FB_IMG_1767455948909.jpg
Spread the love

ಉಡುಪಿ: ದಿನಾಂಕ:03-01-2026 (ಹಾಯ್ ಉಡುಪಿ ನ್ಯೂಸ್)ಭೀಮಾ ಜ್ಯುವೆಲ್ಲರ್ಸ್ ಉಡುಪಿಯವರು ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಗೆ ಬೋಲೇರೋ ವಾಹನವನ್ನು ನೀಡಿದ್ದು ಸಮಾರಂಭದಲ್ಲಿ ಸೇಲ್ಸ್ ಮತ್ತು ಅಪರೇಶನ್ ಹೆಡ್ ಗುರು ಪ್ರಸಾದ್ ಅವರು ಹೊಸ ವಾಹನಕ್ಕೆ ಹಸಿರು ನಿಶಾನೆ ತೋರಿ, ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಹರಿರಾಮ್ ಶಂಕರ್ ರವರಿಗೆ ಕೀಲಿ ಕೈ ಹಸ್ತಾಂತರ ಮಾಡಿದರು. ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಸುಧಾಕರ್ ಎಸ್ ನಾಯ್ಕ, ಪೊಲೀಸ್ ಉಪಾಧೀಕ್ಷಕರು ಪ್ರಭು ಡಿ.ಟಿ, ಜಿಲ್ಲಾ ಸಶಸ್ತ್ರ ಮೀಸಲು ಪಡೆ ಪೊಲೀಸ್ ನಿರೀಕ್ಷಕರು ರವಿ ಕುಮಾರ್ ಸೇರಿದಂತೆ ಪೊಲೀಸ್ ಹಾಗೂ ಭೀಮಾ ಜ್ಯುವೆಲ್ಲರ್ಸ್‌ನ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

error: No Copying!