ಉಡುಪಿ: ದಿನಾಂಕ:25-01-2026(ಹಾಯ್ ಉಡುಪಿ ನ್ಯೂಸ್) ಬಸ್ ಟೈಮಿಂಗ್ ವಿಚಾರದಲ್ಲಿ ನವದುರ್ಗಾ ಬಸ್ ಚಾಲಕನಿಗೆ ಸೆಲೀನ ಬಸ್ ನ ಚಾಲಕ ಗಂಭೀರ ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿದ ಘಟನೆ ಉಡುಪಿ ಬಸ್ ನಿಲ್ದಾಣದಲ್ಲಿ ನಡೆದಿದೆ.
ಬ್ರಹ್ಮಾವರ,ಬನ್ನಾಡಿ,ಎಂ ಜಿ ಕಾಲೋನಿ ವಡ್ಡರ್ಸೆ ಗ್ರಾಮದ ನಿವಾಸಿ ರಿಯಾಜ್ (41)ಎಂಬವರು ನವದುರ್ಗಾ ಬಸ್ ನಂಬ್ರ KA-20 AC-3467 ರಲ್ಲಿ ಚಾಲಕನಾಗಿ ಕೆಲಸವನ್ನು ಮಾಡಿಕೊಂಡಿದ್ದು ದಿನಾಂಕ 23/01/2026 ರಂದು ಸಂಜೆ 5 ಗಂಟೆಗೆ ರಿಯಾಜ್ ಅವರು ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಸರ್ವಿಸ್ ಬಸ್ ನಿಲ್ದಾಣದಲ್ಲಿದ್ದಾಗ ಬಸ್ ಟೈಮಿಂಗ್ ವಿಚಾರದಲ್ಲಿ ಸೆಲೀನ ಬಸ್ ನಂಬ್ರ KA-20 AC-1097 ಚಾಲಕನಾದ ಸದ್ದಾಂ ರಿಯಾಜ್ ರೊಂದಿಗೆ ಮಾತಿನ ಚಕಮಕಿ ನಡೆಸಿ ಅವಾಚ್ಯ ಶಬ್ದಗಳಿಂದ ಬೈದು ಸ್ಕೂ ಡ್ರೈವರ್ ನಿಂದ ರಿಯಾಜ್ ರ ಎಡಕಣ್ಣಿನ ಮೇಲ್ಬಾಗಕ್ಕೆ ಚುಚ್ಚಿದ್ದು, ರಿಯಾಜ್ ರವರು ಅಲ್ಲಿಂದ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದಾಗ ಪುನಃ ರಿಯಾಜ್ ರನ್ನು ಹಿಂಬಾಲಿಸಿಕೊಂಡು ಹೋಗಿ ಅಡ್ಡಗಟ್ಟಿ ಕೊಲ್ಲುವ ಉದ್ದೇಶದಿಂದ ಸ್ಕೂ ಡ್ರೈವರ್ ನಿಂದ ಪುನಃ ಚುಚ್ಚಿ ಮಾರಣಾಂತಿಕ ಹಲ್ಲೆ ನಡೆಸಿರುತ್ತಾನೆ.
ನಂತರ ರಿಯಾಜ್ ರನ್ನು ಉದ್ದೇಶಿಸಿ ಮಂಗಳೂರಿಗೆ ಬಾ ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದಾನೆ ಎಂದು ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುವ ರಿಯಾಜ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ದೂರಿ ಕೊಂಡಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 126(2) ,118(1),109, 352, 351(2)) BNS ರಂತೆ ಪ್ರಕರಣ ದಾಖಲಾಗಿದೆ.
