲೂಕು ಅಮಾಸೆಬೈಲು ಶಾಲೆಗೆ ಹೋಗುತ್ತಿದ್ದ ಪರಿಶಿಷ್ಟ ಜಾತಿಗೆ ಸೇರಿದ ಅಪ್ರಾಪ್ತೆ ಬಾಲಕಿಯನ್ನು ರಿಕ್ಷಾದಲ್ಲಿ ಯಾವಾಗಲು ಶಾಲೆಗೆ ಕರೆದುಕೊಂಡು ಹೋಗಿ ಕರೆದುಕೊಂಡು ಬರುತ್ತಿದ್ದ ರಿಕ್ಷಾ ಚಾಲಕ ಶರತ್ ಶೆಟ್ಟಿ ಮತ್ತು ಈತನ ಸ್ನೇಹಿತ ಪ್ರಶಾಂತ್ ನಾಯ್ಕ್ ಇವರು ಈರ್ವರು ಲೈಂಗಿಕ ಕಿರುಕುಳ ನೀಡಿದ್ದು, ಈ ಬಗ್ಗೆ ನೊಂದ ಬಾಲಕಿ ಶಾಲೆಯ ಅಧ್ಯಾಪಕರಲ್ಲಿ ವಿಷಯವನ್ನು ತಿಳಿಸಿದಂತೆ ಶಾಲೆಯ ಅಧ್ಯಾಪಕರು ಈ ಬಗ್ಗೆ ದಿನಾಂಕ 15-07-2025 ರಂದು ಅಮಾಸೆಬೈಲ್ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದರು.
ದೂರಿನ ಮೇರೆಗೆ ಅಮಾಸೆಬೈಲ್ ಪೊಲೀಸ್ ಠಾಣೆಯಲ್ಲಿ ಅಪರಾದ ಕ್ರಮಾಂಕ 24/2025 ಕಲಂ 75(1)(i), 75(2) ಜೊತೆಗೆ 3(5) BNS-2023 ಮತ್ತು ಕಲಂ 9(g),(l),(m), 10 POCSO Act ಮತ್ತು ಕಲಂ 3(1)(w-i), 3(2)(v-a) SC/ST (P.O.A) Act-2015 (Amendment) ರಂತೆ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣವನ್ನು ಕುಂದಾಪುರ ಡಿವೈ.ಸ್.ಪಿ ಹೆಚ್.ಡಿ ಕುಲಕರ್ಣಿ ಇವರು ತನಿಖೆಯನ್ನು ನಡೆಸಿ 15 ದಿನಗಳಲ್ಲಿ ತನಿಖೆಯನ್ನು ಪೂರ್ಣಗೊಳಿಸಿ ಆರೋಪಿತರಾದ ಶರತ್ ಶೆಟ್ಟಿ, ತಂದೆ : ಭಾಸ್ಕರ ಶೆಟ್ಟಿ, ಮಚ್ಚಟ್ಟು ಗ್ರಾಮ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ ಮತ್ತು ಪ್ರಶಾಂತ್ ನಾಯ್ಕ್, ತಂದೆ : ಬಸವ ನಾಯ್ಕ್, ಮಚ್ಚಟ್ಟು ಗ್ರಾಮ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ ಇವರ ಮೇಲೆ ದೋಷಾರೋಪಣೆ ಪಟ್ಟಿಯನ್ನು ಉಡುಪಿಯ ಮಾನ್ಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ–FTSC-1 (POCSO ನ್ಯಾಯಾಲಯ) ಕ್ಕೆ ಸಲ್ಲಿಸಿರುತ್ತಾರೆ.
ನ್ಯಾಯಾಲಯವು ಈ ಪ್ರಕರಣವನ್ನು ಎಸ್.ಸಿ ನಂಬರ್ 67/2025 ರಲ್ಲಿ ಸ್ವೀಕರಿಸಿಕೊಂಡು ತ್ವರಿತವಾಗಿ ವಿಚಾರಣೆ ನಡೆಸಿ ದಿನಾಂಕ 05-02-2026 ರಂದು ಆರೋಪಿಗಳಿಗೆ 5 ವರ್ಷ ಶಿಕ್ಷೆ ಮತ್ತು 5,000 ರೂ ದಂಡವನ್ನು ವಿಧಿಸಿ ಆದೇಶವನ್ನು ಹೊರಡಿಸಿದ್ದಾರೆ.
ಈ ಪ್ರಕರಣವನ್ನು ನ್ಯಾಯಾಲಯದಲ್ಲಿ ಸರಕಾರಿ ಅಭಿಯೋಜಕರಾದ ಶ್ರೀ ಪ್ರಕಾಶ್ ಚಂದ್ರ ಶೆಟ್ಟಿ , ಶ್ರೀ ಜಯರಾಮ ಶೆಟ್ಟಿ ಮತ್ತು ಶ್ರೀ ವೈ.ಟಿ ರಾಘವೇಂದ್ರ ರವರು ನೊಂದ ಬಾಲಕಿಯ ಪರವಾಗಿ ವಾದವನ್ನು ಮಂಡಿಸಿದ್ದರು.
