IMG_20260130_121808-1024x1024.jpg
Spread the love

ದಿನಾಂಕ:30-01-2026 (ಹಾಯ್ ಉಡುಪಿ ನ್ಯೂಸ್)

ಬ್ರಹ್ಮಾವರ:  ಪೊಲೀಸ್‌ ಠಾಣೆಯಲ್ಲಿ ದಿನಾಂಕ 29-01-2026 ರಂದು ದ್ವೇಷ ಭಾಷಣಕ್ಕೆ ಸಂಬಂಧಿಸಿ ದಾಖಲಾಗಿದ್ದ ಅಪರಾಧ ಕ್ರಮಾಂಕ 19/2026 (ಕಲಂ 196(1), 353(2) ಜೊತೆಗೆ 3(5) ಭಾರತೀಯ ನ್ಯಾಯ ಸಂಹಿತೆ) ಪ್ರಕರಣದಲ್ಲಿ ಪೊಲೀಸರು ಬ್ರಹ್ಮಾವರದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ವಾರಂಬಳ್ಳಿ ಗ್ರಾಮದ  ಸಂತೋಷ ಕುಮಾರ್ ಶೆಟ್ಟಿ (56), ಕೋಟೇಶ್ವರ ಗ್ರಾಮದ ಕೆ. ನಾಗರಾಜ (62)  ಬಂಧಿತ ಆರೋಪಿಗಳಾಗಿದ್ದಾರೆ.
ಬ್ರಹ್ಮಾವರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಅಶೋಕ ಮಾಳಾಬಗಿ, ಸುದರ್ಶನ್ ದೊಡಮನಿ ಮತ್ತು ಠಾಣಾ ಸಿಬ್ಬಂದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಮುಂದಿನ ಕಾನೂನು ಕ್ರಮಕ್ಕಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಬ್ರಹ್ಮಾವರ ಪೊಲೀಸರು ತಿಳಿಸಿದ್ದಾರೆ.

error: No Copying!