ದಿನಾಂಕ:28-01-2026(ಹಾಯ್ ಉಡುಪಿ ನ್ಯೂಸ್)
ಉಡುಪಿ ಜಿಲ್ಲೆಯ ಸಾಸ್ತಾನ ಟೋಲ್ ಗೇಟ್ ಸಿಬ್ಬಂದಿ ಗಳ ದುರ್ವರ್ತನೆ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ವತಿಯಿಂದ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಮನವಿಯನ್ನು ನೀಡಲಾಯಿತು.
ದಿನಾಂಕ-26/01/2026 ರಂದು
ಉಡುಪಿ ಜಿಲ್ಲೆಯ ಸಾಸ್ತಾನ ಟೋಲ್ ಗೇಟ್ ಸಿಬ್ಬಂದಿಗಳು ನಿವೃತ್ತ ಯೋಧರೊಂದಿಗೆ ಟೋಲ್ ವಸೂಲು ಮಾಡುವಾಗ ಅನುಚಿತವಾಗಿ ನಡೆದುಕೊಂಡಿರುವುದು ಅತ್ಯಂತ ಖೇದಕರವಾಗಿದೆ. ದೇಶದ ಘನತೆಯನ್ನು ಎತ್ತಿ ಹಿಡಿಯುವ ಯೋಧರೋರ್ವರು ಟೋಲ್ ವಿನಾಯಿತಿ ಪತ್ರ ತೋರಿಸಿದರೂ ಬಲವಂತವಾಗಿ ಟೋಲ್ ವಸೂಲು ಮಾಡಲು ಹೊರಟಿರುವುದು ಎಲ್ಲ ದೇಶಪ್ರೇಮಿಗಳಿಗೂ ಮಾಡಿರುವ ಅವಮಾನವಾಗಿದೆ.
ಟೋಲ್ ಸಿಬ್ಬಂದಿಗಳಿಗೆ ಯಾರೊಂದಿಗೆ ಹೇಗೆ ನಡೆದುಕೊಳ್ಳಬೇಕೆಂಬ ಕನಿಷ್ಠ ಜ್ಞಾನವೂ ಇಲ್ಲದಿರುವುದು ಬಾರಿ ವಿಷಾದದ ಸಂಗತಿಯಾಗಿದೆ. ಇನ್ನು ಮುಂದಾದರೂ ಟೋಲ್ ಸಿಬ್ಬಂದಿಗಳಿಗೆ ಗೌರವಾನ್ವಿತ ಸೈನಿಕರು ಹಾಗೂ ಇತರ ನಾಗರಿಕರೊಂದಿಗೆ ಹೇಗೆ ಮಾದರಿಯಾಗಿ ನಡೆದುಕೊಳ್ಳಬೇಕು ಎಂಬ ಬಗ್ಗೆ ಸೂಕ್ತ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದು
ಮಾನ್ಯ ಪೋಲಿಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರಿಗೆ ಕರವೇ ವತಿಯಿಂದ ಮನವಿಯನ್ನು ನೀಡಲಾಯಿತು.
ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ನೀಡಿರುವ ದೂರನ್ನು ಪರಿಶೀಲಿಸಿ ಟೋಲ್ ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ಸುಜಯ್ ಪೂಜಾರಿ, ಗೌರವಾಧ್ಯಕ್ಷರಾದ ಅನ್ಸರ್ ಅಹ್ಮದ್ ಮಹಿಳಾ ಜಿಲ್ಲಾಧ್ಯಕ್ಷೆ ಜ್ಯೋತಿ ಸೇರಿಗಾರ್ತಿ, ಉಪಾಧ್ಯಕ್ಷೆ ದೇವಕಿ ಬಾರ್ಕೂರು, ಜಯಪ್ರಕಾಶ್ ಶೆಟ್ಟಿ, ನಾಗರಾಜ್, ಸಿದ್ದಣ್ಣ ಎಸ್ ಪೂಜಾರಿ , ಸವಿತಾ, ಆಶಾ. ಅನುಷ ಪಳ್ಳಿ. ಆನಂದ್ ಶೆಟ್ಟಿ. ಶಬೀರ್. ಉಮೇಶ್. ಮೊದಲಾದವರು ಉಪಸ್ಥಿತರಿದ್ದರು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
