images-17.jpeg
Spread the love

ಉಡುಪಿ: ದಿನಾಂಕ:30-01-2026(ಹಾಯ್ ಉಡುಪಿ ನ್ಯೂಸ್) ಕರಾವಳಿ ಅಂಬಿಕಾ ಟಿಂಬರ್ ಬಳಿಯ ಬೈಪಾಸ್ ನಲ್ಲಿ ಹೊಡೆದಾಡಿಕೊಂಡು ಸಾರ್ವಜನಿಕರಿಗೆ ತೊಂದರೆ ನೀಡಿದ್ದ ಐವರನ್ನು ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಗೋಪಾಲ ಕೃಷ್ಣ ಜೋಗಿ ಅವರು ಬಂಧಿಸಿದ್ದಾರೆ.

ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಗೋಪಾಲಕೃಷ್ಣ ಜೋಗಿ (53) ಅವರು ದಿನಾಂಕ :28/01/2026 ರಂದು ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಸಮಯ ರಾತ್ರಿ 12:00 ಗಂಟೆಗೆ ಉಡುಪಿ ತಾಲೂಕು ಅಂಬಲಪಾಡಿ ಗ್ರಾಮದ ಕರಾವಳಿ ಬೈಪಾಸ್ ನ ಅಂಬಿಕಾ ಟಿಂಬರ್ ಬಳಿ ರಾ.ಹೆ. 66ರ ಬಳಿ ರೌಂಡ್ಸ್ ನಲ್ಲಿ ರುವಾಗ ಸಾರ್ವಜನಿಕ ಸ್ಥಳದಲ್ಲಿ ಸುಮಾರು ನಾಲ್ಕೈದು ಜನರು ಗುಂಪು ಕಟ್ಟಿ ತಮ್ಮೊಳಗೆ ಅವಾಚ್ಯ ಶಬ್ದಗಳಿಂದ ಬೈದಾಡುತ್ತಾ ಪರಸ್ಪರ ದೂಡಾಡಿಕೊಂಡು ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಭಯದ ಮತ್ತು ಪ್ರಕ್ಷುಬ್ದ ವಾತಾವರಣ ಉಂಟು ಮಾಡುತ್ತಿದ್ದುದನ್ನು ಕಂಡು  ಗಲಾಟೆ ಮಾಡಿಕೊಳ್ಳುತ್ತಿದ್ದ ಸ್ಥಳಕ್ಕೆ ಹೋಗಿ ಅವರುಗಳಿಗೆ ಸಾರ್ವಜನಿಕ ಸ್ಥಳದಲ್ಲಿ ಈ ರೀತಿ ಗಲಾಟೆ ಮಾಡಬಾರದಾಗಿ ಹೇಳಿದ್ದಾರೆ .

ಆದರೂ ಅವರು ಸಮವಸ್ತ್ರದಲ್ಲಿದ್ದ ಪೊಲೀಸರ ಎದುರಿನಲ್ಲಿಯೇ ಪರಸ್ಪರ ಬೈದಾಡುತ್ತಾ ದೂಡಾಡಿಕೊಂಡು ಕೈ-ಕೈ ಮಿಲಾಯಿಸುತ್ತಿರುವುದನ್ನು ಮುಂದುವರಿಸುತ್ತಿದ್ದವರನ್ನು ಬಿಡಿಸಿ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದಾಗ ಆರೋಪಿತರು 1) ಅಶ್ವತ್ ಪೂಜಾರಿ, (34)  ರಂಗನಕೆರೆ, ಬಾರ್ಕೂರು, ಬ್ರಹ್ಮಾವರ . 2) ಅಶೋಕ,(36)   ಹೊನ್ನಾಳ, ಹಾರಾಡಿ, ಬ್ರಹ್ಮಾವರ  KA 19 MD 4636 ನೇ ವಾಹನದಲ್ಲಿ ಬಂದಿರುವುದಾಗಿ ತಿಳಿಸಿರುತ್ತಾರೆ. 3ನೇ, 4ನೇ ಮತ್ತು 5ನೇ ಆರೋಪಿಗಳು ಅವರುಗಳ ಹೆಸರು ಪಪ್ಪು ಗುಲ್ಜರ್, ಪಾಂಚು ರಾಮ್ ಹಾಗೂ ರಾಹೂಲ್ ನಾಥ್ ಎಂದು ಕ್ರಮವಾಗಿ ಹೇಳಿದ್ದು, ಅವರುಗಳು RJ 42 GA 4604 ನೇ ಟ್ರಕ್ ವಾಹನದಲ್ಲಿ ಬಂದಿರುವುದಾಗಿ ತಿಳಿಸಿದ್ದು  ಸಾರ್ವಜನಿಕ ಸ್ಥಳದಲ್ಲಿ ಗಲಾಟೆ ಮಾಡಿಕೊಳ್ಳುತ್ತಿದ್ದ ಆರೋಪಿಗಳ ವಿರುದ್ಧ  ದೂರು ದಾಖಲಿಸಿದ್ದಾರೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ (U/s 194(2)) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!