ಉಡುಪಿ: ದಿನಾಂಕ:14-01-2026(ಹಾಯ್ ಉಡುಪಿ ನ್ಯೂಸ್) ವಾಟ್ಸಪ್ ನಲ್ಲಿ ಪರಿಚಯ ಗೊಂಡ ವ್ಯಕ್ತಿ ಯೋರ್ವರು ನಂಬಿಸಿ 1,60,000 ರೂಪಾಯಿ ವಂಚನೆ ನಡೆಸಿದ್ದಾರೆ ಎಂದು ಅಬ್ರಾಹಂ ದೇವದಾಸ್ (58) ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.
ಉಡುಪಿ ಕಿನ್ನಿಮುಲ್ಕಿ ನಿವಾಸಿ ಅಬ್ರಾಹಂ ದೇವದಾಸ್ (58) ಎಂಬವರ ಮಗ ಸ್ಯಾಮ್ ಅವಿನ್ ಎಂಬವರಿಗೆ ಯಾರೋ ಅಪರಿಚಿತ ವ್ಯಕ್ತಿಯು ವಾಟ್ಸಪ್ ನಲ್ಲಿ ಪರಿಚಯವಾಗಿ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ ಹೆಚ್ಚಿನ ಲಾಭವನ್ನು ಗಳಿಸಬಹುದು ಎಂದು ಹೇಳಿರುತ್ತಾನೆ.
ಇದನ್ನು ನಂಬಿದ ಸ್ಯಾಮ್ ಅವಿನ್ ರವರು ದಿನಾಂಕ :13/01/2026 ರಂದು ತನ್ನ ಖಾತೆಯಿಂದ 1 ಲಕ್ಷ ರೂಪಾಯಿ ಹಾಗೂ ಇನ್ನೊಂದು ಖಾತೆ ಯಿಂದ 60,000/- ರೂಪಾಯಿ ಒಟ್ಟಾರೆಯಾಗಿ 1,60,000/- ರೂಪಾಯಿಗಳನ್ನು ವರ್ಗಾವಣೆ ಮಾಡಿರುತ್ತಾರೆ.
ಆನಂತರ ಆರೋಪಿಯು ಸ್ಯಾಮ್ ಅವಿನ್ ರಿಗೆ ಈವರೆಗೂ ಯಾವುದೇ ಲಾಭದ ಹಣವನ್ನು ವಾಪಸ್ಸು ನೀಡದೇ ಇದ್ದು ಹಾಗೂ ಹೂಡಿಕೆ ಮಾಡಿದ ಹಣವನ್ನು ವಾಪಸ್ಸು ನೀಡದೇ ಆನ್ ಲೈನ್ ನಲ್ಲಿ ಮೋಸ ಮಾಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 318(4) BNS 66(D) IT act ರಂತೆ ಪ್ರಕರಣ ದಾಖಲಾಗಿದೆ.
