ಹಿರಿಯಡ್ಕ: ದಿನಾಂಕ:03-01-2026 (ಹಾಯ್ ಉಡುಪಿ ನ್ಯೂಸ್) ಅಂಜಾರು ಕಡೆಯಿಂದ ಹಿರಿಯಡ್ಕ ಮುಖ್ಯ ರಸ್ತೆಯಲ್ಲಿ ಅಕ್ರಮ ಮರಳು ಸಾಗಾಣಿಕೆ ನಡೆಸುತ್ತಿದ್ದ ಟಿಪ್ಪರ್ ಚಾಲಕನನ್ನು ಹಿರಿಯಡ್ಕ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ವಿಠಲ ಮಲವಡ್ಕರ್ ಅವರು ಬಂಧಿಸಿದ್ದಾರೆ.
ಹಿರಿಯಡ್ಕ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ವಿಠಲ ಮಲವಡ್ಕರ್ ಅವರು ಠಾಣಾ ಸಿಬ್ಬಂದಿಯವರೊಂದಿಗೆ ಅಂಜಾರು ಗ್ರಾಮದ ರಿಂಗ್ ರೋಡ್ ಬಳಿ ವಾಹನ ತಪಾಸಣೆ ನಡೆಸುತ್ತಿರುವಾಗ ಅಂಜಾರು ರಿಂಗ್ ರೋಡ್ ಕಡೆಯಿಂದ ಉಡುಪಿ ಹಿರಿಯಡ್ಕ ಮುಖ್ಯ ರಸ್ತೆಯ ಕಡೆಗೆ KA-18-D-242 ನೇ ಟಿಪ್ಪರ್ ಲಾರಿಯನ್ನು ಅದರ ಚಾಲಕ ಶೇಖ್ ಮಹಮ್ಮದ್ ನದೀಮ್ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದು ಪೊಲೀಸರು ಲಾರಿಯನ್ನು ತಪಾಸಣೆ ಮಾಡಿದಾಗ ಲಾರಿಯಲ್ಲಿ ಸುಮಾರು 3 ಯುನಿಟ್ ನಷ್ಟು ಮರಳು ತುಂಬಿದ್ದು ಅದರ ಅಂದಾಜು ಮೌಲ್ಯ ಸುಮಾರು 13000/- ರೂಪಾಯಿ ಆಗಿದ್ದು ಲಾರಿ ಚಾಲಕನು ಯಾವುದೇ ಪರವಾನಿಗೆ ಇಲ್ಲದೇ ಲಾಭಗಳಿಸುವ ಉದ್ದೇಶಗೋಸ್ಕರ ಚೇರ್ಕಾಡಿ ಕನ್ನಾರು ಪೆಟ್ರೋಲ್ ಬಂಕ್ ಹತ್ತಿರ ಸಂಗ್ರಹಿಸಿಟ್ಟಿದ್ದ ಮರಳನ್ನು ಕಳವು ಮಾಡಿ KA-18-D-242 ನೇ ಟಿಪ್ಪರ್ ಲಾರಿಯಲ್ಲಿ ಸಾಗಾಟ ಮಾಡುತ್ತಿ ಚಾಲಕನನ್ನು ಬಂಧಿಸಿ ಲಾರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ U/S 303(2) BNS ACT 4(1-a) 21(4) MMRD Act 1957 US 66 R/W 192 (A) IMV Act ರಂತೆ ಪ್ರಕರಣ ದಾಖಲಾಗಿದೆ.
