ಉಡುಪಿ: ದಿನಾಂಕ :01-02-2026 (ಹಾಯ್ ಉಡುಪಿ ನ್ಯೂಸ್) ಸ್ನೇಹಿತರ ನಡುವೆ ಕ್ಷುಲ್ಲಕ ಕಾರಣಕ್ಕೆ ಪಬ್ ಒಂದರಲ್ಲಿ ನಡೆದ ಜಗಳ ಮುಂದುವರಿದು ಯುವಕನೋರ್ವನಿಗೆ ಕೆಲವು ಯುವಕರು ಸೇರಿ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಉಡುಪಿ ನಗರದಲ್ಲಿ ನಡೆದಿದೆ.
ಬೈಲೂರು 76 ಬಡಗುಬೆಟ್ಟು ,ಚಿಟ್ಪಾಡಿ ನಿವಾಸಿ ಶರತ್ ಕುಂದರ್ (25) ಎಂಬವರು ದಿನಾಂಕ : 30/01/2026 ರಂದು ಸಂಜೆ ತನ್ನ ಸ್ನೇಹಿತನ Grand Vitar ಕಾರಿನಲ್ಲಿ ಮಣಿಪಾಲದ ಹಕುನಾ ಮಟಾಟ ಹೋಟೆಲ್‌ಗೆ ಊಟಕ್ಕೆಂದು ಹೋಗಿದ್ದು, ಅಲ್ಲಿ ಶರತ್ ಕುಂದರ್ ರವರ ಸ್ನೇಹಿತರಾದ ಅಕ್ಷತ್ ಪೈ ,ಶಶಾಂಕ್ ಹಾಗೂ ಉಡುಪಿಯ ಜನರಲ್ ಸ್ಟೋರ್ ಒಂದರನ ಮಾಲಕರ ಮಗ ಇದ್ದು, ಅಲ್ಲಿ ಶರತ್ ಕುಂದರ್ ರವರ ಕೈಗೆ ರಾಧಾಕೃಷ್ಣಪೈ ರವರ ಮಗನ ಕೈ ತಾಗಿದ್ದು, ಆಗ ಶರತ್ ಕುಂದರ್ ರವರು ಮತ್ತು ಅವರೊಳಗೆ ಬಾಯಿ ಮಾತಿನ ಗಲಾಟೆ ಆಗಿರುತ್ತದೆ.
ನಂತರ ಶರತ್ ಕುಂದರ್ ರವರು ವಾಪಾಸು ಮನೆಗೆ ಹೊರಟಿದ್ದು,ಉಡುಪಿ ಕಲ್ಸಂಕ ಬಳಿ ತಲುಪುವಾಗ ಅಕ್ಷತ್‌ಪೈ ಶರತ್ ಕುಂದರ್ ರವರಿಗೆ ಪೋನ್ ಮಾಡಿ ಹೋಟೆಲ್‌ನಲ್ಲಿ ಗಲಾಟೆ ಆದ ಬಗ್ಗೆ ಮಾತನಾಡಲು ಇದೆ ನೀವು ಪಿಪಿಸಿ ಕ್ರಾಸ್ ಬಳಿ ನಿಲ್ಲುವಂತೆ ತಿಳಿಸಿರುತ್ತಾನೆ.
ನಂತರ ಶರತ್ ಕುಂದರ್ ರವರು, ಧ್ರುವಾ,ಸಿಲಾನ್ ಗಗನ್,ರೋಹಿತ್ ಸೇರಿ ಪಿಪಿಸಿ ಕ್ರಾಸ್ ಬಳಿ ಇರುವ ಕೋಸ್ಟಲ್ ಚಿಕನ್ ಅಂಗಡಿಯ ಎದರು ರಸ್ತೆಯ ಬದಿಯಲ್ಲಿ ನಿಂತು ಮಾತನಾಡುತ್ತಿರುವಾಗ ರಾತ್ರಿ 11:30 ಗಂಟೆ ಸುಮಾರಿಗೆ ಟಾಟಾಸಫಾರಿ, ಮಹೀಂದ್ರಥಾರ್ ವಾಹನಗಳು ಏಕಾಏಕಿ ಶರತ್ ಕುಂದರ್ ರವರ ಬಳಿ ಬಂದು ಟಾಟಾಸಫಾರಿಯಿಂದ ಅಕ್ಷತ್ ಪೈ, ಶಶಾಂಕ ಹಾಗೂಇತರ 6-7 ಜನರು ವಾಹನದಿಂದ ಇಳಿದು ಕೈಯಲ್ಲಿ ತಲವಾರಿನಂತಹ ಆಯುಧ ಹಾಗೂ ಕಬ್ಬಿಣದ ಚಯರ್‌ನಿಂದ ಶರತ್ ಕುಂದರ್ ರನ್ನು ಕೊಲ್ಲುವ ಉದ್ದೇಶದಿಂದ ಆಯುಧದಿಂದ ತಲೆಗೆಬೀಸಿರುತ್ತಾರೆ. ಆಗ ಶರತ್ ಕುಂದರ್ ರವರು ಎರಡು ಕೈಗಳನ್ನು ಮುಂದಕ್ಕೆ ಚಾಚಿದ್ದು, ಆರೋಪಿಗಳಾದ ಜನರಲ್ ಸ್ಟೋರ್‌ನವರ ಮಗ ತಲವಾರಿನಿಂದ ಬೀಸಿದಾಗ ಶರತ್ ಕುಂದರ್ ರವರ ಬಲ ಅಂಗೈಗೆ, ಮದ್ಯದ ಬೆರಳಿಗೆ,ಎಡಕೈಮಣಿಗಂಟಿನ ಒಳಭಾಗಕ್ಕೆ ಕಿರುಬೆರೆಳಿಗೆ ಆಯುಧತಾಗಿ ಗಾಯವಾಗಿ ರಕ್ತ ಬಂದಿರುತ್ತದೆ.
ಆಗ ಶರತ್ ಕುಂದರ್ ರವರ ಜೊತೆಗಿದ್ದ ಆತನ ಸ್ನೇಹಿತರು ಬೊಬ್ಬೆ ಹೊಡೆದಿದ್ದು ಆಗ ಆರೋಪಿಗಳೆಲ್ಲರೂ ಶರತ್ ಕುಂದರ್ ರವರಿಗೆ ನಿನ್ನನ್ನು ಜೀವ ಸಹಿತಬಿಡುವುದಿಲ್ಲ ಎಂದು ಬೆದರಿಕೆ ಹಾಕಿಹೋಗಿದ್ದು, ಚಿಕಿತ್ಸೆ ಬಗ್ಗೆ ಶರತ್ ಕುಂದರ್ ರವರು ಹೈಟೆಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ:189(2),191(2),191(3),118(2),109,351(2) ಜೊತೆಗೆ 190 ಬಿಎನ್ ಎಸ್ ರಂತೆ ಪ್ರಕರಣ ದಾಖಲಾಗಿದೆ.
