ಕಾರ್ಕಳ: ದಿನಾಂಕ: 11-01-2026 (ಹಾಯ್ ಉಡುಪಿ ನ್ಯೂಸ್)
ಉಡುಪಿ ಜಿಲ್ಲೆಯ ಕಾರ್ಕಳದ ಬೈಲೂರು ಸಮೀಪ ಇರುವ ಪರಶುರಾಮ ಥೀಮ್ ಪಾರ್ಕ್ ಇಲ್ಲಿನ ಉಮಿಕಲ್ ಬೆಟ್ಟದ ಮೇಲಿರುವ ಕಟ್ಟಡದ ಮೇಲ್ಚಾವಣಿಗೆ ಹಾಕಿದ್ದ ತಾಮ್ರದ ಹೊದಿಕೆ ಕಳುವು ಮಾಡಿದ್ದ ಪ್ರಕರಣ
ಕಳ್ಳತನ ನಡೆಸಿದ್ದ ಆರೋಪಿಗಳಾದ ತಲಪಾಡಿ ಕಳವಾರಿನ ಆರಿಫ್ ಮತ್ತು ಕಾವೂರಿನ ಅಬ್ದುಲ್ ಹಮೀದ್ ಬಂಧಿತ ಆರೋಪಿಗಳಾಗಿದ್ದಾರೆ.
ತಲೆಮರಿಸಿಕೊಂಡಿರುವ ಇತರ ಆರೋಪಿಗಳ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಜನವರಿ ಮೂರರಂದು ಥೀಂ ಪಾರ್ಕ್ ಕಟ್ಟಡದ ಮುಖ್ಯ ಬಾಗಿಲು ಒಡೆಯಲಾಗಿತ್ತು, ಮೇಲ್ಛಾವಣಿಗೆ ಅಳವಡಿಸಿದ್ದ ತಾಮ್ರದ ಹೊದಿಕೆ ಕಳುವಾಗಿತ್ತು.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿ ಇಬ್ಬರು ಕಳ್ಳರನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ.
ಬಂದಿತರಿಂದ ಕಳುವು ಮಾಡಲಾದ 45,000 ಮೌಲ್ಯದ 51 ಕೆಜಿ ತಾಮ್ರದ ಶೀಟು ವಶಕ್ಕೆ ಪಡೆದುಕೊಂಡಿದ್ದಾರೆ.
ಕಳುವಿಗೆ ಬಳಸಿದ ವಾಹನ ಸೇರಿದಂತೆ ಒಟ್ಟು 2.18 ಲಕ್ಷ ಮೌಲ್ಯದ ಸ್ವತ್ತು ವಶಪಡಿಸಲಾಗಿದೆ.
ಆರೋಪಿ ಆರಿಫ್ ವಿರುದ್ಧ ಪಡುಬಿದ್ರೆ ,ಉಡುಪಿ, ಬ್ರಹ್ಮಾವರ, ಕಾರ್ಕಳ , ಮೂಲ್ಕಿ, ಮೂಡುಬಿದ್ರೆ ಠಾಣೆಗಳಲ್ಲಿ 9ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.
ಮತ್ತೋರ್ವ ಆರೋಪಿ, ಹಮೀದ್ ವಿರುದ್ಧ ಬಜೆಪೆ ,ಮೂಡುಬಿದರೆ ಠಾಣೆಗಳಲ್ಲಿ ಪ್ರಕರಣಗಳಿವೆ . ಪರಶುರಾಮ ಥೀಮ್ ಪಾರ್ಕ್ ಕಳುವು ಪ್ರಕರಣ ಭಾರೀ ವಿವಾದಕ್ಕೆ ಕಾರಣವಾಗಿತ್ತು.



