ಬ್ರಹ್ಮಾವರ: ದಿನಾಂಕ 20-01-2026 (ಹಾಯ್ ಉಡುಪಿ ನ್ಯೂಸ್) ಸಂಬಂಧಿಕರೋರ್ವರನ್ನು ಹುಡುಕಿ ಕೊಂಡು ಬಂದ ಮಹಿಳೆ ಯರೀರ್ವರಿಗೆ ಇಬ್ಬರು ವ್ಯಕ್ತಿಗಳು ಅವಾಚ್ಯವಾಗಿ ಬೈದು ದೂಡಿ ಹಾಕಿ ಹಲ್ಲೆ ನಡೆಸಿದ್ದಾರೆ ಎಂದು ಅಶ್ವಿನಿ ನಾಯ್ಕ್ ಎಂಬವರು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಕೊಡವೂರು, ಲಕ್ಷ್ಮೀ ನಗರ ನಿವಾಸಿ ಅಶ್ವಿನಿ ನಾಯ್ಕ್,(33) ಎಂಬವರು ತನ್ನ ಸ್ನೇಹಿತೆಯಾದ ಸುಷ್ಮಾಗೌಡ ರವರ ಜೊತೆ ಅವರ ಮಾವನ ಮಗನಾದ ಪ್ರವೀಣ್ ರವರನ್ನು ಹುಡುಕಿಕೊಂಡು ಬ್ರಹ್ಮಾವರ ಪೊಲೀಸ್ ಠಾಣಾ ಸರಹದ್ದಿನ ಚಾಂತಾರು ಗ್ರಾಮದ ಬ್ರಹ್ಮಾವರದಲ್ಲಿರುವ ಕುಬೇರಾ ಬಾರ್ ಎದುರು ಬಂದು ಅಲ್ಲಿ ಪ್ರವೀಣ್ ರವರನ್ನು ಹುಡುಕುತ್ತಿದ್ದಾಗ ರಾತ್ರಿ 9:30 ಗಂಟೆಯ ಸಮಯಕ್ಕೆ ಅಲ್ಲಿಯೇ ಇದ್ದ ಆರೋಪಿ ಕಿರಣ್ ಪಿಂಟೋ ಎಂಬವನು ಪ್ರವೀಣ್ ಡಿಕ್ರೋಜ್ ಎಂಬವನ ಜೊತೆ ಸೇರಿಕೊಂಡು ಅಶ್ವಿನಿ ನಾಯ್ಕ್ ಹಾಗೂ ಸುಷ್ಮಾ ಗೌಡ ರವರ ಬಳಿ ಬಂದು “ನಾನೇನು ನಿಮ್ಮ ಬಗ್ಗೆ ಯಾವ ವಿಚಾರವನ್ನು ಕೆಟ್ಟದ್ದಾಗಿ ಹೇಳುತ್ತಿಲ್ಲ” ಅಂದಾಗ ಅದಕ್ಕೆ ಅಶ್ವಿನಿ ನಾಯ್ಕ್ ಹಾಗೂ ಸುಷ್ಮಾ ಗೌಡರವರು ಆರೋಪಿಗೆ ನೀವು ಮಾತನಾಡಿರುವ ವಿಷಯವು ನಮ್ಮಲ್ಲಿ ವಾಯ್ಸ್ ರೆಕಾರ್ಡ್ ಇರುತ್ತದೆ ಎಂದು ಹೇಳಿ ಅದನ್ನು ಕೇಳಿಸುವ ಸಂಧರ್ಭ ಆರೋಪಿ ಕಿರಣ್ ಪಿಂಟೋ ಇಬ್ಬರಿಗೂ ಅವಾಚ್ಯ ಶಬ್ದಗಳಿಂದ ಬೈದಿರುತ್ತಾನೆ.
ಆಗ ಅಶ್ವಿನಿ ನಾಯ್ಕ್ ಅವರು ಹುಡುಕಿಕೊಂಡು ಬಂದ ಪ್ರವೀಣ್ ರವರನ್ನು ಎಬ್ಬಿಸಲು ಹೋದಾಗ ಆರೋಪಿ ಕಿರಣ್ ಪಿಂಟೋ ಪ್ರವೀಣ ನಿಗೆ ತುಳಿಯಲು ಹೋಗುವ ಸಂಧರ್ಭದಲ್ಲಿ ಅಶ್ವಿನಿ ನಾಯ್ಕ್ ರವರು ಹಾಗೂ ಸುಷ್ಮಾ ಗೌಡ ಅವರು ಬಿಡಿಸಲು ಹೋದಾಗ ಆರೋಪಿ ಕಿರಣ್ ಪಿಂಟೋ ಅಶ್ವಿನಿ ನಾಯ್ಕ್ ರವರನ್ನು ಹಾಗೂ ಸುಷ್ಮಾ ಗೌಡ ಅವರನ್ನು ಕೆಳಗೆ ಬೀಳಿಸಿ ಹಾಕಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಅಶ್ವಿನಿ ನಾಯ್ಕ್ ದೂರಿ ಕೊಂಡಿದ್ದಾರೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಕಲಂ: 115(2),74,76 BNS ರಂತೆ ಪ್ರಕರಣ ದಾಖಲಾಗಿದೆ.
