images.jpeg
Spread the love

ಕಾಪು: ದಿನಾಂಕ 23/12/2025 (ಹಾಯ್ ಉಡುಪಿ ನ್ಯೂಸ್) ಮಟ್ಟು ಗ್ರಾಮದ ಪಾಂಗಾಳ ಮಟ್ಟು ಎಂಬಲ್ಲಿ ಪಾಪನಾಶಿನಿ ನದಿಯಿಂದ ಅಕ್ರಮವಾಗಿ ಮರಳನ್ನು ತೆಗೆದು ನದಿಯ ದಡದಲ್ಲಿ ಸಂಗ್ರಹಿಸಿಧ್ದ ಸ್ಥಳಕ್ಕೆ ಕಾಪು ಪೊಲೀಸ್ ಠಾಣೆಯ ಪಿಎಸ್ಐ ಶುಭಕರ ಅವರು ದಾಳಿ ನಡೆಸಿ ಮರಳನ್ನು ವಶಪಡಿಸಿಕೊಂಡಿದ್ದಾರೆ

ಕಾಪು ಪೊಲೀಸ್‌ ಠಾಣೆಯ ಪಿಎಸ್ಐ ಶುಭಕರ ಅವರು ದಿನಾಂಕ :23-12-2025 ರಂದು ಠಾಣೆಯಲ್ಲಿರುವ ಸಮಯ ರಾತ್ರಿ ಕಾಪು ತಾಲೂಕು ಮಟ್ಟು ಗ್ರಾಮದ, ಪಾಂಗಾಳ ಮಟ್ಟು ಎಂಬಲ್ಲಿರುವ ಪಾಪನಾಶಿನಿ ನದಿಯಿಂದ ಯಾರೋ ಕಳ್ಳರು ಅಕ್ರಮವಾಗಿ ಮರಳನ್ನು ತೆಗೆದು ನದಿಯ ದಡದಲ್ಲಿ ಸಂಗ್ರಹಿಸುತ್ತಿರುವ ಬಗ್ಗೆ ಸಾರ್ವಜನಿಕ ಮಾಹಿತಿ ಬಂದಿದೆ .

ಪಿಎಸ್ಐ ಅವರು ಕೂಡಲೇ ಮಾಹಿತಿ ಬಂದ ಸ್ಥಳಕ್ಕೆ ಹೋಗಿ ನೋಡಿದಾಗ ನದಿಯ ದಡದಲ್ಲಿ 10,000/- ಮೌಲ್ಯ ಬೆಲೆಬಾಳುವ 2 ಯೂನಿಟ್‌ ನಷ್ಟು ಮರಳನ್ನು ಅಕ್ರಮವಾಗಿ ನದಿಯಿಂದ ಸಂಗ್ರಹಿಸಿ ಇಟ್ಟಿರುವುದು ಕಂಡುಬಂದಿದ್ದು, ಜಾಗದ ಆಸುಪಾಸುವಿನಲ್ಲಿ ಹುಡುಕಾಡಿದ್ದು ನದಿಯಿಂದ ಮರಳನ್ನು ಕಳವು ಮಾಡಿ ದಡದಲ್ಲಿ ಸಂಗ್ರಹಿಸಿದ ಯಾವುದೇ ವ್ಯಕ್ತಿಗಳು ಕಂಡುಬಂದಿರುವುದಿಲ್ಲ, ಹಾಗೂ ಕಳವಿಗೆ ಬಳಸಿದ ಸಲಕರಣೆಗಳು ಸ್ಥಳದಲ್ಲಿ ಇರುವುದಿಲ್ಲ. ಯಾರೋ ಕಳ್ಳರು ತಮ್ಮ ಸ್ವಂತ ಲಾಭಕ್ಕಾಗಿ ಸರ್ಕಾರಿ ಸ್ವತ್ತಾದ ಖನಿಜವನ್ನು ಕಳವು ಮಾಡಿ ಮಾರಾಟ ಮಾಡಲು ನದಿಯಿಂದ ಸಂಗ್ರಹಣೆ ಮಾಡಿರುವುದು ಕಂಡುಬಂದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಕಾಪು ಪೊಲೀಸ್‌ ಠಾಣೆಯಲ್ಲಿ  ಕಲಂ: 303 (2) BNS & ಕಲಂ 4, 4(1ಎ), 21 MMDR ಕಾಯ್ದೆ ಯಂತೆ ಪ್ರಕರಣ ದಾಖಲಾಗಿದೆ .

error: No Copying!