ಕೊಲ್ಲೂರು: ದಿನಾಂಕ: 17/01/2026 (ಹಾಯ್ ಉಡುಪಿ ನ್ಯೂಸ್) ಕೆರಾಡಿ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಶರಾಬು ಸೇವನೆ ಮಾಡುತ್ತಿದ್ದ ಯುವಕನನ್ನು ಕೊಲ್ಲೂರು ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ವಿನಯ್ ಎಂ ಕೊರ್ಲಹಳ್ಳಿ ಅವರು ಬಂಧಿಸಿದ್ದಾರೆ.
ಕೊಲ್ಲೂರು ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ವಿನಯ್ ಎಂ ಕೊರ್ಲಹಳ್ಳಿ ಅವರು ಕೆರಾಡಿ ಗ್ರಾಮದಲ್ಲಿ ರೌಂಡ್ಸ್ ನಲ್ಲಿರುವಾಗ, ಕೆರಾಡಿ ಗ್ರಾಮದ ಆನಂತಕೊಡ್ಲು ಅಟೋರಿಕ್ಷಾ ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ವ್ಯಕ್ತಿ ಒರ್ವ ಅಕ್ರಮವಾಗಿ ಶರಾಬು ಸೇವನೆ ಮಾಡುತ್ತಿರುವ ಬಗ್ಗೆ ಸಾರ್ವಜನಿಕ ಮಾಹಿತಿ ಬಂದ ಮೇರೆಗೆ ಕೂಡಲೇ ಮಾಹಿತಿ ಬಂದ ಸ್ಥಳಕ್ಕೆ ದಾಳಿ ಮಾಡಿದ್ದಾರೆ.
ದಾಳಿ ಮಾಡಿದಾಗ ಮಾಹಿತಿ ಬಂದ ಸ್ಥಳ ದಲ್ಲಿ ಬೆಳ್ಳಾಲ ಕೇರಿ ಕೇರಾಡಿ ನಿವಾಸಿ ಮೇಘರಾಜ್ (21) ಎಂಬವನು ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಶರಾಬು ಸೇವನೆ ಮಾಡಿರುತ್ತಾನೆ. ಆರೋಪಿಯ ವಶದಿಂದ ಕುಡಿದು ಖಾಲಿ ಮಾಡಿರುವ ಕಿಂಗ್ ಫಿಶರ್ ಬಿಯರ್ ಖಾಲಿ ಬಾಟಲ್ ನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಕಲಂ:15 (ಎ) ಕರ್ನಾಟಕ ಅಬಕಾರಿ ಕಾಯ್ಡೆಯಂತೆ ಪ್ರಕರಣ ದಾಖಲಾಗಿದೆ.
