IMG-20250108-WA0025.jpg
Spread the love

ಬ್ರಹ್ಮಾವರ: ದಿನಾಂಕ:20-01-2026(ಹಾಯ್ ಉಡುಪಿ ನ್ಯೂಸ್) ಮಹಿಳೆ ಯೋರ್ವರ ಬಗ್ಗೆ ಅಪಪ್ರಚಾರ ನಡೆಸಿದ್ದಾರೆ ಎಂಬ ಕ್ಷುಲ್ಲಕ ಆರೋಪ ಹೊರಿಸಿ ವ್ಯಕ್ತಿ ಯೋರ್ವರಿಗೆ ನಾಲ್ವರು ಸೇರಿ ಗಂಭೀರ ಹಲ್ಲೆ ನಡೆಸಿರುವ ಘಟನೆ ಬ್ರಹ್ಮಾವರ ಚಾಂತಾರು ಗ್ರಾಮದಲ್ಲಿ ನಡೆದಿದೆ.

ತೆಂಕನಿಡಿಯೂರು ಕೊಜಕೋಲಿ ಬಬ್ಬು ಸ್ಥಾನ ಹಿಂಬದಿ ನಿವಾಸಿ ಕಿರಣ್ ಪಿಂಟೋ (49) ಎಂಬವರು ಆರೋಪಿ ಪ್ರವೀಣ್‌ ಮತ್ತು ಸುಜಿತ್‌ ಡಿಸೋಜಾ ರವರ ಪರಿಚಯಸ್ಥರಾಗಿದ್ದು, ಆರೋಪಿ ಸುಜಿತ್‌ ಡಿಸೋಜಾ ಮತ್ತು ಆರೊಪಿ ಸುಷ್ಮಾಗೌಡ ಇವರು ಪರಿಚಯಸ್ಥರಾಗಿದ್ದ ಕಾರಣ ಕಿರಣ್ ಪಿಂಟೋ ರವರ ಮನೆಗೆ ಬಂದು ಹೋಗುತ್ತಿದ್ದರು.

ದಿನಾಂಕ: 18/01/2026 ರಂದು ಮಧ್ಯಾಹ್ನ  ಪ್ರವೀಣ್‌ ನು ಕಿರಣ್ ಪಿಂಟೋ ರಿಗೆ ಪೋನ್‌ ಮಾಡಿ ಸುಷ್ಮಾ ಗೌಡ ನನ್ನನ್ನು ಬಿಟ್ಟು ಸುಜೀತನೊಂದಿಗೆ ಅನ್ಯೋನ್ಯವಾಗಿ ಇರುತ್ತಾಳೆ ಎಂದು  ಇಲ್ಲದ ಸಲ್ಲದ ವಿಚಾರವನ್ನು ನೀವು ಹೇಳಿರುತ್ತೀರ ಎಂದು ಕೇಳಿದ್ದು, ಅದಕ್ಕೆ ಕಿರಣ್ ಪಿಂಟೋ ರವರು ಇಲ್ಲವೆಂದು ಹೇಳಿ ತಾನು ಬ್ರಹ್ಮಾವರಕ್ಕೆ ಬಂದು ಕೊರಗಜ್ಜನ ಮುಂದೆ ಪ್ರಮಾಣ ಮಾಡುತ್ತೇನೆಂದು ಹೇಳಿ ಬ್ರಹ್ಮಾವರದ ಚಾಂತಾರು ಗ್ರಾಮದ ಕುಬೇರ ಬಾರ್‌ ಬಳಿ  ಬಂದಿರುತ್ತಾರೆ.

ಅದೇ ಸ್ಥಳಕ್ಕೆ ಕಾರಿನಲ್ಲಿ ಸುಜೀತ್‌ ಡಿಸೋಜಾ, ಸುಷ್ಮಾ ಗೌಡ ಹಾಗೂ ಅಶ್ವಿನಿ ನಾಯ್ಕ ಇವರು ಬಂದಿದ್ದು, ಸ್ಥಳದಲ್ಲಿ ಆರೋಪಿ ಪ್ರವೀಣ್‌ ಕೂಡ ಇದ್ದನು. ಕಿರಣ್ ಪಿಂಟೋ ರವರು ಪ್ರವೀಣನ ಬಳಿ ಹೋಗಿ ಸುಷ್ಮಾ ಇವರಲ್ಲಿ ಪ್ರವೀಣನ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದು, ಆವಾಗ ಸುಜೀತ್‌ ಮತ್ತು ಸುಷ್ಮಾಗೌಡ ಕಿರಣ್ ಪಿಂಟೋ ರವರ ಕೈ ಹಿಡಿದುಕೊಂಡಿದ್ದು, ಸ್ಥಳದಲ್ಲಿದ್ದ ಪ್ರವೀಣ ಕಾರಿನಿಂದ ಸ್ಟೀಲ್‌ ರಾಡ್‌ ತೆಗೆದು ಸ್ಟೀಲ್‌ ರಾಡ್‌ ನಿಂದ ಕಿರಣ್ ಪಿಂಟೋ ರವರ ಎಡ ಭುಜಕ್ಕೆ ಹೊಡೆದಿರುತ್ತಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಕಿರಣ್ ಪಿಂಟೋ ತಿಳಿಸಿದ್ದಾರೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಕಲಂ:118(1) RW 3(5)BNS ರಂತೆ ಪ್ರಕರಣ ದಾಖಲಾಗಿದೆ.

error: No Copying!