ಕೋಟ: ದಿನಾಂಕ:17-01-2026(ಹಾಯ್ ಉಡುಪಿ ನ್ಯೂಸ್) ಚಿತ್ರಪಾಡಿ ಗ್ರಾಮದ ಬಸ್ ನಿಲ್ದಾಣದ ಬಳಿ ಕಾರಿನಲ್ಲಿ ಬಂದು ದಿನ ಕಳ್ಳತನ ನಡೆಸಲು ಹೊಂಚು ಹಾಕುತ್ತಿದ್ದ ಐವರು ಯುವಕರನ್ನು ಕೋಟ ಪೊಲೀಸ್ ಠಾಣೆಯ ಪಿಎಸ್ಐ ಪ್ರವೀಣ್ ಕುಮಾರ್ ಆರ್ ಅವರು ಬಂಧಿಸಿದ್ದಾರೆ.
ಕೋಟ ಪೊಲೀಸ್ ಠಾಣೆಯ ಪಿಎಸ್ಐ ಪ್ರವೀಣ ಕುಮಾರ್ ಆರ್ ರವರು ದಿನಾಂಕ: 17.01.2026 ರಂದು ಬೆಳಗಿನ ಜಾವ ಠಾಣೆಯ ಸಿಬ್ಬಂದಿಯವರ ಜೊತೆ ಸಾಲಿಗ್ರಾಮ ಕಡೆಯಿಂದ ಠಾಣೆಯ ಕಡೆಗೆ ರಾ. ಹೆ 66 ರ ರಸ್ತೆಯಲ್ಲಿ ಬರುತ್ತಿರುವಾಗ ಸಮಯ ಸುಮಾರು 2:30 ಗಂಟೆಗೆ ಚಿತ್ರಪಾಡಿ ಗ್ರಾಮದ ಪರಿವರ್ತನ ಬಿಲ್ಡಿಂಗ್ ಬಳಿ ಇರುವ ಬಸ್ಸು ನಿಲ್ದಾಣದ ಬಳಿ ಕಪ್ಪು ಬಣ್ಣದ ರಿಡ್ಞ್ ಕಾರು ನಿಂತಿದ್ದು ಕಾರಿನ ಹೊರಗೆ 3 ಜನ ಅನುಮಾನಾಸ್ಪದವಾಗಿ ನಿಂತುಕೊಂಡಿರುವುದು ಪಿಎಸ್ಐ ಅವರಿಗೆ ಕಂಡು ಬಂದಿರುತ್ತದೆ.
ಪೊಲೀಸರು ಕಾರಿನ ಬಳಿ ಹೋದಾಗ ಕಾರಿನ ಹೊರಗೆ ನಿಂತಿದ್ದ ವ್ಯಕ್ತಿಯನ್ನು ಪೊಲೀಸರು ವಿಚಾರಿಸಿದಾಗ ಅವನು ಸರಿಯಾದ ಉತ್ತರ ನೀಡಿರುವುದಿಲ್ಲ. ಕಾರಿನ ಒಳಗೆ ನೋಡಿದಾಗ ಇಬ್ಬರು ವ್ಯಕ್ತಿಗಳು ಕುಳಿತುಕೊಂಡಿರುವುದು ಕಂಡು ಬಂದಿರುತ್ತದೆ. ಅವರುಗಳು ಸರಿಯಾಗಿ ಅವರು ಅಲ್ಲಿ ನಿಂತಿರುವುದೇಕೆ ಎಂಬ ಬಗ್ಗೆ ಸರಿಯಾದ ಮಾಹಿತಿ ತಿಳಿಸದ ಕಾರಣ ಪೊಲೀಸರು ಕಾರನ್ನು ಪರಿಶೀಲಿಸಿದಾಗ KA09.MA.7102 ಕಾರು ಆಗಿದ್ದು ಕಾರಿನ ಎದುರು ಎಡ ಬದಿಯ ಡ್ಯಾಶ್ ಬೋರ್ಡ್ ನಲ್ಲಿ ಎರಡು ಚೂರಿ ಇರುವುದು ಕಂಡು ಬಂದಿರುತ್ತದೆ. ಕಾರಿನ ಹಿಂದಿನ ಡಿಕ್ಕಿ ಪರಿಶೀಲಿಸಿದಾಗ ನೀರಿನಿಂದ ತೊಳೆದಿರುವುದು ಕಂಡು ಬಂದಿರುತ್ತದೆ. ಹಾಗೂ ಡಿಕ್ಕಿಯ ಡೋರಿನಲ್ಲಿ ರಕ್ತ ಅಂಟಿದ ಕಲೆಗಳ ಜೊತೆಗೆ ಯಾವುದೋ ಪ್ರಾಣಿಯ ಕೂದಲು ಅಂಟಿಕೊಂಡಿರುವುದು ಕಂಡು ಬಂದಿರುತ್ತದೆ. ಈ ಬಗ್ಗೆ ವಿಚಾರಿಸಿದಾಗ ಆರೋಪಿಗಳು ಈ ಹಿಂದೆ ಮಾಂಸಗೋಸ್ಕರ ಇದೇ ಕಾರಿನಲ್ಲಿ ದನ ಕಳ್ಳತನ ಮಾಡಿ ಅದನ್ನು ವಧೆ ಮಾಡಿ ಇದೇ ಕಾರಿನಲ್ಲಿ ತುಂಬಿಸಿಕೊಂಡು ಹೋಗಿ ಮಾಂಸವನ್ನು ಮಾರಾಟ ಮಾಡಿರುತ್ತೇವೆ. ಆ ಸಮಯ ಅಂಟಿದ ರಕ್ತದ ಕಲೆಗಳಾಗಿರುವುದಾಗಿ ತಿಳಿಸಿರುತ್ತಾರೆ.
