ಗಂಗೊಳ್ಳಿ: ದಿನಾಂಕ 31/01/2026 (ಹಾಯ್ ಉಡುಪಿ ನ್ಯೂಸ್) ಗಂಗೊಳ್ಳಿ ರಥಬೀದಿ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ನಡೆಸುತ್ತಿದ್ದ ವ್ಯಕ್ತಿಯನ್ನು ಗಂಗೊಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ಪವನ್ ನಾಯಕ್ ರವರು ಬಂಧಿಸಿದ್ದಾರೆ.
ಗಂಗೊಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ಪವನ್ ನಾಯಕ್ ರವರಿಗೆ ದಿನಾಂಕ:30-01-2026 ರಂದು ಬೆಳಿಗ್ಗೆ ಗಂಗೊಳ್ಳಿ ಗ್ರಾಮದ ಬೀಟ್ ಸಿಬ್ಬಂದಿಯಾದ ರಾಜು ನಾಯ್ಕ ರವರು ಗಂಗೊಳ್ಳಿ ಗ್ರಾಮದ, ಗಂಗೊಳ್ಳಿ ರಥಬೀದಿ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಡುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ .
ಪಿಎಸ್ಐ ಪವನ್ ನಾಯಕ್ ರವರು ಕೂಡಲೇ ಸಿಬ್ಬಂದಿಗಳೊಂದಿಗೆ ಮಾಹಿತಿ ಬಂದ ಸ್ಥಳ ತಲುಪಿ ನೋಡಿದಾಗ ಅಲ್ಲಿ ಓರ್ವ ವ್ಯಕ್ತಿ ಸಾರ್ವಜನಿಕರನ್ನು ಕರೆದು ಒಂದು ರೂಪಾಯಿಗೆ 70 ರೂಪಾಯಿ ನೀಡುವುದಾಗಿ ಜೋರಾಗಿ ಕೂಗುತ್ತಾ ಮಟ್ಕಾ ಜುಗಾರಿ ಬಗ್ಗೆ ಹಣ ಸಂಗ್ರಹಿಸುತ್ತಾ ಒಂದು ಹಾಳೆಯಲ್ಲಿ ಪೆನ್ನಿನಿಂದ ಬರೆದುಕೊಳ್ಳುತ್ತಾ ಹಣವನ್ನು ಸಾರ್ವಜನಿಕರಿಂದ ಸಂಗ್ರಹಿಸಿ ತನ್ನ ಕಿಸೆಯಲ್ಲಿ ಹಾಕಿಕೊಳ್ಳುತ್ತಿದ್ದು ಅಲ್ಲಿಗೆ ದಾಳಿ ಮಾಡಿ ಮಟ್ಕಾ ಚೀಟಿ ಬರೆಯುತ್ತಿದ್ದ ಉದಯ ದೇವಾಡಿಗನನ್ನು ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದಾರೆ.
ಉದಯ ದೇವಾಡಿಗನು ಮಟ್ಕಾ ಜುಗಾರಿ ಆಟಕ್ಕೆ ಬಳಸಿದ ಒಟ್ಟು 1350/- ರೂಪಾಯಿ, ಮಟ್ಕಾ ಚೀಟಿ-1, ಬಾಲ್ ಪೆನ್-1 ನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ .
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಕಲಂ: 78(1)(111) KP ACT ರಂತೆ ಪ್ರಕರಣ ದಾಖಲಾಗಿದೆ.
