IMG_20251226_220942.jpg
Spread the love

ಪಡುಬಿದ್ರಿ: ದಿನಾಂಕ:26-12-2025(ಹಾಯ್ ಉಡುಪಿ ನ್ಯೂಸ್) ಹೆಜಮಾಡಿಯ ಶ್ರೀ ಬ್ರಹ್ಮ ಬೈದರ್ಕಳ ಗರೊಡಿಯ ನೇಮೋತ್ಸವದ ಜನಜಂಗುಳಿಯ ನಡುವೆ ವ್ರಧ್ಧೆಯೋರ್ವರ ಕುತ್ತಿಗೆ ಯಿಂದ ಮೂವರು ಕಳ್ಳಿಯರು ಚಿನ್ನದ ಸರ ಎಗರಿಸಿದ ಘಟನೆ ನಡೆದಿದೆ.

ಕಾಪು ತಾಲೂಕು ಹೆಜಮಾಡಿ ಗ್ರಾಮದ ನಿವಾಸಿ ಕಮಲ (78) ಎಂಬವರು ದಿನಾಂಕ 24/12/2025 ರಂದು ಮನೆಯ ಬಳಿಯ ಹೆಜಮಾಡಿಯ ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ನೇಮೋತ್ಸವಕ್ಕೆ ಮನೆಯಿಂದ ಮೂರು ಪವನ್‌ ತೂಕದ ಚಿನ್ನದ ಸರವನ್ನು ಕುತ್ತಿಗೆಗೆ ಹಾಕಿಕೊಂಡು ತನ್ನ ಮಗಳಾದ ಸುಮತಿ, ಅಳಿಯ ವಾಸು ಸುವರ್ಣ, ಮೊಮ್ಮಗಳಾದ ತೇಜಶ್ರೀ ರವರೊಂದಿಗೆ ತೆರಳಿ ಅಲ್ಲಿ ದೈವದ ದರ್ಶನ ಮಾಡಿ ಅಲ್ಲಿಯೇ ಇರುವಾಗ ಅಲ್ಲಿಗೆ ಬಂದ ಅವರ ಸಂಬಂದಿ ಶಾರದಾ ಪೂಜಾರಿಯವರು ಕಮಲರವರ ಕುತ್ತಿಗೆಯಲ್ಲಿ ಚಿನ್ನದ ಸರ ಇಲ್ಲದ ಬಗ್ಗೆ ತಿಳಿಸಿದ್ದು  ಕಮಲರವರು ಹಾಗೂ ಮನೆಯವರು ಸೇರಿ ಗರಡಿ ಸುತ್ತಮುತ್ತ ಹುಡುಕಾಡಿದಾಗ ಎಲ್ಲಿಯೂ ಸಿಗದೇ ಇದ್ದು ಮನೆಯಲ್ಲಿ ಇರುವಾಗ ತನಗೆ ಗರಡಿಯಲ್ಲಿ ಮೂರು ಅಪರಿಚಿತ ಮಹಿಳೆಯರು ಸಿಕ್ಕಿದ್ದು ಅವರೇ ತೆಗೆದಿರಬಹುದೆಂದು ಕಮಲರವರಿಗೆ ಅನುಮಾನ ಬಂದ ಬಗ್ಗೆ ಮನೆಯವರಲ್ಲಿ ತಿಳಿಸಿದ್ದು ದಿನಾಂಕ 25/12/2025 ರಂದು  ದೇವಸ್ಥಾನದ ಆಡಳಿತ ಮಂಡಳಿಗೆ ವಿಷಯ ತಿಳಿಸಿ ಗರಡಿಯ ಸಿಸಿ ಕ್ಯಾಮರವನ್ನು ನೋಡಿದಾಗ ಮೂರು ಅಪರಿಚಿತ ಮಹಿಳೆಯರು ಕಮಲರವರಿಗೆ ಸಹಾಯ ಮಾಡುವ ನೆಪದಲ್ಲಿ ಕಮಲರವರ ಗಮನಕ್ಕೆ ಬಾರದ ಹಾಗೆ ಕುತ್ತಿಗೆಯಲ್ಲಿದ್ದ ಸುಮಾರು 3 ಪವನ್‌ ಚಿನ್ನದ ಸರವನ್ನು ಕಳವು ಮಾಡಿರುವುದು ಕಂಡು ಬಂದಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಕಲಂ: 303(2), 3(5) BNS ರಂತೆ ಪ್ರಕರಣ ದಾಖಲಾಗಿದೆ. 

error: No Copying!