ಬೈಂದೂರು:ಬಿಜೂರು ಗ್ರಾಮದ ಹರಕೇರಿ ಎಂಬಲ್ಲಿ ಮನೆಯೊಂದರಲ್ಲಿ ಅಕ್ರಮವಾಗಿ ಸರಕಾರದ ಉಚಿತ ಅನ್ನ ಭಾಗ್ಯ ಯೋಜನೆಯ ಅಕ್ಕಿ ಯನ್ನು ದಾಸ್ತಾನು ಇರಿಸಿದ್ದ ವ್ಯಕ್ತಿ ಯನ್ನು ಬೈಂದೂರು ಪೊಲೀಸರು ಬೈಂದೂರು ಆಹಾರ ನಿರೀಕ್ಷಕ ವಿನಯ್ ಕುಮಾರ ಅವರ ದೂರಿನಂತೆ ಬಂಧಿಸಿದ್ದಾರೆ.
ಬಿಜೂರು ಗ್ರಾಮದ ಹರಕೇರಿ ಎಂಬಲ್ಲಿ ಆರೋಪಿ ಅಬ್ದುಲ್ ಬಿನ್ ಅಬ್ಬಾಸ್ ಎಂಬವರ ಮನೆಯಲ್ಲಿ ಅಕ್ರಮವಾಗಿ ಉಚಿತ ಅನ್ನ ಭಾಗ್ಯ ಯೋಜನಗೆ ಸಂಬಂಧಿಸಿದ ಅಕ್ಕಿಯನ್ನು ದಾಸ್ತಾನು ಇರಿಸಿರುವ ಬಗ್ಗೆ ಬೈಂದೂರು ವಲಯ ಆಹಾರ ನಿರೀಕ್ಷಕರಾದ ವಿನಯ್ ಕುಮಾರ (49) ಅವರಿಗೆ ಮಾಹಿತಿ ದೊರೆತ ಮೇರೆಗೆ ದಿನಾಂಕ 30/01/2026 ರಂದು ಬೆಳಿಗ್ಗೆ ದಾಳಿ ನಡೆಸಿ ಆರೋಪಿಯು ಉಚಿತ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಕುಚ್ಚಲು ಅಕ್ಕಿಯನ್ನು ಕಾನೂನು ಬಾಹಿರವಾಗಿ ಯಾರಿಂದಲೋ ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಆರೋಪಿ ಅಬ್ದುಲ್ ಬಿನ್ ಅಬ್ಬಾಸ್ ತನ್ನ ಮನೆಯಲ್ಲಿ ಅಕ್ರಮವಾಗಿ ದಾಸ್ತಾನು ಇರಿಸಿದ ಒಟ್ಟು 7.14 ಕ್ವಿಂಟಾಲ್ ತೂಕದ ರೂ 16422/- ಮೌಲ್ಯದ 16 ಪಾಲಿಥಿನ್ ಚೀಲ ಕುಚ್ಚಲು ಅಕ್ಕಿ ತುಂಬಿರುವ ಚೀಲಗಳನ್ನು ಸ್ವಾದೀನಪಡಿಸಿ ಕೊಂಡು ತಲ್ಲೂರು TAMPMC ಗೋಡಾಮಿನಲ್ಲಿ ಇರಿಸಿದ್ದಾರೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಕಲಂ: 3 .6.7 Essential commodities act ರಂತೆ ಪ್ರಕರಣ ದಾಖಲಾಗಿದೆ.
