ಪಡುಬಿದ್ರಿ: ದಿನಾಂಕ:15-01-2026 (ಹಾಯ್ ಉಡುಪಿ ನ್ಯೂಸ್) ಹಣದ ಅವಶ್ಯಕತೆ ಇದೆ ಎಂದು ನಂಬಿಸಿ ನಕಲಿ ಚಿನ್ನ ವನ್ನು ನೀಡಿ ಅಸಲಿ ಚಿನ್ನಾಭರಣ ಹಾಗೂ ನಗದು ಹಣದೊಂದಿಗೆ ವಂಚಕರೀರ್ವರು ಪರಾರಿಯಾದ ಪ್ರಕರಣ ಪಡುಬಿದ್ರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ವಿಜಯಪುರ ಜಿಲ್ಲೆ ಮುದ್ದೇಬಿಹಾಳ ನಿವಾಸಿ ಬಸಮ್ಮ (36) ಎಂಬವರು ಕಾರ್ಮಿಕಳಾಗಿದ್ದು, ದಿನಾಂಕ: 13.01.2026 ರಂದು ಮದ್ಯಾಹ್ನ ಕಾಪು ತಾಲೂಕು ನಡ್ಸಾಲು ಗ್ರಾಮದ ಪಡುಬಿದ್ರೆ ಹಳೇ ಅಂಚೆ ಕಚೇರಿ ಬಳಿ ರಸ್ತೆಯಲ್ಲಿ ಕಾಣಸಿಕ್ಕ ಸುಮಾರು 35 ರಿಂದ 40 ವರ್ಷ ಪ್ರಾಯದ ಹೆಂಗಸು ಹಾಗೂ ಸುಮಾರು 40 ವರ್ಷರಿಂದ 45 ವರ್ಷ ಪ್ರಾಯದ ಗಂಡಸು ಬಸಮ್ಮ ರಿಗೆ ನಂಬಿಸಿ ಮೋಸ ಮಾಡುವ ಉದ್ದೇಶ ದಿಂದ ಕಪ್ಪು ದಾರದಲ್ಲಿ ಕಪ್ಪು ಮಣಿಗಳಿಂದ ಕೂಡಿದ ಮಧ್ಯದಲ್ಲಿ ತಾಳಿ ಇರುವ ಹಾಗೂ 9 ಲಕ್ಷ್ಮೀ ಪೆಂಟೆಂಟ್ ಇರುವ ಚಿನ್ನದಂತೆ ತೋರುವ ಸರವನ್ನು ಬಸಮ್ಮ ರಿಗೆ ತೋರಿಸಿ ಇದು ಚಿನ್ನದ ಸರ ಇದರಲ್ಲಿ 6 ಪವನ್ ಇದೆ ಹಣದ ತುರ್ತು ಆವಶ್ಯಕತೆ ಇದೆ ಎಂದು ನಂಬಿಸಿದ್ದಾರೆ.
ಅದನ್ನು ಬಸಮ್ಮ ರಿಗೆ ನೀಡಿ ಬಸಮ್ಮರಲ್ಲಿ ಇದ್ದ ಚಿನ್ನದ ಗುಂಡುಗಳಿರುವ ಕರಿಮಣಿಯೊಂದಿಗೆ ಪೋಣಿಸಿದ ಚಿನ್ನದ ತಾಳಿ ಸರ ಹಾಗೂ ಕಿವಿಯ ಬೆಂಡೋಲೆಯ ಮಾಟಿ ಒಂದು ಜೊತೆ ಒಟ್ಟು ಸುಮಾರು 2 ಪವನ್ ತೂಕದ ಸುಮಾರು 1,50,000/- ರೂ ಮೌಲ್ಯದ ಬಂಗಾರದ ಒಡವೆಗಳನ್ನು ಹಾಗೂ ನಗದು ರೂ 6000/ ರೂವನ್ನು ಪಡೆದುಕೊಂಡಿದ್ದಾರೆ .
ಬಸಮ್ಮ ರವರು ಆರೋಪಿಗಳಿಂದ ಪಡೆದ ಸರವನ್ನು ಪರಿಶೀಲಿಸಲು ಹತ್ತಿರದ ಬಂಗಾರದ ಅಂಗಡಿಗೆ ಹೋದಾಗ ಆರೋಪಿಗಳಿಂದ ಪಡೆದ ಸರವು ನಕಲಿ ಎಂದು ತಿಳಿದು ವಾಪಾಸು ಬರುವಷ್ಟರಲ್ಲಿ ಆರೋಪಿಗಳು ಬಸಮ್ಮ ರಿಂದ ಪಡೆದ ಚಿನ್ನದ ಸರ ಹಾಗೂ ನಗದಿನೊಂದಿಗೆ ಪರಾರಿಯಾಗಿ ಬಸಮ್ಮ ರಿಗೆ ನಂಬಿಕೆ ದ್ರೋಹ ಎಸಗಿ ಮೋಸ ಮಾಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಬಸಮ್ಮ ತಿಳಿಸಿದ್ದಾರೆ.
ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಕಲಂ: 316(2), 318(2),(4), 319(1)(2) ಜೊತೆಗೆ 3(5) BNS ರಂತೆ ಪ್ರಕರಣ ದಾಖಲಾಗಿದೆ.
