unnamed.webp
Spread the love

ಕಾರ್ಕಳ:  ದಿನಾಂಕ:05-02-2026(ಹಾಯ್ ಉಡುಪಿ ನ್ಯೂಸ್) ಮದುವೆಗೂ ಮೊದಲೇ ಬೇರೊಬ್ಬ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದ ವಿಚಾರವನ್ನು ಮರೆಮಾಚಿ ತನ್ನನ್ನು ಮದುವೆಯಾದ ನಂತರವೂ ತನ್ನ ಹಿಂದಿನ ಪ್ರೇಯಸಿಯೊಂದಿಗೆ ಈಗಲೂ ಸಂಬಂಧ ಇಟ್ಟುಕೊಂಡು ತನಗೆ ಮೋಸ ಮಾಡಿದ್ದಾರೆ ಎಂದು ನೊಂದ ಮಹಿಳೆ ಓರ್ವರು ಪೊಲೀಸರಿಗೆ ದೂರು ನೀಡಿದ್ದಾರೆ.

ಕಾರ್ಕಳ ತಾಲೂಕು ಈದು ಗ್ರಾಮದ ಅಲಿಮಾರು ಗುಡ್ಡೆಯ ನಿವಾಸಿ ಎ.ಸಿ. ಶರ್ಮಿಳ ಎಂಬವರು ಪುತ್ತೂರು ಗ್ರಾಮದ ಆರ್ಯಾಪು ನಿವಾಸಿ ವಸಂತ ಬಿ ಎಂಬುವವರನ್ನು ಪುತ್ತೂರಿನ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ದಿನಾಂಕ 29/10/2025 ರಂದು ಗುರುಹಿರಿಯರ ಸಮಕ್ಷಮದಲ್ಲಿ ವಿವಾಹ ಆಗಿದ್ದಾರೆ .

ಗಂಡನಾದ ವಸಂತನು ಮದುವೆಯಾದ ಬಳಿಕ ಶರ್ಮಿಳರ ಜೊತೆಯಲ್ಲಿ ಒಂದು ವಾರ ಮಾತ್ರ ಇದ್ದು, ಮದುವೆಯ ಮಾತುಕತೆಯ ಸಮಯದಲ್ಲಿ  ಶರ್ಮಿಳರ ಗಂಡನು ಓರ್ವ ಮಹಿಳೆಯನ್ನು ಪ್ರೀತಿಸುವ ವಿಚಾರವನ್ನು  ತಿಳಿಸದೆ ಮೋಸ ಮಾಡಿದ್ದು, ಅಲ್ಲದೆ ಈ ಬಗ್ಗೆ  ಶರ್ಮಿಳ  ರಿಗೆ ಪರಿಹಾರ ರೂಪದಲ್ಲಿ 6 ಲಕ್ಷ ರೂಪಾಯಿಗಳನ್ನು ನೀಡುವುದಾಗಿ ತಿಳಿಸಿ, ಇದುವರೆಗೆ ನೀಡದೇ ಇದ್ದು, ಆಪಾದಿತ ಗಂಡ ವಸಂತನು ಬೇರೊಬ್ಬ ಮಹಿಳೆಯನ್ನು ಪ್ರೀತಿಸುವ ವಿಚಾರ ಶರ್ಮಿಳರ ಗಂಡನ ತಾಯಿ ವಿಮಲ, ಅಣ್ಣ ರಘು, ಅಣ್ಣನ ಹೆಂಡತಿ ವಿನೋದ, ಸಹೋದರಿಯರಾದ ಪೂರ್ಣಿಮ, ಅಶ್ವಿನಿ ಮತ್ತು ಭಾವಂದಿರಾದ ಅಶೋಕ, ಸುರೇಶ ಇವರುಗಳಿಗೆ ತಿಳಿದಿದ್ದರೂ, ಶರ್ಮಿಳರಿಗೆ ಮತ್ತು ಅವರ ಮನೆಯವರಿಗೆ ತಿಳಿಸದೆ ವಿಷಯವನ್ನು ಮರೆಮಾಚಿ ಆಪಾದಿತ ವಸಂತನೊಂದಿಗೆ ಮದುವೆ ಮಾಡಿಸಿ ಶರ್ಮಿಳರ ಗಂಡನಿಗೆ ಸಹಾಯ ಮಾಡಿದ್ದಾರೆ ಎಂದು ಪೊಲೀಸರಿಗೆ ಶರ್ಮಿಳಾ ಅವರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಶರ್ಮಿಳಾ ಅವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ  ಕಲಂ: 318(2), 318(4) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!