images-11.jpeg
Spread the love

ಮಲ್ಪೆ: ದಿನಾಂಕ : 04-02-2026 (ಹಾಯ್ ಉಡುಪಿ ನ್ಯೂಸ್) ತನ್ನ ಗಂಡನ ಸ್ನೇಹಿತನೋರ್ವ  ವ್ಯವಹಾರ ನಿಮಿತ್ತ ಎಂದು ನಂಬಿಸಿ ಕೈಸಾಲ ಮತ್ತು ಚಿನ್ನಾಭರಣ ಪಡೆದು ಕೊಂಡು 61 ಲಕ್ಷ ನಗದು ಮತ್ತು ಚಿನ್ನಾಭರಣ ವಾಪಾಸು ಕೊಡದೆ ವಂಚನೆ ನಡೆಸಿದ್ದಾನೆ ಎಂದು ಜ್ಯೋತಿ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.

ಮಲ್ಪೆ,ವಡಬಾಂಡೇಶ್ವರ ನಿವಾಸಿ ಜ್ಯೋತಿ (41) ಎಂಬವರ ಗಂಡ ವಾಮನ ಬಂಗೇರಾ ಮತ್ತು ಆಪಾದಿತ ದೀಪಕ್‌ ಸಾಲಿಯಾನ್‌  ಎಂಬವರು ಸ್ನೇಹಿತರಾಗಿದ್ದು, ಆರೋಪಿ ದೀಪಕ್ ಸಾಲಿಯಾನ್ ನು  ಜ್ಯೋತಿ ರವರ ಗಂಡನಿಂದ ಆತನ ಬೋಟಿನ ವ್ಯವಹಾರಕ್ಕೆ ಸಂಬಂಧಿಸಿ ಕೈಸಾಲವನ್ನು ಪಡೆದಿದ್ದು, ಆಗಾಗ ಮನೆಗೆ ಬಂದು ಹೋಗುತ್ತಾ ಆತ್ಮೀಯನಂತಿದ್ದು, ದಿನಾಂಕ 27/05/2024 ರಂದು ಮದ್ಯಾಹ್ನ ದೀಪಕ್ ಸಾಲಿಯಾನ್ ನು ಜ್ಯೋತಿ ರವರ ಗಂಡನ ಬಳಿ ಬಂದು ತನಗೆ ಹಣದ ಅವಶ್ಯಕತೆ ಇದೆ ಕೂಡಲೇ ವಾಪಾಸು ನೀಡುವುದಾಗಿ ನಂಬಿಸಿ ಜ್ಯೋತಿ ರವರಿಂದ ಚಿನ್ನದ ಚೈನ್‌, ಕಿವಿ ಓಲೆ, ಉಂಗುರ, ಕೈ ಬಳೆ, ಹವಳ ಮಣಿ ಸರ, ನೆಕ್ಲೇಸ್‌ ಸೇರಿ 172 ಗ್ರಾಂ ತೂಕದ ಚಿನ್ನದ ಒಡವೆಗಳನ್ನು ಪಡೆದುಕೊಂಡಿದ್ದು, ಅದನ್ನು ವಾಪಾಸು ನೀಡದೇ ಇದ್ದು ಬಳಿಕ ದಿನಾಂಕ 08/04/2025 ರಂದು ದೀಪಕ್ ಸಾಲಿಯಾನ್ ನು  ಮನೆಗೆ ಬಂದು ಜ್ಯೋತಿ ರವರ ಗಂಡನಲ್ಲಿ ತನಗೆ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಸಾಲ ಆಗುವುದರಲ್ಲಿದೆ ತನ್ನ ಮೊದಲಿನ ಸಾಲವನ್ನು ತೀರಿಸಲು ಸಹಾಯ ಮಾಡಿದಲ್ಲಿ ಅದನ್ನು ಕಟ್ಟಿ ತಾನು ಪಡೆದ ಹಣ ಹಾಗೂ ಚಿನ್ನಾಭರಣಗಳನ್ನು ವಾಪಾಸು ನೀಡುವುದಾಗಿ ನಂಬಿಸಿ ಜ್ಯೋತಿ ರವರಿಂದ ಪುನಃ 20 ಗ್ರಾಂ ತೂಕದ ಚಿನ್ನದ ಸರ, 36 ಗ್ರಾಂ ತೂಕದ ಕರಿಮಣಿ ಸರ ಹಾಗೂ ತಾಳಿ ಮತ್ತು 10 ಗ್ರಾಂ ತೂಕದ ಚಿನ್ನದ ಸರವನ್ನು ಪಡೆದುಕೊಂಡಿದ್ದು, ಅಲ್ಲದೆ ಜ್ಯೋತಿ ರವರ ಗಂಡನಿಂದ ಒಟ್ಟು ನಗದು ರೂಪಾಯಿ 61 ಲಕ್ಷ ಹಣವನ್ನು ಪಡೆದಿರುತ್ತಾನೆ.

ದೀಪಕ್ ಸಾಲಿಯಾನ್ ನು ಜ್ಯೋತಿ ರವರನ್ನು ಮತ್ತು ಜ್ಯೋತಿ ರವರ ಗಂಡನನ್ನು ನಂಬಿಸಿ ಅವರಿಂದ ರೂಪಾಯಿ 61 ಲಕ್ಷ ನಗದು ಹಣ ಮತ್ತು 262 ಗ್ರಾಂ ತೂಕದ ಚಿನ್ನಾಭರಣಗಳನ್ನು ಪಡೆದು ವಾಪಾಸು ನೀಡದೆ ನಂಬಿಕೆ ದ್ರೋಹ ಮತ್ತು ವಂಚನೆ ಮಾಡಿದ್ದಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಜ್ಯೋತಿ ರವರು ನೀಡಿದ  ಖಾಸಗಿ ದೂರಿನಂತೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ  ಕಲಂ: 318(1)(2)(3), 316(1) BNS ರಂತೆ ಪ್ರಕರಣ ದಾಖಲಾಗಿದೆ. ‌

error: No Copying!