ಶಿರ್ವ: ದಿನಾಂಕ:01-02-2026 (ಹಾಯ್ ಉಡುಪಿ ನ್ಯೂಸ್) ಶೋಷಿತ ವರ್ಗಕ್ಕೆ ಬಡ್ಡಿ ರಹಿತ ಸಾಲ ನೀಡುವ ಸಂಸ್ಥೆಯೊಂದರಿಂದ ಸಾಲ ಪಡೆದ ಇಬ್ಬರು ವ್ಯಕ್ತಿಗಳು ಸಾಲ ಹಿಂತಿರುಗಿಸದೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಸಂಸ್ಥೆಯ ಅಧಿಕಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಶಂಶುದ್ದೀನ್ ಯೂಸುಫ್(66ವ) ಎಂಬವರು ಫೈಜುಲ್ ಉಲಾಮ ಇಸ್ಲಾಮಿಕ್ ಪೌಂಡೇಶನ್. ಪೂರ್ ಸೋಷಿಯಲ್ ಎಕಾನಮಿಕಲ್ ಡೆವೆಲಾಪ್‌ಮೆಂಟ್, ಎಲ್ಮ್ ಸಿಟಿ, ಚಂದ್ರನಗರ, ಕಳತ್ತೂರು ಕಾಪು ಇದರ ಅಧೀಕೃತ ಅಧಿಕಾರಿಯಾಗಿದ್ದು ,ಈ ಸಂಸ್ಥೆಯು ಶೋಷಿತ ವರ್ಗಕ್ಕೆ ಬಡ್ಡಿ ರಹಿತ ಸಾಲ ನೀಡುವ ಉದ್ದೇಶವನ್ನು ಹೊಂದಿದ್ದಲ್ಲದೆ ಉದ್ಯಮ ನಡೆಸುವವರಿಗೆ ಹಣಕಾಸಿನ ಸಹಾಯ ನೀಡುತ್ತದೆ.
1 ನೇ ಆರೋಪಿ ಹಿದಾಯತುಲ್ಲಾ(56) ಇವನು ಈ ಸಂಸ್ಥೆಯಿಂದ ದಿನಾಂಕ:25.05.2015 ರಂದು ರೂ 1,00,000/- ಸಾಲ ಪಡೆದಿರುತ್ತಾರೆ. ದಿನಾಂಕ:04.03.2015 ರಂದು 2 ನೇ ಆರೋಪಿ ಆಯಿಷಾ ಳು 1,00,000/- ಸಾಲ ಪಡೆದಿರುತ್ತಾರೆ. ಇವರೀರ್ವರ ಸಾಲಕ್ಕೆ 3 ನೇ ಆರೋಪಿ ಬಿ ಹೆಚ್ ರಫೀಕ್ ನು ಜಾಮೀನುದಾರರಾಗಿ ಸಹಿ ಮಾಡಿರುತ್ತಾರೆ.
ನಂತರ ಆರೋಪಿಗಳು ಪಡೆದ ಸಾಲವನ್ನು ಸಂಸ್ಥೆಗೆ ವಾಪಾಸು ಕಟ್ಟಿರುವುದಿಲ್ಲ. ಶಂಶುದ್ದೀನ್ ಯೂಸುಫ್ ರವರು ಆರೋಪಿಗಳ ಬಳಿ ಸಾಲ ಪಡೆದ ಹಣದ ಬಗ್ಗೆ ವಿಚಾರಿಸಿದಾಗ ಅವರುಗಳು ಶಂಶುದ್ದೀನ್ ಯೂಸುಫ್ ರವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಪಡೆದ ಹಣವನ್ನು ನೀಡುವುದಿಲ್ಲ ,ನೀವು ಏನು ಬೇಕಾದರು ಮಾಡಿಕೊಳ್ಳಿ ಇನ್ನು ಮುಂದೆ ಹಣದ ವಿಚಾರಕ್ಕೆ ಬಂದಲ್ಲಿ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲವೆಂದು ಬೆದರಿಕೆ ಹಾಕಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಶಂಶುದ್ದೀನ್ ಯೂಸುಫ್ ರವರು ನೀಡಿದ ದೂರಿನಂತೆ ಶಿರ್ವ ಪೊಲೀಸ್ ಠಾಣೆಯಲ್ಲಿ ಕಲಂ: 42̧0 40̧̧̧̧6, 504, 506 ಜೊತೆಗೆ 34 ಐಪಿಸಿ ರಂತೆ ಪ್ರಕರಣ ದಾಖಲಾಗಿದೆ.
