images-17.jpeg
Spread the love

ಕುಂದಾಫುರ: ದಿನಾಂಕ:26-01-2026 (ಹಾಯ್ ಉಡುಪಿ ನ್ಯೂಸ್) ಕೋಣಿ ಗ್ರಾಮದ ಆತಿಕಾ ಬಿ ಎಂಬವರ ಮನೆಗೆ ನುಗ್ಗಿದ ಕಳ್ಳರು 95 ಸಾವಿರ ಮೌಲ್ಯದ ಚಿನ್ನಾಭರಣ ಕಳ್ಳತನ ನಡೆಸಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.

ಕುಂದಾಪುರ ತಾಲೂಕಿನ ಕೋಣಿ ಗ್ರಾಮದ ಕಟ್ಕೇರಿ ಮೇಪು ಕೋಣಿ ನಿವಾಸಿ ಆತಿಕಾ ಬಿ(63) ಎಂಬವರ ಮನೆಗೆ ದಿನಾಂಕ 23/01/2026 ರಂದು ರಾತ್ರಿ 11:00 ಗಂಟೆಯಿಂದ ದಿನಾಂಕ 26/01/2026 ರಂದು ಬೆಳಗಿನ ಜಾವ 01:30 ಗಂಟೆಯ ಸಮಯದಲ್ಲಿ  ಯಾರೋ ಕಳ್ಳರು ಆತಿಕಾ ಬಿ ಅವರ ಮನೆಯ ಬಾಗಿಲಿನ ಬೀಗವನ್ನು ಮುರಿದು ಒಳ ಹೊಗಿ ಮನೆಯ ಒಳಗೆ ಕಪಾಟಿನಲ್ಲಿರುವ 3 ಗ್ರಾಂ ಚಿನ್ನದ ಉಂಗುರ ಅಂದಾಜು ಮೌಲ್ಯ 15.000 ರೂ , 4 ಗ್ರಾಂ ಚಿನ್ನದ ಕಾಯಿನ್‌ ಅಂದಾಜು ಮೌಲ್ಯ 40.000 ರೂ, 20.000 ಮೌಲ್ಯದ ವಾಚ್‌ ಮತ್ತು 20.000 ರೂ ನಗದು ಹಣ ಒಟ್ಟು 95.000 ಮೌಲ್ಯದ ಚಿನ್ನ, ವಾಚ್‌ ಮತ್ತು ನಗದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ  ಕಲಂ: 331(3) 331(4) 305 BNS ರಂತೆ ಪ್ರಕರಣ ದಾಖಲಾಗಿದೆ.

error: No Copying!