ಶಂಕರನಾರಾಯಣ: ದಿನಾಂಕ 26/12/2025 (ಹಾಯ್ ಉಡುಪಿ ನ್ಯೂಸ್) ರಾಮನಹಕ್ಲು ಎಂಬಲ್ಲಿ ನ ಸರ್ಕಾರಿ ಹಾಡಿಯಲ್ಲಿ ಅಂದರ್ ಬಾಹರ್ ಜುಗಾರಿ ಆಡುತ್ತಿದ್ದ ಐವರನ್ನು ಶಂಕರನಾರಾಯಣ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಐ.ಆರ್. ಗಡ್ಡೇಕರ್ ಅವರು ಬಂಧಿಸಿದ್ದಾರೆ.
ಶಂಕರನಾರಾಯಣ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಐ.ಆರ್ ಗಡ್ಡೇಕರ್ ಅವರು ದಿನಾಂಕ:25-12-2025 ರಂದು 74 ನೇ ಉಳ್ಳೂರು ಕಡೆ ಗಸ್ತಿನಲ್ಲಿರುವಾಗ ಬೆಳಿಗ್ಗೆ ಹಳ್ಳಿಹೊಳೆ ಗ್ರಾಮದ ರಾಮನ ಹಕ್ಲು ಎಂಬಲ್ಲಿ ಸರ್ಕಾರಿ ಹಾಡಿಯಲ್ಲಿ ಐದಾರು ಜನರು ಸೇರಿಕೊಂಡು ಅಕ್ರಮವಾಗಿ ಹಣವನ್ನು ಪಣವಾಗಿಟ್ಟು ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದಾರೆ ಎಂಬುದಾಗಿ ಮಾಹಿತಿ ಬಂದಿದೆ .
ಮಾಹಿತಿ ಬಂದ ಕೂಡಲೇ ಮಾಹಿತಿ ಬಂದ ಸ್ಥಳಕ್ಕೆ ದಾಳಿ ನಡೆಸಿ ಸ್ಥಳದಲ್ಲಿ ಅಂದರ್ ಬಾಹರ್ ಜುಗಾರಿ ಆಡುತ್ತಿದ್ದವರನ್ನು ಬಂಧಿಸಿ ಅವರ ಹೆಸರು ವಿಳಾಸವನ್ನು ವಿಚಾರಣೆ ನಡೆಸಿದಾಗ 1) ಉಮೇಶ್ (26), ಹಳ್ಳಿಹೊಳೆ ಗ್ರಾಮ, ಬೈಂದೂರು, 2) ಗಣೇಶ್ (34),ಹಳ್ಳಿಹೊಳೆ ಗ್ರಾಮ, ಬೈಂದೂರು, 3) ಸಂತೋಷ (39), ಹಳ್ಳಿಹೊಳೆ ಗ್ರಾಮ, ಬೈಂದೂರು , 4) ಸುರೇಂದ್ರ (29), ಹಳ್ಳಿಹೊಳೆ ಗ್ರಾಮ, ಬೈಂದೂರು , 5) ರವಿ (41), ಹಳ್ಳಿಹೊಳೆ ಗ್ರಾಮ, ಬೈಂದೂರು ಎಂಬುದಾಗಿ ತಿಳಿಸಿದ್ದು ಇಸ್ಪೀಟ್ ಜುಗಾರಿ ಆಟ್ಟಕ್ಕೆ ಬಳಸಿದ್ದ 2300/- ನಗದು ಹಾಗೂ ಇಸ್ಪೀಟ್ ಎಲೆಗಳು, ಹಸಿರು ಬಣ್ಣದ ಮೆಶ್ ಸ್ವಾದೀನಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಕಲಂ: 87 KP Act ರಂತೆ ಪ್ರಕರಣ ದಾಖಲಾಗಿದೆ.