ಹಾಗೂ ಇದೇ ಕಾರಿನಲ್ಲಿ ಪುನ: ದನ ಕಳ್ಳತನ ಮಾಡಿಕೊಂಡು ಹೋಗಲು ಈ ದಿನ ಕೋಟ ಕಡೆಗೆ ಬಂದಿರುವುದಾಗಿ 1) ಮಹಮ್ಮದ್ ಮುಫೀದ್ (22) ಹೂಡೆ ಕೆನರಾ ಬ್ಯಾಂಕ್ ಬಳಿ ಪಡುತೋನ್ಸೆ ಗ್ರಾಮ, ಉಡುಪಿ 2) ಮಹಮ್ಮದ್ ರಿಯಾನ್ (21) ಹೂಡೆ ಚೆಕ್ಕೆತೋಟ, ಪಡುತೋನ್ಸೆ ಗ್ರಾಮ, ಉಡುಪಿ 3) ಆದೀಬ್ ಅಹಮ್ಮದ್ (21) ಹೂಡೆ, ಕೆನರಾ ಬ್ಯಾಂಕ್ ಬಳಿ, ಪಡುತೋನ್ಸೆ ಗ್ರಾಮ, 4) ಸೈಯದ್ ಜೈನ್ (16) ಹೂಡೆ, ಕೆನರಾ ಬ್ಯಾಂಕ್ ಬಳಿ, ಪಡುತೋನ್ಸೆ ಗ್ರಾಮ, 5) ಮುಜಾಮಿಲ್ ಅಸಾಧಿ (17) ಹೂಡೆ, ಕೆನರಾ ಬ್ಯಾಂಕ್ ಬಳಿ, ಪಡುತೋನ್ಸೆ ಗ್ರಾಮ, ಇವರೆಲ್ಲವರು ತಿಳಿಸಿ ತಪ್ಪೋಪ್ಪಿಕೊಂಡಿರುತ್ತಾರೆ.
ಆದ್ದರಿಂದ ಆಪಾದಿತರುಗಳು ಜೊತೆಯಾಗಿ ಲಾಭಗೋಸ್ಕರ ದನವನ್ನು ಕಳ್ಳತನ ಮಾಡಿ ವಧೆ ಮಾಡಿ ಈ ಹಿಂದೆ ಮಾರಾಟ ಮಾಡಿದ್ದು ಮತ್ತೆ ಪುನ: ಸಂಘಟಿತರಾಗಿ ದನ ಕಳ್ಳತನ ಮಾಡಿ ವಧೆ ಮಾಡಲು ಬಂದಿರುವುದು ತಿಳಿದು ಬಂದಿರುವುದರಿಂದ ಸ್ಥಳದಲ್ಲಿ ಕಾರಿನಲ್ಲಿದ್ದ ಚೂರಿ-2 , ಕಪ್ಪು ಬಣ್ಣದ ರಿಡ್ಞ್ ಕಾರನ್ನು ಹಾಗೂ ಆರೋಪಿತರ ಬಳಿ ಇದ್ದ ಮೊಬೈಲ್ ಪೋನ್ -5, ನಗದು 3230/ ನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಕಲಂ: 303(2),112,3(5) BNS, ಮತ್ತು 4,8,12 ಕರ್ನಾಟಕ ಗೋಹತ್ಯಾ ನಿಶೇದ ಕಾಯ್ದೆ, ಮತ್ತು ಕಲಂ 11(1)(A) ಪ್ರಾಣಿ ಹಿಂಸೆ ತಡೆ ಕಾಯ್ದೆ ರಂತೆ ಪ್ರಕರಣ ದಾಖಲಾಗಿದೆ.
