ಮಂಗಳೂರು: ದಿನಾಂಕ:26-01-2026(ಹಾಯ್ ಉಡುಪಿ ನ್ಯೂಸ್) ಶಿಡ್ಲಘಟ್ಟ ಪೌರಾಯುಕ್ತೆ ಅಮೃತ ಗೌಡರಿಗೆ ಬೆದರಿಕೆ ಹಾಕಿದ್ದ ಕಾಂಗ್ರೆಸ್ ಮುಖಂಡ ಬಿ.ವಿ.ರಾಜೀವ್ ಗೌಡ ನನ್ನು ಕೇರಳದ ಮಲಪ್ಪುರಂ ನಲ್ಲಿ ಕರ್ನಾಟಕ ಪೊಲೀಸರು ಬಂಧಿಸಿದ್ದಾರೆ.
ಶಿಡ್ಲಘಟ್ಟ ಪೌರಾಯುಕ್ತೆ ಅಮೃತ ಗೌಡರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದ ರಾಜೀವ್ ಗೌಡ ಪೌರಾಯುಕ್ತೆ ಅಮೃತ ಗೌಡ ಅವರು ಜನವರಿ 14 ರಂದು ಪೊಲೀಸರಿಗೆ ದೂರು ನೀಡಿ ಎಫ್.ಐ.ಆರ್ ದಾಖಲಾಗುತ್ತಿದ್ದಂತೆ ಭೂಗತವಾಗಿದ್ದು ಆತ ಮಂಗಳೂರು ಮೂಲಕ ಕೇರಳಕ್ಕೆ ಪಲಾಯನ ಗೈದಿದ್ದ. ಈತ ಕೇರಳಕ್ಕೆ ಪಲಾಯನ ಮಾಡಲು ಮಂಗಳೂರಿನ ಉದ್ಯಮಿ ಯೋರ್ವ ಸಹಾಯ ಮಾಡಿದ್ದ ಎನ್ನಲಾಗಿದೆ. ಇದೀಗ ಈತನನ್ನು ಬಂಧಿಸಿ ಮಂಗಳೂರಿಗೆ ಕರೆತರಲಾಗಿದೆ.
