ಉಡುಪಿ : ದಿನಾಂಕ:03-01-2026 (ಹಾಯ್ ಉಡುಪಿ ನ್ಯೂಸ್) ಜಿಲ್ಲೆಯಲ್ಲಿ ದಿನಾಂಕ 11-01-2026 ರಂದು ಜಿಲ್ಲಾಡಳಿತ, NEB Sports ಮತ್ತು ಉಡುಪಿ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಶನ್ ಇವರ ಸಹಯೋಗದೊಂದಿಗೆ ಹೆರಿಟೇಜ್ ರನ್ ಅಂಗವಾಗಿ ನಡೆಸಲಾಗುವ ಮ್ಯಾರಥಾನ್ ಸ್ಪರ್ಧೆಯ ಪೂರ್ವಭಾವಿ ಸಭೆಯು ಇಂದು ನಡೆಯಿತು .
42ಕಿ.ಮೀ., 21ಕಿ.ಮೀ., 10ಕಿ.ಮೀ., 5ಕಿ.ಮೀ. ಮ್ಯಾರಥಾನ್ ಸ್ಪರ್ಧೆಯಲ್ಲಿ ಎಲ್ಲರಿಗೂ ಮುಕ್ತ ಅವಕಾಶವನ್ನು ನೀಡಲಾಗಿದೆ. ಹಾಗೂ ಜಿಲ್ಲೆಯ ಶಾಲಾ ಮಕ್ಕಳಿಗಾಗಿ 3k ಮತ್ತು 5k ಓಟವನ್ನು ಕೂಡಾ ಹಮ್ಮಿಕೊಳ್ಳಲಾಗಿರುತ್ತದೆ. ವಿಜೇತರಿಗೆ ನಗದು ಬಹುಮಾನ ಮತ್ತು ಭಾಗವಹಿಸುವ ಎಲ್ಲರಿಗೂ ಟೀ ಶರ್ಟ್ ನೀಡಲಾಗುವುದು. ಹಾಗಾಗಿ ಜಿಲ್ಲೆಯ ನಾಗರಿಕರು ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮ್ಯಾರಥಾನ್ ಸ್ಪರ್ಧೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿಗಳು ಹೇಳಿದರು.
